ನಟಿ ಶ್ರುತಿ ಪುತ್ರಿ ಗೌರಿ ಶ್ರುತಿ ಸಿನಿಮಾಕ್ಕೂ ಬರೋದಕ್ಕೂ ಮುನ್ನವೇ ಜನಪ್ರಿಯತೆ ಪಡೆದಿದ್ದಾರೆ. ಸದ್ಯದಲ್ಲೇ ಸಿನಿಮಾ ಇಂಡಷ್ಟ್ರಿಗೂ ಕಾಲಿಡುವ ಸುದ್ದಿಯೂ ಇದೆ. ಆದರೆ ಯಾವಾಗ ಎಂಟ್ರಿ ಕೊಡ್ತಾರೆ.
ಚಂದನವನದ ಜನಪ್ರಿಯ ನಟಿ ಶ್ರುತಿ ಅವರ ಪುತ್ರಿ ಗೌರಿ ಶ್ರುತಿ (Gowri Shruti) ಸಿನಿಮಾ ಇಂಡಷ್ಟ್ರಿಗೆ ಇನ್ನೂ ಕಾಲಿಟ್ಟಿಲ್ಲ ಆದರೆ ಇವರು ಸೋಶಿಯಲ್ ಮೀಡಿಯಾದಲ್ಲಿ ತುಂಬಾನೆ ಫೇಮಸ್ ಆಗಿದ್ದಾರೆ. ಆದರೆ ಯಾವಾಗ ಸಿನಿಮಾ ಇಂಡಷ್ಟ್ರಿಗೆ ಕಾಲಿಡಲಿದ್ದಾರೆ ಬೆಡಗಿ?
27
ಗೌರಿ ಶ್ರುತಿ ಒಬ್ಬ ಗಾಯಕಿ, ತಮ್ಮ ಹಾಡಿನ ವಿಡೀಯೋಗಳ ಮೂಲಕವೇ ಗಮನ ಸೆಳೆದಿದ್ದರು. ಅದರಿಂದಾಗಿಯೇ ಗೌರಿ ಜನಪ್ರಿಯತೆ ಪಡೆದಿದ್ದರು. ಏನು ಇಲ್ಲಾಂದ್ರೂ ಗೌರಿ ಪ್ಲೇ ಬ್ಯಾಕ್ ಸಿಂಗರ್ ಆಗಿ ಕನ್ನಡ ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದವು.
37
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಗೌರಿ, ಅಲ್ಲಿ ತಮ್ಮ ನಾಟಕಗಳ ವಿಡೀಯೋ, ಫೋಟೊ, ಫಿಲಂ ಸ್ಕೂಲ್ ಫೋಟೊಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ, ಹಾಗಾಗಿ ಶ್ರುತಿ ಶೀಘ್ರದಲ್ಲೇ ಲಾಂಚ್ ಆಗಲಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ.
ಹೇಳಿ ಕೇಳಿ ಅಮ್ಮ ಶ್ರುತಿ ಅದ್ಭುತವಾದ ಪ್ರತಿಭೆ, ಹಿರಿಯ ನಟಿ ತಮ್ಮ ವಿಭಿನ್ನ ನಟನೆಯಿಂದಲೇ ಕನ್ನಡಿಗರ ಮನಸ್ಸಿನಲ್ಲಿ ಮನೆ ಮಾಡಿದ್ದಾರೆ. ಅದು ಅಳುವ ಪಾತ್ರವೇ ಇರಲಿ, ಕಾಮಿಡಿ ಪಾತ್ರವೇ ಇರಲಿ ಅಥವಾ ವಿಲನ್ ಪಾತ್ರವೇ ಇರಲಿ ಎಲ್ಲಾದಕ್ಕೂ ಶ್ರುತಿ ಜೀವತುಂಬಿ ನಟಿಸಿದ್ದಾರೆ.
57
ಈಗ ಅದೇ ಗುಣ ಗೌರಿಗೂ ಬಂದಂತಿದೆ. ಇತ್ತೀಚೆಗೆ ನಟಿ ಗಣೇಶ ಹಬ್ಬದಂದು ಒಂದು ಮುದ್ದಾದ ವಿಡೀಯೋ ಶೇರ್ ಮಾಡಿದ್ದರು. ಹಬ್ಬಕ್ಕೆ ಶುಭಕೋರುವ ವಿಡೀಯೋ ಸಿನಿಮಾದಲ್ಲಿ ನಾಯಕಿಯನ್ನು ಪರಿಚಯಿಸುವಂತಿತ್ತು. ತುಂಬಾನೆ ಮುದ್ದಾಗಿ ಬಂದಿದೆ ಈ ವಿಡಿಯೋ.
67
ಈ ವಿಡೀಯೋಗೆ ಅನುಪಮಾ ಗೌಡ, ಆರಾಧನಾ ರಾಮ್, ಅಮೃತಾ ಪ್ರೇಮ್, ತನುಜಾ ವೆಂಕಟೇಶ್, ಸೋನಲ್ ಮೊಂಟೆರೋ, ಮಾಳವಿಕಾ ಅವಿನಾಶ್ ಸೇರಿ ಹಲವರು ಕಾಮೆಂಟ್ ಮಾಡಿದ್ದಾರೆ. ಇನ್ನು ಅಭಿಮಾನಿಗಳು ಸಹ ಇದನ್ನು ಮೆಚ್ಚಿಕೊಂಡಿದ್ದು, ಯಾವಾ ಸಿನಿಮಾಗೆ ಎಂಟ್ರಿ ಎಂದು ಕೇಳುತ್ತಿದ್ದಾರೆ.
77
ಈ ವಿಡೀಯೋ ನೋಡಿದ್ರೆ ಗೌರಿ ಸದ್ಯದಲ್ಲೇ ಲಾಂಚ್ ಆಗುವಂತಿದೆ. ಹಾಗೇ ಎಂಟ್ರಿ ಕೊಟ್ರೆ ಕನ್ನಡಕೊಬ್ಬ ಸಿಂಪಲ್ ಆಗಿರುವ, ನಮ್ಮದೇ ಮನೆ ಮಗಳು ಎನಿಸುವಂತಹ ಸುಂದರಿ ಸಿಗುತ್ತಾಳೆ. ಅಭಿಮಾನಿಗಳಂತೂ ತಮ್ಮ ನೆಚ್ಚಿನ ಸೆಲೆಬ್ರಿಟಿಯನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.