'ಕಿಟ್ಟಿ ಪಾರ್ಟಿ'ಯಲ್ಲಿ ಕರ್ಣನ ನಿಧಿ ಮಾದಕ ಡಾನ್ಸ್​: ಕಾಂತಮ್ಮನೂ ಫುಲ್​ ಟೈಟ್​- ಏನಿದು ವಿಷ್ಯ

Published : Aug 04, 2026, 06:40 PM IST

'ಕರ್ಣ' ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ (ನಿಧಿ) ಮತ್ತು 'ಶ್ರಾವಣಿ ಸುಬ್ರಹ್ಮಣ್ಯ'ದ ಭವಾನಿ ಪ್ರಕಾಶ್ (ಕಾಂತಮ್ಮ) ಬಾರ್‌ನಲ್ಲಿ ಡಾನ್ಸ್ ಮಾಡುವ ದೃಶ್ಯವೊಂದು ವೈರಲ್ ಆಗಿದೆ. ಆದರೆ ಇದು ನಿಜ ಜೀವನದಲ್ಲಿ ಅಲ್ಲ, ಬದಲಿಗೆ "ಕಿಟ್ಟಿ ಪಾರ್ಟಿ ಸ್ಕ್ಯಾಮ್" ಎಂಬ ವೆಬ್ ಸರಣಿಯ ಭಾಗವಾಗಿದೆ.

PREV
16
ಕರ್ಣನ ನಿಧಿ

ಕರ್ಣ ಸೀರಿಯಲ್​ ಮೂಲಕ ಎಲ್ಲರ ಮನಸ್ಸನ್ನು ಗೆದ್ದು ಕದ್ದು ಬೀಗುತ್ತಿರುವವಳು ನಿಧಿ. ಕರ್ಣನ ಮುದ್ದು ಹೆಂಡತಿಯಾಗಿ, ಅತ್ತೆಗೆ ತಕ್ಕ ಸೊಸೆಯಾಗಿ, ವಿಲನ್​ ಮಾವನ ಅವನ ಭಾಷೆಯಿಂದಲೇ ಬುದ್ಧಿ ಕಲಿಸುತ್ತಿರುವ ಕ್ಯೂಟ್​ ನಿಧಿಯ ರಿಯಲ್​ ಹೆಸರು ಭವ್ಯಾ ಗೌಡ (Bhavya Gowda).

26
ನಿಧಿ-ಕಾಂತಮ್ಮ

ಇಂಥ ಭವ್ಯಾ ಗೌಡ ಫುಲ್​ ಟೈಟ್​ ಆಗಿ ಬಾರ್​ನಲ್ಲಿ ಡಾನ್ಸ್​ ಮಾಡ್ತಾಳೆ ಎಂದರೆ ನಂಬುವಿರಾ? ನಂಬೋದು ಏನು, ನಂಬಲೇಬೇಕು. ಅದಕ್ಕೆ ಸಾಕ್ಷಿಯಾಗಿದೆ ಈ ವಿಡಿಯೋ. ಬಾರ್​ನಲ್ಲಿ ಫುಲ್​ ಟೈಟ್​ ಆಗಿ ನಟಿ ಭವ್ಯಾ ಡಾನ್ಸ್​ ಮಾಡಿದ್ರೆ, ಶ್ರಾವಣಿ ಸುಬ್ರಹ್ಮಣ್ಯದ ಕಾಂತಮ್ಮನಾಗಿ ಎಲ್ಲರನ್ನೂ ನಗಿಸುತ್ತಿರೋ ಭವಾನಿ ಪ್ರಕಾಶ್ ಅವರೂ ಟೈಟ್​ ಆಗಿ ಭವ್ಯಾ ಜೊತೆ ಸ್ಟೆಪ್​ ಹಾಕಿದ್ದಾರೆ.

36
ವೆಬ್​ ಸರಣಿ

ಹಾಗೆಂದು ಇದೇನು ರಿಯಲ್​ ಅಲ್ಲ ಬಿಡಿ. "ಕಿಟ್ಟಿ ಪಾರ್ಟಿ ಸ್ಕ್ಯಾಮ್" ಎನ್ನುವ ವೆಬ್​ ಸರಣಿಯಲ್ಲಿ ಈ ನಟನೆ ಮಾಡಿದ್ದಾರೆ ನಟಿಯರಾದ ಭವ್ಯಾ ಗೌಡ ಮತ್ತು ಭವಾನಿ ಪ್ರಕಾಶ್​. ಸಾಮಾನ್ಯ ಮಿಡ್ಲ್​ಕ್ಲಾಸ್​ ಜೀವನದಿಂದ ಬೇಸತ್ತ ನಾಯಕಿ ಪಿಂಕಿ (ಭವ್ಯಾ ಗೌಡ) ಗೆ ದುಡ್ಡಿನ ಆಸೆ, ಹೇಗಾದರೂ ಮಾಡಿ ದುಡ್ಡು ಮಾಡುವ ಹಂಬಲ. ಅದರಿಂದ ವಿಲವಿಲ ಎಂದು ಒದ್ದಾಡುತ್ತಿರುತ್ತಾಳೆ.

46
ಮೋಸದ ಜಾಲ

ಕೊನೆಗೆ ಮೋಸದ ಜಾಲದಲ್ಲಿ ಸಿಲುಕುತ್ತಾಳೆ ಪಿಂಕಿ. ಹಣ ದ್ವಿಗುಣಗೊಳಿಸುವ, ಐಷಾರಾಮಿ ಜೀವನ ನೀಡುವುದಾಗಿ ಹೇಳಿದ ಜಾಲದಲ್ಲಿ ಹೊಕ್ಕ ಪಿಂಕಿ, ಬಾರ್​ನಲ್ಲಿ ಡಾನ್ಸರ್​ ಆಗ್ತಾಳೆ. ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಈ ಮೊದಲು ಅದೇ ಪಬ್​ನಲ್ಲಿ ಸಪ್ಲೈಯರ್​ ಆಗಿರುವಾಗ ತನ್ನನ್ನು ಇನ್​ಸಲ್ಟ್​ ಮಾಡಿದ ಮಹಿಳೆ (ಭವಾನಿ ಪ್ರಕಾಶ್​) ಎದುರಾಗುತ್ತಾರೆ.

56
ಜ್ಯೂಸ್​ನಲ್ಲಿ ಮದ್ಯ ಮಿಕ್ಸ್​

ತನ್ನನ್ನು ಇನ್​ಸಲ್ಟ್ ಮಾಡಿದ ಆಕೆಗೆ​ ಬುದ್ಧಿ ಕಲಿಸಲು ಜ್ಯೂಸ್​ನಲ್ಲಿ ಮದ್ಯ ಮಿಕ್ಸ್​ ಮಾಡಿ ಕೊಡುತ್ತಾಳೆ ಪಿಂಕಿ. ಬಳಿಕ ಅವಳೂ ಪಿಂಕಿಯ ಜೊತೆ ಫುಲ್​ ಟೈಟ್​ ಆಗಿ ನರ್ತಿಸುತ್ತಾಳೆ. ಇದರ ವಿಡಿಯೋ ಅನ್ನು ನಟಿ ಶೇರ್​ ಮಾಡಿಕೊಂಡಿದ್ದಾರೆ.

66
ಎಲ್ಲಿ ಸ್ಟ್ರೀಮಿಂಗ್​

ಬುಲೆಟ್ ಮೈಕ್ರೋ ಡ್ರಾಮಾ ಅಪ್ಲಿಕೇಶನ್‌ನಲ್ಲಿ ಇದು ಸ್ಟ್ರೀಮಿಂಗ್ ಆಗುತ್ತಿದೆ. ಇದು ಕಾಲ್ಪನಿಕ ಮೈಕ್ರೋ-ಡ್ರಾಮಾ ವೆಬ್ ಸರಣಿಯಾಗಿದೆ. ಬುಲೆಟ್ ಮೈಕ್ರೋ ಡ್ರಾಮಾ ಅಪ್ಲಿಕೇಶನ್‌ನಲ್ಲಿ ಇದು ಲಭ್ಯವಿದೆ ಎಂದು ನಟಿ ಸೋಷಿಯಲ್​ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories