ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಇದೀಗ ಕುತೂಹಲದ ಘಟ್ಟ ತಲುಪಿದೆ. ಅತ್ತ ತಾಂಡವ್ ಛಾನ್ಸ್ ಸಿಕ್ಕಾಗಲೆಲ್ಲಾ ಭಾಗ್ಯಳ ಮೇಲೆ ಸವಾರಿ ಮಾಡುತ್ತ ಬಂದಿದ್ದರೆ, ಅದೇ ಇನ್ನೊಂದೆಡೆ ಹೆಜ್ಜೆ ಹೆಜ್ಜೆಗೂ ಇನ್ಸಲ್ಟ್ ಮಾಡಿಕೊಳ್ಳುತ್ತಿದ್ದಾರೆ. ಆದಿಗೆ ಇವನೇ ಭಾಗ್ಯಳ ಗಂಡ ಎನ್ನುವುದು ತಿಳಿದಿಲ್ಲ. ಆದ ಕಾರಣದಿಂದ, ಭಾಗ್ಯಳನ್ನು ತಾಂಡವ್ ಎದುರೇ ಹೊಗಳುತ್ತಿರುತ್ತಾನೆ. ಆದ್ದರಿಂದ ಭಾಗ್ಯ ಎನ್ನುವುದು ತಾಂಡವ್ಗೆ ಬಿಸಿ ತುಪ್ಪದ ರೀತಿ ಆಗಿದೆ. ಉಗುಳಲೂ ಆಗದೇ, ನುಂಗಲೂ ಆಗದೇ ಸುಮ್ಮನೇ ಇರಬೇಕಿದೆ. ಆದಿಗೆ ಸತ್ಯವನ್ನೂ ಆತ ಹೇಳುವಂತಿಲ್ಲ.
28
ಆದಿ-ಭಾಗ್ಯ ಮದ್ವೆ ಆಗುತ್ತಾ?
ಅದೇ ಇನ್ನೊಂದೆಡೆ, ಭಾಗ್ಯ ಮತ್ತು ಆದಿಯ ಮದುವೆಗೆ ಕ್ಷಣ ಗಣನೆಗೆ ಶುರುವಾಗಿದೆ. ಭಾಗ್ಯಳನ್ನು ಮದುವೆ ಮಾಡಿಸಲು ಕುಸುಮಾ ಪ್ಲ್ಯಾನ್ ಮಾಡಿದ್ದಾಳೆ. ಆದರೆ, ಆಕೆಗೆ ಆದಿಯ ಜೊತೆ ಮದುವೆ ಮಾಡಿಸುವುದು ಎಂದು ಸದ್ಯ ತಲೆಗೆ ಹೊಳೆದಿಲ್ಲ. ಆದರೆ ವೀಕ್ಷಕರು ಇದಾಗಲೇ ಭಾಗ್ಯ ಮತ್ತು ಆದಿ ಜೋಡಿ ಫಿಕ್ಸ್ ಮಾಡಿಯಾಗಿದೆ. ಇವರಿಬ್ಬರೂ ಒಂದಾಗಿ ತಾಂಡವ್ನ ಹೊಟ್ಟೆ ಉರಿಸಬೇಕು ಎನ್ನುವುದು ಎಲ್ಲರ ಆಸೆ.
38
ಬಿಡುವಾದಾಗಲೆಲ್ಲಾ ರೀಲ್ಸ್
ಇವೆಲ್ಲವುಗಳ ನಡುವೆಯೇ, ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್ ಮತ್ತು ಮಗಳು ತನ್ವಿ ಪಾತ್ರಧಾರಿ ಅಮೃತಾ ಗೌಡ ಅವರು ಭರ್ಜರಿ ರೀಲ್ಸ್ ಮಾಡಿದ್ದಾರೆ. ಮುಸ್ಸಂಜೆ ಮಾತು ಸಿನಿಮಾದ ಆಕಾಶ ಭೂಮಿಯಿಂದು ಒಂದಾದ ಹಾಗಿದೆ ಹಾಡಿಗೆ ಅಮ್ಮ-ಮಗಳು ಸಕತ್ ಸ್ಟೆಪ್ ಹಾಕಿದ್ದಾರೆ. ಇವರ ಜೋಡಿಗೆ ಫ್ಯಾನ್ಸ್ ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಅಷ್ಟಕ್ಕೂ ಶೂಟಿಂಗ್ನಿಂದ ಬಿಡುವು ಆದಾಗಲೆಲ್ಲ ಸುಷ್ಮಾ ಅವರು ಭಾಗ್ಯಲಕ್ಷ್ಮಿ ಟೀಮ್ ಜೊತೆ ಹೀಗೆ ಸ್ಟೆಪ್ ಹಾಕುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆ್ಯಕ್ಟೀವ್ ಆಗಿರುವ ಅವರು, ಹಲವಾರು ವಿಡಿಯೋ ಶೇರ್ ಮಾಡುತ್ತಾರೆ.
ಇನ್ನು ಸುಷ್ಮಾ ಕೆ. ರಾವ್ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ.
58
ಹಲವು ಪ್ರಶಸ್ತಿ ಪಡೆದ ಸುಷ್ಮಾ ರಾವ್
2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
68
ತನ್ವಿಯಾಗಿ ಅಮೃತಾ ಗೌಡ
ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ.
78
ತನ್ವಿಯಾಗಿ ಅಮೃತಾ ಗೌಡ
ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.
88
ತನ್ವಿಗೂ ಸಕತ್ ಫ್ಯಾನ್ಸ್
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಸೀರಿಯಲ್ ಅಮ್ಮ-ಮಗಳ ರೀಲ್ಸ್ ನೋಡಿ ಮುಂದೊಂದು ದಿನ ನಾಯಕಿಯಾಗಿ ಕಾಣಿಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.