ಪ್ರತಿ ನಿಮಿಷಕ್ಕೆ 1 ಕೋಟಿ ಪಡೆಯೋ 'ಮಹಾಲಕ್ಷ್ಮೀ' ಈಕೆ.. ಯಾಕೆ ಕೊಡ್ತಾರೆ ಅಷ್ಟೊಂದು? ಸೀಕ್ರೆಟ್ ಇದು..!

Published : May 24, 2026, 03:41 PM IST

ಸಾಮಾನ್ಯವಾಗಿ ಸ್ಟಾರ್ ನಟಿಯರು ಒಂದು ಇಡೀ ಸಿನಿಮಾಗೆ 5 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಊರ್ವಶಿ ರೌಟೇಲಾ ಲೆಕ್ಕಾಚಾರವೇ ಬೇರೆ. ಆದರೆ ಈಕೆ ಕೇವಲ ಒಂದು ಹಾಡಿನಲ್ಲಿ ಕುಣಿಯಲು ಪಡೆಯುವ ಸಂಭಾವನೆ 1 ನಿಮಿಷಕ್ಕೆ 1 ಕೋಟಿ.. ಅಷ್ಟೊಂದು ಏಕೆ? ಸೀಕ್ರೆಟ್ ಇಲ್ಲಿದೆ..

PREV
16

ಸಿನಿಮಾಗಳೆಲ್ಲಾ ಫ್ಲಾಪ್.. ಆದ್ರೂ ನಿಮಿಷಕ್ಕೆ 1 ಕೋಟಿ ಸಂಭಾವನೆ! ಯಾರು ಈ 'ಐಟಂ ಬಾಂಬ್' ಸುಂದರಿ?

ಬಾಲಿವುಡ್ ಅಂದ ಮೇಲೆ ಅಲ್ಲಿ ಗ್ಲಾಮರ್‌ಗೆ ಕೊರತೆಯಿಲ್ಲ. ಆದರೆ, ನಟಿಸಿದ ಸಿನಿಮಾಗಳೆಲ್ಲವೂ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದರೂ, ಬೇಡಿಕೆಯಲ್ಲಿ ಮಾತ್ರ ನಂಬರ್ ಒನ್ ಸ್ಥಾನದಲ್ಲಿರುವ ನಟಿ ಎಂದರೆ ಅದು ಊರ್ವಶಿ ರೌಟೇಲಾ! ಹೌದು, ಈಕೆಯ (Urvashi Rautela) ಸಿನಿಮಾಗಳು ಸೋತಿರಬಹುದು, ಆದರೆ ಈಕೆಯ 'ಐಟಂ ಸಾಂಗ್' ಕ್ರೇಜ್ ಮಾತ್ರ ಈಗ ಇಂಡಿಯಾದಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿದೆ.

26

ನಿಮಿಷಕ್ಕೆ ಒಂದು ಕೋಟಿ! ಇದು ಊರ್ವಶಿ 'ಪವರ್'

ಸಾಮಾನ್ಯವಾಗಿ ಸ್ಟಾರ್ ನಟಿಯರು ಒಂದು ಇಡೀ ಸಿನಿಮಾಗೆ 5 ರಿಂದ 10 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಊರ್ವಶಿ ರೌಟೇಲಾ ಲೆಕ್ಕಾಚಾರವೇ ಬೇರೆ. ಈಕೆ ಕೇವಲ ಒಂದು ಹಾಡಿನಲ್ಲಿ ಕುಣಿಯಲು ಪಡೆಯುವ ಸಂಭಾವನೆ ಕೇಳಿದರೆ ನೀವು ದಂಗಾಗೋದು ಗ್ಯಾರಂಟಿ. ಇತ್ತೀಚಿನ ವರದಿಗಳ ಪ್ರಕಾರ, ಊರ್ವಶಿ ಕೇವಲ ಮೂರು ನಿಮಿಷದ ಹಾಡಿಗಾಗಿ ಬರೋಬ್ಬರಿ 3 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. ಅಂದರೆ, ಈ ಸುಂದರಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಳ್ಳುವ ಪ್ರತಿ 'ಒಂದು ನಿಮಿಷಕ್ಕೆ ಒಂದು ಕೋಟಿ' ರೂಪಾಯಿ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಇಷ್ಟು ಕಡಿಮೆ ಅವಧಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಮೊದಲ ನಟಿ ಎಂಬ ಹೆಗ್ಗಳಿಕೆಗೆ ಊರ್ವಶಿ ಪಾತ್ರರಾಗಿದ್ದಾರೆ.

36

ಫ್ಲಾಪ್ ಸಿನಿಮಾಗಳ ಸರದಾರಿಯಾದ್ರೂ ಕುಗ್ಗದ ಡಿಮ್ಯಾಂಡ್!

ಊರ್ವಶಿ ರೌಟೇಲಾ 2013ರಲ್ಲಿ 'ಸಿಂಗ್ ಸಾಬ್ ದಿ ಗ್ರೇಟ್' ಚಿತ್ರದ ಮೂಲಕ ಕೇವಲ 19ನೇ ವಯಸ್ಸಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. 42 ಕೋಟಿ ಬಜೆಟ್‌ನಲ್ಲಿ ತಯಾರಾದ ಆ ಸಿನಿಮಾ ಕನಿಷ್ಠ ಗಳಿಕೆಯನ್ನೂ ಮಾಡದೆ ಸೋತು ಸುಣ್ಣವಾಯಿತು. ಅದಾದ ನಂತರ ಬಂದ 'ಸನಮ್ ರೇ' ಸೇರಿದಂತೆ ಆಕೆ ನಟಿಸಿದ ಯಾವ ಸಿನಿಮಾಗಳೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ. ನಾಯಕಿಯಾಗಿ ಊರ್ವಶಿ ಗೆಲ್ಲದಿದ್ದರೂ, 'ಐಟಂ ಕ್ವೀನ್' ಆಗಿ ಮಾತ್ರ ಸೂಪರ್ ಹಿಟ್ ಆದರು.

46

ಸೌತ್ ಇಂಡಿಯಾದಲ್ಲಿ ಊರ್ವಶಿ ಹವಾ!

ಬಾಲಿವುಡ್‌ಗಿಂತಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಊರ್ವಶಿ ಕ್ರೇಜ್ ಜೋರಾಗಿದೆ. ಮೆಗಾಸ್ಟಾರ್ ಚಿರಂಜೀವಿ ಅವರ 'ವಾಲ್ತೇರು ವೀರಯ್ಯ' ಚಿತ್ರದ ಹಾಡಿಗಾಗಿ ಈಕೆ 2 ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ. ಇನ್ನು ಇತ್ತೀಚೆಗೆ ರಾಮ್ ಪೋತಿನೇನಿ ನಟನೆಯ 'ಸ್ಕಂಧ' ಚಿತ್ರದ 'ಕಲ್ಟ್ ಮಾಮಾ' ಹಾಡಿನಲ್ಲಿ ಹೆಜ್ಜೆ ಹಾಕಲು 3 ಕೋಟಿ ರೂಪಾಯಿ ಪಡೆದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

56

ಕ್ರಿಕೆಟ್ ಮತ್ತು ಕಾಂಟ್ರವರ್ಸಿ!

ಬರಿ ಸಿನಿಮಾಗಳಷ್ಟೇ ಅಲ್ಲ, ಊರ್ವಶಿ ರೌಟೇಲಾ ತಮ್ಮ ವೈಯಕ್ತಿಕ ಜೀವನ ಮತ್ತು ವಿವಾದಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಟೀಮ್ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅವರ ಹೆಸರಿನ ಜೊತೆ ಊರ್ವಶಿ ಹೆಸರು ಥಳಕು ಹಾಕಿಕೊಂಡಾಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಯುದ್ಧವೇ ನಡೆದಿತ್ತು. "ಆರ್.ಪಿ (RP) ನನಗಾಗಿ ಹೋಟೆಲ್ ಲಾಬಿಯಲ್ಲಿ ಗಂಟೆಗಟ್ಟಲೆ ಕಾದಿದ್ದರು" ಎಂದು ಊರ್ವಶಿ ಹೇಳಿಕೆ ನೀಡಿದ್ದು ದೊಡ್ಡ ಮಟ್ಟದ ಟ್ರೋಲ್‌ಗೆ ಗುರಿಯಾಗಿತ್ತು. ಇದಕ್ಕೆ ಪಂತ್ ಕೂಡ ಪರೋಕ್ಷವಾಗಿ ತಿರುಗೇಟು ನೀಡಿದ್ದರು.

66

ಒಟ್ಟಿನಲ್ಲಿ, ಸಿನಿಮಾಗಳು ಹಿಟ್ ಆಗಲಿ ಅಥವಾ ಫ್ಲಾಪ್ ಆಗಲಿ, ಗ್ಲಾಮರ್ ಮತ್ತು ಸ್ಟೈಲ್ ಮೂಲಕ ಊರ್ವಶಿ ರೌಟೇಲಾ ಮಾತ್ರ ಪ್ರತಿ ನಿಮಿಷಕ್ಕೂ ಕೋಟಿ ಕೋಟಿ ಹಣ ಗಳಿಸುತ್ತಾ ಬಾಲಿವುಡ್‌ನ 'ಮಹಾಲಕ್ಷ್ಮಿ' ಎನಿಸಿಕೊಂಡಿದ್ದಾರೆ. ಸೋಲಲ್ಲೂ ಗೆಲುವು ಕಾಣುವುದು ಹೇಗೆ ಎಂಬುದಕ್ಕೆ ಈ ಸುಂದರಿಯೇ ಬೆಸ್ಟ್ ಎಕ್ಸಾಂಪಲ್!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories