ಜೀ ಕನ್ನಡದ ಅಣ್ಣಯ್ಯ ಧಾರಾವಾಹಿಯ ನಾಯಕಿ ಪಾರು ಪಾತ್ರಧಾರಿ ನಿಶಾ ರವಿಕೃಷ್ಣನ್ ಅವರ ಬಾಲನಟಿಯಿಂದ ನಾಯಕಿ ಪಯಣದ ವಿವರಗಳು. ಚಿಂಟು ಟಿವಿಯಲ್ಲಿ ಆ್ಯಂಕರ್ ಆಗಿದ್ದ ನಿಶಾ ಈಗ ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ಬ್ಯುಸಿ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಣ್ಣಯ್ಯ ಸೀರಿಯಲ್ ವಿಶೇಷ ಕಥೆಯನ್ನು ಹೊಂದಿದೆ. ಅಣ್ಣ ಮತ್ತು ತಂಗಿಯರ ಬಾಂಧವ್ಯದ ಕಥೆ ಹೊಂದಿರುವ ವಿಭಿನ್ನ ಕಥೆ ಇದಾಗಿದೆ. ಬೇರೊಬ್ಬರನ್ನು ಪ್ರೀತಿಸುವ ನಾಯಕಿಯನ್ನು ಅನಿವಾರ್ಯ ಕಾರಣಗಳಿಂದ ಮದುವೆಯಾಗುವ ನಾಯಕ ಈ ಅಣ್ಣಯ್ಯ. ಪತ್ನಿಗೆ ಆಕೆಯ ಲವರ್ ಜೊತೆ ಸೇರಿಸುವುದು ಇವನ ಉದ್ದೇಶವಾಗಿತ್ತು. ಆದರೆ ಈಗ ಎಲ್ಲವೂ ಬದಲಾಗಿ ಪತಿ-ಪತ್ನಿ ಲವ್ ಮಾಡಲು ಶುರು ಮಾಡಿದ್ದಾರೆ.
28
ಪಾರು ಆಗಿ ಮನೆಯವರ ವಿಶ್ವಾಸ ಗಳಿಸ್ತಿರೋ ನಾಯಕಿ
ಪತಿಗೆ ಆಗುತ್ತಿರುವ ಅನ್ಯಾಯವನ್ನು ಸರಿ ಮಾಡುತ್ತಲೇ ಮನೆಯವರ ವಿಶ್ವಾಸ ಗಳಿಸುತ್ತಿದ್ದಾಳೆ ನಾಯಕಿ ಪಾರು. ಪಾರುವಾಗಿ ನಟಿಸ್ತಿರೋ ನಟಿಯ ಹೆಸರು ನಿಶಾ ರವಿಕೃಷ್ಣನ್. ಗಟ್ಟಿಮೇಳದಲ್ಲಿ ರೌಡಿ ಬೇಬಿ ಎಂದೇ ಫೇಮಸ್ ಆಗಿದ್ದ ನಿಶಾ, ಇಲ್ಲಿ ತಮ್ಮ ಅಪ್ಪನ ವಿರುದ್ಧವೇ ತಿರುಗಿ ಬಿದ್ದಿದ್ದು, ಕುಟುಂಬದ ರಕ್ಷಣೆಯಲ್ಲಿ ತೊಡಗಿರೋ ನಾಯಕಿ.
38
ಬಾಲಕಿಯಾಗಿ ಆ್ಯಂಕರಿಂಗ್
ಆದರೆ ಕೆಲವೇ ವರ್ಷಗಳ ಹಿಂದೆ ನಿಶಾ ರವಿಕೃಷ್ಣನ್ ಅವರು ಚಿಂಟು ಟಿವಿಯಲ್ಲಿ ಆ್ಯಂಕರಿಂಗ್ ಮಾಡುತ್ತಿದ್ದರು. ಈ ಪುಟಾಣಿಯ ಆ್ಯಂಕರಿಂಗ್ಗೆ ಮನಸೋತರಿದ್ದರು ಪುಟಾಣಿಗಳು ಸೇರಿದಂತೆ ಹಿರಿಯರು. ಮಕ್ಕಳಿಗಾಗಿಯೇ ಇದ್ದ ಈ ಷೋನಲ್ಲಿ ಮಕ್ಕಳಿಗಾಗಿ ಇವರು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇದೀಗ ಅವರೇ ಕೆಲವೇ ವರ್ಷಗಳಲ್ಲಿ ನಾಯಕಿಯಾಗಿ ಮಿಂಚುತ್ತಿದ್ದಾರೆ.
ಇನ್ನು ನಟಿಯ ರಿಯಲ್ ಲೈಫ್ ಕುರಿತು ಹೇಳುವುದಾದರೆ, ಇವರಿನ್ನೂ ಸಿಂಗಲ್. ಈ ಕುರಿತು ನಟಿಯೇ ಹೇಳಿಕೊಂಡಿದ್ದಾರೆ. ಸೀರಿಯಲ್ಗಳಲ್ಲಿ ಎಂಟು ಮದ್ವೆಯಾಗಿದೆ. ಅವುಗಳಲ್ಲಿ ಆಡಂಬರದ ಮದುವೆಗಳೇ ಜಾಸ್ತಿ ಇದ್ದವು. ಆದರೆ ರಿಯಲ್ ಲೈಫ್ನಲ್ಲಿ ಸಿಂಪಲ್ ಆಗಿ ಮದುವೆಯಾಗುವ ಆಸೆ ಇದೆ ಎಂದಿದ್ದಾರೆ ನಿಶಾ.
58
ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್
ಚಟಪಟ ಎಂದು ಕನ್ನಡ ಮಾತನಾಡುವ ನಿಶಾ ರವಿಕೃಷ್ಣನ್ ಅವರು ಮೂಲತಃ ಮಲಯಾಳಿ. ಆದರೆ ಮಿಂಚುತ್ತಿರುವುದು ಕನ್ನಡ ಮತ್ತು ತೆಲಗು ಬಣ್ಣದ ಲೋಕದಲ್ಲಿ. ನಿಶಾ ಮಿಲನ್ ಎಂದು ಕೂಡ ಫೇಮಸ್ ಆಗಿದ್ದಾರೆ ನಟಿ. 2018ರಲ್ಲಿ ಸ್ಟಾರ್ ಸುವರ್ಣದಲ್ಲಿ ತೆರೆ ಕಂಡ ‘ಸರ್ವಮಂಗಲ ಮಾಂಗಲ್ಯೆ’ ಸೀರಿಯಲ್ ಮೂಲಕ ಕನ್ನಡಕ್ಕೆ ಪರಿಚಿತರಾದರು. 2019ರಲ್ಲಿ ಅವರಿಗೆ ‘ಗಟ್ಟಿಮೇಳ’ ಸೀರಿಯಲ್ನ ಅಮೂಲ್ಯ ಪಾತ್ರ ಅವರಿಗೆ ಬ್ರೇಕ್ ಕೊಟ್ಟಿತು. ರೌಡಿ ಬೇಬಿ ಎಂದೇ ಈಗಲೂ ಎಲ್ಲರೂ ಅವರನ್ನು ಕರೆಯುತ್ತಾರೆ.
68
ಅಣ್ಣಯ್ಯ ಪಾರು
ಐದು ವರ್ಷ ಈ ಸೀರಿಯಲ್ ತೆರೆ ಕಂಡಿದೆ. ಈ ಬಳಿಕ ನಿಶಾ ತೆಲುಗು ಸೀರಿಯಲ್ನಲ್ಲಿ ಕಾಣಿಸಿಕೊಂಡರು. ಕನ್ನಡದ ಅಣ್ಣಯ್ಯದಲ್ಲಿ ಪಾರು ಆಗಿ ಹಾಗೂ ತೆಲಗುಇನ ಅಮ್ಮಯ್ಯಿಗಾರು ಸೀರಿಯಲ್ನಲ್ಲಿಯೂ ನಟಿಸುತ್ತಿದ್ದಾರೆ. ನಿಶಾ ಅವರು ಹುಟ್ಟಿದ್ದು ಬೆಂಗಳೂರೇ. ಆದರೆ, ಮೂಲತಃ ಕೇರಳದವರು.
78
ತಮಾಷೆಯಾಗಿ ಮಾತನಾಡುವ ನಟಿ
‘ಅಣ್ಣಯ್ಯ’ ಧಾರಾವಾಹಿ ಶೂಟಿಂಗ್ ಸೆಟ್ನಲ್ಲಿ ಮಾತಿಗೆ ಸಿಕ್ಕಿರುವ ನಟಿ ಮತ್ತು ಅವರ ತಂಡ ಅಣ್ಣಯ್ಯ ಸೀರಿಯಲ್ ಕುರಿತು ಹಲವು ತಮಾಷೆಯ ಮಾತುಗಳನ್ನಾಡಿದ್ದು, ಅವುಗಳನ್ನು ಈ ವಿಡಿಯೋದಲ್ಲಿ ನೋಡಬಹುದು.
88
ಎಂಟಕ್ಕೂ ಹೆಚ್ಚು ಬಾರಿ ಮದುವೆ
ಅಂದಹಾಗೆ ನಟಿ ವಿವಿಧ ಸೀರಿಯಲ್ಗಳಲ್ಲಿ ಇದಾಗಲೇ ಎಂಟಕ್ಕೂ ಅಧಿಕ ಬಾರಿ ಮದುವೆಯಾಗಿದ್ದಾರೆ. ಹಿಂದೊಮ್ಮೆ ಇದೇ ತಮಾಷೆಯನ್ನು ಮಾಡಿದ್ದರು ನಿಶಾ. ರಿಯಲ್ ಲೈಫ್ನಲ್ಲಿ ಸಿಂಗಲ್ಲು. ಆದ್ರೆ ಇದಾಗಲೇ 8ಕ್ಕೂ ಅಧಿಕ ಬಾರಿ ಮದುವೆಯಾಗಿದ್ದೇನೆ ಎಂದಿದ್ದರು.