Bhanupriya overcomming colourism: ತೆಲುಗಿನ ಓರ್ವ ಸ್ಟಾರ್ ನಟಿ ತನ್ನ ವೃತ್ತಿಜೀವನದ ಆರಂಭದಲ್ಲಿ ಕಪ್ಪಗಿದ್ದ ಕಾರಣಕ್ಕೆ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರಂತೆ. ತನ್ನ ಮೊದಲ ಸಿನಿಮಾಗಾಗಿ ಬರೋಬ್ಬರಿ ಎರಡು ತಿಂಗಳು ಅರಿಶಿನ ಹಚ್ಚಿಕೊಂಡಿದ್ದರಂತೆ. ಆದರೆ ನಂತರ ಅವರೇ ಸ್ಟಾರ್ ನಾಯಕಿಯಾಗಿ ಬೆಳೆದರು.
ಕಪ್ಪಗಿದ್ದರೂ ಹೀರೋಯಿನ್ ಆಗಿ ಯಶಸ್ಸು ಕಂಡ ನಟಿ ಭಾನುಪ್ರಿಯಾ. ಅವರು 'ಸಿತಾರಾ' ಚಿತ್ರದ ಮೂಲಕ ತೆಲುಗಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ತಮಿಳು ಸಿನಿಮಾವೊಂದರಲ್ಲಿ ಇವರನ್ನು ನೋಡಿದ್ದ ನಿರ್ದೇಶಕ ವಂಶಿ, 'ಸಿತಾರಾ' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದರೆ, ಭಾನುಪ್ರಿಯಾ ಅವರನ್ನು ನೋಡಿದ ಕ್ಯಾಮರಾಮನ್, 'ಈಕೆ ಬೇಡ, ನಮ್ಮ ಸಿನಿಮಾಗೆ ಸೆಟ್ ಆಗಲ್ಲ' ಎಂದು ಮುಖದ ಮೇಲೆಯೇ ಹೇಳಿದ್ದರಂತೆ. 'ಸಿನಿಮಾದ ಕೋಕಿಲಾ ಪಾತ್ರ ಅರಮನೆಯಲ್ಲಿ ಬೆಳೆದ ಸುಂದರಿ. ಆ ಪಾತ್ರಕ್ಕೆ ಇಂತಹ ಕಪ್ಪು ಹುಡುಗಿಯನ್ನು ಹಾಕಿದರೆ ಜನ ಒಪ್ಪಿಕೊಳ್ಳಲ್ಲ. ಅಣ್ಣನ ಪಾತ್ರ ಮಾಡಿದ ಶರತ್‌ಕುಮಾರ್ ತುಂಬಾ ಬೆಳ್ಳಗಿದ್ದಾರೆ. ಅಂತಹ ವ್ಯಕ್ತಿಯ ತಂಗಿ ಅಂದಮೇಲೆ ಅಷ್ಟೇ ಬೆಳ್ಳಗಿರಬೇಕು' ಎಂದು ಕ್ಯಾಮರಾಮನ್ ನಿರ್ದೇಶಕರಿಗೆ ಹೇಳಿದ್ದರಂತೆ.
23
ಎರಡು ತಿಂಗಳು ಅರಿಶಿನ ಹಚ್ಚಿದ್ದರಂತೆ
'ಸಿತಾರಾ' ಚಿತ್ರದ ಕೋಕಿಲಾ ಪಾತ್ರಕ್ಕೆ ಭಾನುಪ್ರಿಯಾ ಸರಿಹೊಂದುವುದಿಲ್ಲ ಎಂದು ಸಿನಿಮಾಟೋಗ್ರಾಫರ್ ರಘು ಹೇಳಿದ್ದರು. ಆದರೆ ನಿರ್ದೇಶಕ ವಂಶಿ ಕೇಳಲಿಲ್ಲ. ಅವರಿಗೆ ಸಹಜವಾಗಿಯೇ ಕಪ್ಪು ಬಣ್ಣ ಇಷ್ಟವಿತ್ತು. ಹೀಗಾಗಿ, ವಂಶಿ ಅವರು ಪಟ್ಟು ಹಿಡಿದು ಭಾನುಪ್ರಿಯಾ ಅವರನ್ನೇ ನಾಯಕಿಯಾಗಿ ತೆಗೆದುಕೊಂಡರು. ಪಾತ್ರಕ್ಕೆ ನ್ಯಾಯ ಒದಗಿಸಲು, ಭಾನುಪ್ರಿಯಾ ಅವರಿಗೆ ಎರಡು ತಿಂಗಳು ಅರಿಶಿನ ಹಚ್ಚಿಸಿದರಂತೆ. ದಿನವಿಡೀ ಅರಿಶಿನ ಹಚ್ಚಿಕೊಂಡು, ನಂತರ ಸ್ನಾನ ಮಾಡಬೇಕಿತ್ತು. ಎರಡು ತಿಂಗಳ ನಂತರ ಅವರ ಮೈಬಣ್ಣದಲ್ಲಿ ಸ್ವಲ್ಪ ಬದಲಾವಣೆ ಆಯಿತಂತೆ. ನಂತರ ಮೇಕಪ್ ಹಾಕಿ ಒಂದು ಲುಕ್ ಸೆಟ್ ಮಾಡಿ, ಸಿನಿಮಾದುದ್ದಕ್ಕೂ ಅದೇ ಲುಕ್ ಫಾಲೋ ಮಾಡುವಂತೆ ಸೂಚಿಸಿದರಂತೆ. ಇದರಿಂದ ಭಾನುಪ್ರಿಯಾ ಅವರ ಲುಕ್ಕೇ ಬದಲಾಗಿ ಹೋಯಿತು.
33
ಚಿತ್ರರಂಗವನ್ನೇ ಆಳಿದ ಭಾನುಪ್ರಿಯಾ
ಹೀಗೆ ಮಾಡಿದ್ದರಿಂದಲೇ ಸಿನಿಮಾದಲ್ಲಿ ಭಾನುಪ್ರಿಯಾ ಅಷ್ಟು ಸುಂದರವಾಗಿ ಕಾಣಿಸಿದರು ಎಂದು ಕ್ಯಾಮರಾಮನ್ ರಘು ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾ ಮಾತ್ರವಲ್ಲ, ಭಾನುಪ್ರಿಯಾ ಅನೇಕ ಸಂದರ್ಭಗಳಲ್ಲಿ ಇಂತಹ ಅವಮಾನ ಮತ್ತು ಟೀಕೆಗಳನ್ನು ಎದುರಿಸಿದ್ದರಂತೆ. ಆದರೆ 'ಸಿತಾರಾ' ಚಿತ್ರದ ಯಶಸ್ಸಿನ ನಂತರ ಅವರ ಜೀವನವೇ ಬದಲಾಯಿತು. ಅವರು ದೊಡ್ಡ ಸ್ಟಾರ್ ನಟಿಯಾದರು. ತೆಲುಗು ಮತ್ತು ತಮಿಳಿನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದರು. ನಿರ್ದೇಶಕ ವಂಶಿ ಅವರನ್ನು ಮದುವೆಯಾಗಲು ಬಯಸಿದ್ದರು, ಆದರೆ ಅವರ ತಾಯಿ ಒಪ್ಪದ ಕಾರಣ ಅದು ಸಾಧ್ಯವಾಗಲಿಲ್ಲ. ನಂತರ ಭಾನುಪ್ರಿಯಾ ಆದರ್ಶ್ ಕೌಶಲ್ ಅವರನ್ನು ವಿವಾಹವಾದರು. ಇವರಿಗೆ ಒಬ್ಬ ಮಗಳಿದ್ದಾಳೆ. 2018ರಲ್ಲಿ ಆದರ್ಶ್ ನಿಧನರಾದರು. ಸದ್ಯ ಭಾನುಪ್ರಿಯಾ ಮರೆವಿನ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.