ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು ಎಂದುಕೊಳ್ಳುತ್ತಿರುವವರೇ ಹೆಚ್ಚು. ಹಾಗಿದ್ರೆ ರಿಯಲ್ ಲೈಫ್ನಲ್ಲಿ ಆದಿ ಪತ್ನಿ ಯಾರು? ಮಕ್ಕಳು ಎಷ್ಟು? ಇಲ್ಲಿದೆ ಡಿಟೇಲ್ಸ್...
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಆದಿಯ ಎಂಟ್ರಿ ಆದಾಗಿನಿಂದಲೂ ಭಾಗ್ಯ ಮತ್ತು ಆದಿ ಮದುವೆಯಾಗಬೇಕು, ತಾಂಡವ್ಗೆ ಹೊಟ್ಟೆ ಉರಿಯಬೇಕು, ತಾಂಡವ್ ಎದುರು ಭಾಗ್ಯ ಮತ್ತು ಆದಿ ಒಂದಾಗಿ ಬಾಳಬೇಕು ಎಂದೆಲ್ಲಾ ಆಶಿಸ್ತಿರೋರೇ ಹಲವರು. ರಿಯಲ್ ಲೈಫ್ನಲ್ಲಿ ಇಷ್ಟು ದೊಡ್ಡ ಮಕ್ಕಳು ಇದ್ದಾಕೆ ಮದುವೆಯಾಗಲು ಹೊರಟರೆ ಒಪ್ಪುತ್ತಾರೋ ಅಥ್ವಾ ಮದ್ವೆಯಾದ್ರೆ ಏನು ಕೊಂಕು ಮಾತನಾಡುತ್ತಾರೋ, ಮದುವೆಯಾದರೆ ಚೆನ್ನಾಗಿ ಸಂಸಾರ ನಡೆಸಲು ಕೊಡುತ್ತಾರೋ ಗೊತ್ತಿಲ್ಲ... ಆದ್ರೆ ರೀಲ್ ಲೈಫ್ನಲ್ಲಿ ಭಾಗ್ಯಳ ಸಂಕಷ್ಟ, ಆದಿಯ ಕ್ರೌರ್ಯ ನೋಡಿದವರು ಮಾತ್ರ ಭಾಗ್ಯಳಿಗೆ ಇನ್ನೊಂದು ಮದುವೆ ಮಾಡಿಸುವ ಕಾತರದಿಂದ ಇದ್ದಾರೆ. ಅದೇ ಇನ್ನೊಂದೆಡೆ ಭಾಗ್ಯಳ ಅತ್ತೆ ಕುಸುಮಾ ಕೂಡ ಸೊಸೆಗೆ ಇನ್ನೊಂದು ಮದುವೆ ಮಾಡಿಸಲು ಕಾಯುತ್ತಿರುವುದರಿಂದ ಆದಿ ಮತ್ತು ಭಾಗ್ಯಳ ಮದುವೆ ಗ್ಯಾರೆಂಟಿ ಎನ್ನೋದು ಎಲ್ಲರಿಗೂ ತಿಳಿದಿದೆ.
28
ಇಬ್ಬರು ಮಕ್ಕಳ ಅಪ್ಪ
ಆದರೆ ರಿಯಲ್ ಲೈಫ್ನಲ್ಲಿ ಆದಿಗೆ ಇಬ್ಬರು ಮಕ್ಕಳು. ಚಿಕ್ಕವಳು ಮಗಳು. ಅವಳಿಗೆ ಈಗ ಐದು ವರ್ಷ ವಯಸ್ಸು. ಅರ್ಥಾತ್ ಆದಿ ಪಾತ್ರಧಾರಿ ಹರೀಶ್ ರಾಜ್ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅವರ ಪತ್ನಿ ಶ್ರುತಿ ಲೋಕೇಶ್ ಅವರು ಭಾಗ್ಯಲಕ್ಷ್ಮಿಯ ತಂಡದ ಜೊತೆಗೆ ಇರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
38
2014ರಲ್ಲಿ ಮದುವೆ
ಅಂದಹಾಗೆ, ಹರೀಶ್ ಅವರು 2014ರ ಆಗಸ್ಟ್ 20ರಂದು ಮದುವೆಯಾಗಿದ್ದು, ಇದೀಗ ಅವರ ದಾಂಪತ್ಯ ಜೀವನಕ್ಕೆ 11 ವರ್ಷ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ (Kannada Film Industry) ಹಾಗೂ ಕಿರುತೆರೆಯಲ್ಲಿ ತಮ್ಮ ನಟನಾ ಕೌಶಲ್ಯದಿಂದಲೇ ಜನಮನ ಗೆದ್ದ ನಟ ಕಲಾಕಾರ್ ಹರೀಶ್ ರಾಜ್.
48
ನಟನಾ ಕರಿಯರ್ ಆರಂಭಿಸಿ 25 ವರ್ಷ
ಇವರು ತಮ್ಮ ನಟನಾ ಕರಿಯರ್ ಆರಂಭಿಸಿ 25 ವರ್ಷಕ್ಕೂ ಆಧಿಕವಾಗಿದ್ದರೂ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. 25 ವರ್ಷಗಳಲ್ಲಿ 60ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಹರೀಶ್ ರಾಜ್ ಗೆ, ಪ್ರತಿಭಾವಂತ ನಿರ್ದೇಶಕರು, ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿದ ಹೆಮ್ಮೆ ಅವರಿಗೆ ಇದೆ.
58
'ಹೊಸ ಚಿಗುರು ಹಳೇ ಬೇರು' ಮೂಲಕ ಎಂಟ್ರಿ
ಕಿರುತೆರೆಯ 'ಹೊಸ ಚಿಗುರು ಹಳೇ ಬೇರು' (1996) ಧಾರಾವಾಹಿ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಹರೀಶ್ ಅವರು ಮೊದಲು ಬಣ್ಣಹಚ್ಚಿದ ಚಿತ್ರ ದೋಣಿ ಸಾಗಲಿ (1998). ಬಳಿಕ ಅವರು ಕಲಾಕಾರ್ ಚಿತ್ರವನ್ನು ನಿರ್ದೇಶಿಸಿದರು. ಟಿವಿ ಜಾಹೀರಾತುಗಳಲ್ಲೂ ಕಾಣಿಸಿಕೊಂಡರು. ಬನದ ನೆರಳು, ಹೊಂಗನಸು, ಬೆಳದಿಂಗಳಾಗಿ ಬಾ, ತನನಂ ತನನಂ, ಮೌನಿ, ತುಂಟಾಟ, ಕುರಿಗಳು ಸಾರ್ ಕುರಿಗಳು ಮುಂತಾದ ಚಿತ್ರಗಳಲ್ಲಿ ಭಿನ್ನ ರೀತಿಯ ಪಾತ್ರಗಳನ್ನು ಪೋಷಿಸಿದ್ದಾರೆ. ಮನೆಯೊಂದು ಮೂರು ಬಾಗಿಲು, ಕುಬೇರಪ್ಪ ಅಂಡ್ ಸನ್ಸ್, ಕಾವ್ಯಾಂಜಲಿ, ಮಿಂಚಿನ ಬಳ್ಳಿ, ದಂಡಪಿಂಡಗಳು, ಒನ್ ಟೀ ಸ್ಪೂನ್ ಸ್ಪೆಷಲ್ ಮುಂತಾದ ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
68
ಬಿಗ್ ಬಾಸ್ ಏಳನೇ ಸೀಸನ್ ನಲ್ಲಿ ಸ್ಪರ್ಧಿ
ಬಿಗ್ ಬಾಸ್ ಮೊದಲಿನ ಅವತರಿಣಿಕೆಗಳಲ್ಲಿ ಆಫರ್ ಬಂದಾಗ ನಿರಾಕರಿಸಿದ್ದ ಹರೀಶ್ ರಾಜ್ ಬಿಗ್ ಬಾಸ್ ಏಳನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಬಿಗ್ ಬಾಸ್ ಮನೆಯಲ್ಲಿ 107 ದಿನಗಳ ಕಾಲ ಮನರಂಜಿಸಿದ್ದ ಹರೀಶ್ ರಾಜ್ ಫಿನಾಲೆಯ ಕೊನೆಯ ವಾರದಲ್ಲಿ ಮಿಡ್-ವೀಕ್ ಎಲಿಮಿನೇಶನ್ ಮೂಲಕ ಹೊರಬಂದರು.
78
ಲಿಮ್ಕಾ ದಾಖಲೆ ಮಾಡಿರೋ ನಟ
ಹರೀಶ್ ರಾಜ್ (Harish Raj) ಶ್ರೀ ಸತ್ಯನಾರಾಯಣ ಎನ್ನುವ ಸಿನಿಮಾದಲ್ಲಿ 16 ಪಾತ್ರಗಳಲ್ಲಿ ನಟನೆ ಮಾಡುವ ಮೂಲಕ ಲಿಮ್ಕಾ ದಾಖಲೆ ಕೂಡ ಮಾಡಿದ್ದರು. ಕಲಾಕಾರ್ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದ ಹರೀಶ್ ರಾಜ್, ಬಳಿಕ ಗನ್, ಶ್ರೀ ಸತ್ಯನಾರಾಯಣ, ಕಿಲಾಡಿ ಪೊಲೀಸ್, ಪ್ರೇತಾ, ವೆಂಕಟೇಶಾಯ ನಮಃ ಸಿನಿಮಾ ನಿರ್ದೇಶನ ಮಾಡಿದ್ದಾರೆ.
88
ಮ್ಯಾಟ್ರಿಮೋನಿಯಲ್ ಜಾಲತಾಣದ ಮೂಲಕ ಆಯ್ಕೆ
ತಮ್ಮ ಬಾಳಸಂಗಾತಿಯನ್ನು ಮ್ಯಾಟ್ರಿಮೋನಿಯಲ್ ಜಾಲತಾಣದ ಮೂಲಕ ಆಯ್ಕೆ ಮಾಡಿದ್ದಾರೆ ಹರೀಶ್. ಶ್ರುತಿ ಲೋಕೇಶ್ ಅವರು ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಶ್ರುತಿ ಅವರ ತಂದೆಗೆ ತುಮಕೂರಿನಲ್ಲಿ ಒಂದು ಕಂಪನಿಯೂ ಇದೆ. ಹರೀಶ್ ರಾಜ್ ಮತ್ತು ಶ್ರುತಿ ಅವರದು ಅಂತರ್ಜಾತೀಯ ವಿವಾಹ. ಇಬ್ಬರೂ ಮನೆಯವರ ಒಪ್ಪಿಗೆ ಪಡೆದು ತಮ್ಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶ್ರುತಿ ಲೋಕೇಶ್ ಅವರು ಎಂಎಸ್ಸಿ ಪದವೀಧರೆ. ಇನ್ನು ಹರೀಶ್ ಅವರು ಕಿರುತೆರೆ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿ ಬಳಿಕ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ನಿರ್ದೇಶನದಲ್ಲೂ ಒಂದು ಕೈ ನೋಡಿದ್ದಾರೆ.