Anchor Anushree ರಿಯಾಲಿಟಿ ಷೋನಲ್ಲಿ ಮತ್ತೆ ಕಾಣಿಸಲ್ವಾ? ಶಾಕಿಂಗ್ ಹೇಳಿಕೆ ಕೊಟ್ಟ ನಟಿ!

Published : Aug 29, 2025, 11:13 AM IST

ಆ್ಯಂಕರ್​ ಅನುಶ್ರೀ ಅವರ ಬಹುನಿರೀಕ್ಷಿತ ಮದುವೆ ಕೊಡಗು ಮೂಲದ ರೋಷನ್​ ಜೊತೆ ನೆರವೇರಿದೆ. ಬೆಂಗಳೂರಿನ ರೆಸಾರ್ಟ್​ನಲ್ಲಿ ನಡೆದ ಸಮಾರಂಭದಲ್ಲಿ ಕಿರುತೆರೆ ಮತ್ತು ಚಿತ್ರರಂಗದ ಗಣ್ಯರು ಪಾಲ್ಗೊಂಡರು. ಮದುವೆಯಾದರೂ ಕೆಲಸಕ್ಕೆ ಮರಳುವ ಆ್ಯಂಕರ್​ ಅವರ ನಿರ್ಧಾರ ಗಮನ ಸೆಳೆದಿದೆ.

PREV
18
ಆ್ಯಂಕರ್​ ಅನುಶ್ರೀಗೆ ಕೂಡಿ ಬಂತು ಕಂಕಣ ಭಾಗ್ಯ

ಆ್ಯಂಕರ್​ ಅನುಶ್ರೀ ಬಹಳ ವರ್ಷಗಳಿಂದ ಕಾತರದಿಂದ ಕಾಯ್ತದ್ದ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. 38 ವರ್ಷದ ಅನುಶ್ರೀಗೆ ಕಂಕಣಭಾಗ್ಯ ಕೂಡಿ ಬಂದಿದೆ. ನಿನ್ನೆ ಅವರ ಮದುವೆ ಸಮಾರಂಭ ಭರ್ಜರಿಯಾಗಿ ನಡೆಯಿತು. ಕೊಡಗು ಮೂಲದ ರೋಷನ್​ ಜೊತೆಗೆ ಅನುಶ್ರೀ ಇಂದು ಮದುವೆಯಾಗಿದ್ದಾರೆ. ಇವರ ಮದುವೆಯ ವಿಷಯವಾಗಿ ಹಲವು ವರ್ಷಗಳಿಂದ ಗಾಸಿಪ್​ಗಳು ಹರಡುತ್ತಲೇ ಇದ್ದವು.

28
ರೆಸಾರ್ಟ್​ನಲ್ಲಿ ನಡೆದ ಮದುವೆ

ಈಗ ಮದುವೆ, ಆಗ ಮದುವೆ ಎಂದೆಲ್ಲಾ ಸೋಷಿಯಲ್​ ಮೀಡಿಯಾಗಳಲ್ಲಿ ಸುದ್ದಿ ಸದ್ದು ಮಾಡುತ್ತಲೇ ಇತ್ತು. ಕೊನೆಗೂ ಅನುಶ್ರೀ ಸಾಕಷ್ಟು ರಹಸ್ಯವಾಗಿಯೇ ತಮ್ಮ ವಿಷಯವನ್ನು ಇಟ್ಟಿದ್ದರು. ಕೊನೆಗೂ ಮದುವೆಯಾಗಿದೆ. ಬೆಂಗಳೂರಿನ ಕಗ್ಗಲಿಪುರ ಬಳಿಯ ರೆಸಾರ್ಟ್​ನಲ್ಲಿ ನಿನ್ನೆ ಮದುವೆ ನಡೆದಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರು ಆಗಮಿಸಿ ನೂತನ ವಧು-ವರರನ್ನು ಆಶೀರ್ವದಿಸಿದ್ದಾರೆ.

38
ಅನುಶ್ರೀ ಆ್ಯಂಕರಿಂಗ್​ಗೆ ಭಾರಿ ಡಿಮಾಂಡ್​

ಆ್ಯಂಕರ್​ ಅನುಶ್ರೀ ಅವರಿಗೆ ಕಿರುತೆರೆಯಲ್ಲಿ ಭಾರಿ ಡಿಮಾಂಡ್​ ಇರುವುದು ಗೊತ್ತೇ ಇದೆ. ಜೀ ಟಿವಿ, ಕಲರ್ಸ್​ ಕನ್ನಡ ಸೇರಿದಂತೆ ಕೆಲವು ಚಾನೆಲ್​ಗಳಲ್ಲಿ ಇವರು ಆ್ಯಂಕರಿಂಗ್​ ಮಾಡಿದ್ದಾರೆ. ಯಾವ ರಿಯಾಲಿಟಿ ಷೋ ನೋಡಿದರೂ ಅದರಲ್ಲಿ ಅನುಶ್ರೀ ಅವರೇ ಇರುತ್ತಾರೆ. ಇಂಥ ರಿಯಾಲಿಟಿ ಷೋ ಎಂದರೆ ಸಾಕು, ಅದರ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾತನಾಡಬಲ್ಲೆ, ಇದಕ್ಕೇ ತಮಗೆ ಅಷ್ಟು ಡಿಮಾಂಡ್​ ಇರುವುದು ಎಂದು ಕೂಡ ಅನುಶ್ರೀ ಅವರು ಹೇಳಿದ್ದಾರೆ. ಈ ಮೂಲಕ ಇವರಿಗೆ ಅಷ್ಟು ಬೇಡಿಕೆ ಯಾಕೆ ಎನ್ನುವುದು ಗೊತ್ತಾಗುತ್ತದೆ.

48
ಸೀರಿಯಲ್​ ತಾರೆಯರಿಗಿಂತ ಭಿನ್ನ

ಕಿರುತೆರೆಯ ನಟ-ನಟಿಯರ ಮದುವೆಯೆಂದರೆ, ಸಾಮಾನ್ಯವಾಗಿ ಅವರ ಪಾತ್ರ ಇರುವ ದೃಶ್ಯಗಳನ್ನು ಮೊದಲೇ ಶೂಟಿಂಗ್​ ಮಾಡಿ ಮುಗಿಸುತ್ತಾರೆ. ಅವರು ವಾಪಸಾಗುವವರೆಗೂ ಅವರು ಸೀರಿಯಲ್​ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಆದರೆ ರಿಯಾಲಿಟಿ ಷೋಗಳು ಹಾಗಾಗುವುದಿಲ್ಲ. ಮೊದಲೇ ರಿಕಾರ್ಡಿಂಗ್​ ಮಾಡಿದರೂ 3-4 ಕಂತುಗಳ ರಿಕಾರ್ಡಿಂಗ್​ ಮಾಡುವುದು ಸುಲಭವಲ್ಲ.

58
ಆ್ಯಂಕರಿಂಗ್​ ಗತಿ ಏನು?

ಆದ್ದರಿಂದ ಆ್ಯಂಕರ್​ ಅನುಶ್ರೀ ಅವರು ಇದಾಗಲೇ ಆ್ಯಂಕರಿಂಗ್​ ಮಾಡ್ತಿರೋ ರಿಯಾಲಿಟಿ ಷೋಗಳ ಗತಿಯೇನು ಎನ್ನುವ ಚಿಂತೆ ಅಭಿಮಾನಿಗಳಿಗೆ ಇದ್ದೇ ಇದೆ. ಈ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೇ ಅನುಶ್ರೀ ಅವರು ಶಾಕಿಂಗ್​ ಉತ್ತರ ಕೊಟ್ಟಿದ್ದಾರೆ. ಅದೇನೆಂದರೆ, ನಾಡಿದ್ದೇ ನಾನು ಡ್ಯೂಟಿಗೆ ಜಾಯಿನ್​ ಆಗುತ್ತಿದ್ದೇನೆ. ಇವರು (ಗಂಡ) ಕೂಡ ಡ್ಯೂಟಿಗೆ ಹೋಗುತ್ತಿದ್ದಾರೆ ಎಂದಿದ್ದಾರೆ.

68
ರಜೆ ಹಾಕದ ಅನುಶ್ರೀ

ಅಲ್ಲಿಗೆ ಅನುಶ್ರೀ ಅವರು ಸುದೀರ್ಘ ರಜೆ ಹಾಕದೇ ಕೆಲಸದ ಮೇಲೆ ಗಮನ ಕೊಟ್ಟಿರುವುದು ಗೊತ್ತಾಗುತ್ತದೆ. ಮದುವೆಯಾದ ಮೇಲೆ ಹನಿಮೂನ್​ಗೆ ಹೋಗ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಅವರ ಅಭಿಮಾನಿಗಳನ್ನು ಕಾಡುತ್ತಿದೆ. ಏಕೆಂದರೆ ಮದುವೆಯಾದ ಎರಡೇ ದಿನಕ್ಕೆ ಅವರು ಕೆಲಸಕ್ಕೆ ಹಾಜರಾಗುವುದಾಗಿ ಹೇಳಿದ್ದಾರೆ.

78
ಪತಿಯ ಪರಿಚಯ

ಅಂದಹಾಗೆ, ಅನುಶ್ರೀ ಪತಿಯ ಹೆಸರು ರೋಷನ್.‌ ರಾಮಮೂರ್ತಿ ಹಾಗೂ ಸಿಸಿಲಿಯಾ ಇವರ ತಂದೆ-ತಾಯಿ. ರೋಷನ್‌ ಮೂಲತಃ ಕೊಡಗಿನವರಾಗಿದ್ದ, ಉದ್ಯಮಿಯಾಗಿದ್ದಾರೆ. ಅಂದಹಾಗೆ, ಅನುಶ್ರೀ ಹಾಗೂ ರೋಷನ್‌ ಅವರು ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದು, ಇವರದ್ದು ಲವ್‌ ಕಂ ಅರೇಂಜ್ಡ್‌ ಮ್ಯಾರೇಜ್‌ ಎಂದು ಹೇಳಲಾಗುತ್ತಿದೆ. ಇಂದು ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಈ ಜೋಡಿ ಕಾಲಿಟ್ಟಿದ್ದು, ಮದುವೆ ಕಾರ್ಯ ನಡೆಯುತ್ತಿದೆ.

88
ಪುನೀತ್​ ಜೊತೆ ಅನುಶ್ರೀ ದಂಪತಿ

ಪುನೀತ್​ ರಾಜ್​ಕುಮಾರ್​ ಅವರ ಅಪ್ಪಟ ಅಭಿಮಾನಿಯಾಗಿರೋ ಅನುಶ್ರೀ ಅವರು, ಎಐ ಮೂಲಕ ಅವರ ಜೊತೆಯಲ್ಲಿಯೇ ಇರುವ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories