Anjali Sudhakar: ಮನೆಯಲ್ಲಿ ದುಡ್ಡೇ ಇಲ್ಲದಾಗ ಗಾಳಿಯಲ್ಲಿ ಹಾರಿಬಂದ 5 ರೂ! ರಾಯರ ಮಹಿಮೆಯ ರೋಚಕ ಘಟನೆ ನೆನೆದ ಅಂಜಲಿ

Published : Aug 25, 2026, 12:03 PM IST

ಹಿರಿಯ ನಟಿ ಅಂಜಲಿ ಸುಧಾಕರ್ ಅವರು ತಮ್ಮ ಬದುಕಿನಲ್ಲಿ ನಡೆದ ಶ್ರೀ ರಾಘವೇಂದ್ರ ಸ್ವಾಮಿಯ ಪವಾಡದ ಬಗ್ಗೆ ಮಾತನಾಡಿದ್ದಾರೆ. ಬಡತನದ ದಿನಗಳಲ್ಲಿ ಹೂವು ಖರೀದಿಸಲು ಹಣವಿಲ್ಲದಿದ್ದಾಗ, ಗಾಳಿಯಲ್ಲಿ ತೇಲಿಬಂದ ಐದು ರೂಪಾಯಿ ತಮ್ಮ ತಾಯಿಯ ಮೈಮೇಲೆ ಬಿದ್ದ ಘಟನೆಯನ್ನು ಅವರು ಹಂಚಿಕೊಂಡಿದ್ದಾರೆ.

PREV
16
ಹಿರಿಯ ನಟಿ ಅಂಜಲಿ

ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಮನೆಮಾತಾದವರು ನಟಿ ಅಂಜಲಿ ಸುಧಾಕರ್. ಅವರು ಕೆಲ ವರ್ಷಗಳಿಂದ ದುಬೈನಲ್ಲಿ ಸೆಟೆಲ್ ಅಗಿದ್ದರು. ಎರಡು ದಶಕಗಳ ಬಳಿಕ ಹಿಂದಿರುಗಿದ ಅಂಜಲಿ ಸುಧಾಕರ್ ಅವರು ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಅತ್ತೆ ಪಾತ್ರದ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಿದ್ದರು. ಆದರೆ ಅವರು ಸೀರಿಯಲ್​ನಿಂದ ಏಕಾಏಕಿ ಹೊರ ಬಂದರು.

26
ಹಲವು ಸೀರಿಯಲ್​ಗಳಲ್ಲಿಯೂ ನಟನೆ

ರಾಮಾಚಾರಿ ಸೀರಿಯಲ್​ನಲ್ಲಿ ನಟಿಸಿದ ಅಂಜಲಿ, ಸ್ಟಾರ್ ಪ್ಲಸ್‌ನ ವಸುದೇವ ಕುಟುಂಬದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟ ಅವಿನಾಶ್ ಈ ಸೀರಿಯಲ್‌ನ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಅವಿನಾಶ್‌ ಅವರಿಗೆ ಅಂಜಲಿ ಸುಧಾಕರ್ ಜೋಡಿಯಾಗಿದ್ದಾರೆ.

36
ರಾಯರ ಮಹಿಮೆ ಕುರಿತು ನಟಿ

ಇಂತಿಪ್ಪ ಅಂಜಲಿ ಅವರು, ಶ್ರೀ ರಾಘವೇಂದ್ರರ ಮಹಾತ್ಮೆಯ ಕುರಿತು ತಮ್ಮ ಜೀವನದಲ್ಲಿ ಆಗಿರುವ ಪವಾಡದ ಬಗ್ಗೆ ಮಾತನಾಡಿದ್ದಾರೆ. ರಾಯರ ಅಪಾರ ಭಕ್ತೆಯಾಗಿರುವ ಅಂಜಲಿ ಅವರು, ತಾವು ಏನೇ ಶುಭ ಕಾರ್ಯ ಆರಂಭ ಮಾಡುವುದರಿದ್ದರೂ ಅದು ರಾಯರ ವಾರ ಗುರುವಾರದಿಂದಲೇ ಎಂದಿದ್ದು, ನನ್ನ ಪ್ರತಿಯೊಂದು ಉಸಿರೂ ಆ ರಾಯರ ನಾಮಸ್ಮರಣೆಯಲ್ಲಿಯೇ ಕಳೆಯುತ್ತೇನೆ ಎಂದಿದ್ದಾರೆ.

46
ರಾಯರೇ ನನ್ನ ಅಪ್ಪ

ನನಗೆ ಅಪ್ಪ ಇಲ್ಲ, ಅವರ ಪ್ರೀತಿ ಸಿಕ್ಕಿರಲಿಲ್ಲ, ಅವರು ಕೈ ಹಿಡಿದು ನಡೆಸಿರಲಿಲ್ಲ. ಆದರೆ ರಾಯರೇ ನನ್ನ ಅಪ್ಪನ ಸ್ಥಾನದಲ್ಲಿ ನಿಂತು ದಾರಿ ತೋರುತ್ತಿದ್ದಾರೆ. ನನ್ನ ಪ್ರತಿ ಉಸಿರಿನಲ್ಲಿಯೂ ರಾಯರು ಇದ್ದಾರೆ ಎಂದಿರುವ ನಟಿ, ಬಡತನದ ದಿನಗಳಲ್ಲಿ ಹೂವು ತರಲು ದುಡ್ಡು ಇಲ್ಲದಾಗ ಗಾಳಿಯಲ್ಲಿ ತೇಲಿಬಂದ ಐದು ರೂಪಾಯಿ ಅಮ್ಮನ ಮೈಮೇಲೆ ಬಿದ್ದ ಪವಾಡವನ್ನು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

56
ಅಂದು ನಡೆದ ಪವಾಡ

ಪ್ರತಿ ಗುರುವಾರ ರಾಯರಿಗೆ ಹೂವು ಅರ್ಪಿಸುತ್ತಿದ್ದೆವು. ಆದರೆ ಆ ಸಮಯದಲ್ಲಿ ಬಡತನ ಇದ್ದುದರಿಂದ ಹೂವನ್ನು ಖರೀದಿಸಲು ಐದು ರೂಪಾಯಿ ಕೂಡ ಇರಲಿಲ್ಲ. ಅಮ್ಮ ತುಂಬಾ ನೊಂದುಕೊಂಡಿದ್ದರು. ಆಗ ಅವರ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಬಸ್​ ಒಂದು ಅವರ ಪಕ್ಕ ಹಾದು ಹೋಯಿತು. ಅಲ್ಲಿಂದ ಗಾಳಿಯಲ್ಲಿ ಐದು ರೂಪಾಯಿ ಬಂದು ಅಮ್ಮನ ಮೈಮೇಲೆ ಬಿದ್ದಾಗ, ಅಮ್ಮನಿಗೆ ಸಂತೋಷ, ಆಶ್ಚರ್ಯ ಆಗಿದ್ದನ್ನು ನೆನಪಿಸಿಕೊಂಡಿದ್ದಾರೆ.

66
ರಾಯರ ಮೇಲೆ ಇನ್ನಷ್ಟು ಭಕ್ತಿ

ಐದು ರೂಪಾಯಿ ಹಿಡಿದು ಬಂದ ಅಮ್ಮ, ಗೋಳೋ ಎಂದು ಅಳುತ್ತಿದ್ದರು. ಅವರಿಗೆ ಅಷ್ಟು ಸಂತೋಷವಾಗಿತ್ತು. ಅದರಿಂದ ಹೂವು ತಂದು ರಾಯರಿಗೆ ಹಾಕಿದೆವು. ಅಲ್ಲಿಂದ ರಾಯರ ಮೇಲಿನ ನನ್ನ ಭಕ್ತಿ ಇನ್ನಷ್ಟು ಹೆಚ್ಚಾಯಿತು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories