'ಅಮೃತಧಾರೆ' ಧಾರಾವಾಹಿಯು ಪ್ರೇಮಕಥೆಯಿಂದ ಆರಂಭವಾಗಿ ಇದೀಗ ಟ್ವಿಸ್ಟ್‌ಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಮಗಳು ಮಿಂಚುವಿನ ಕಥೆಯ ನಡುವೆ, ಜೈದೇವನ ಕುತಂತ್ರದಿಂದಾಗಿ ಗೌತಮ್ ಇದೀಗ ಪೊಲೀಸರಿಂದ ಬಂಧನಕ್ಕೊಳಗಾಗಿದ್ದು, ಕಥೆ ಅನಿರೀಕ್ಷಿತ ತಿರುವು ಪಡೆದುಕೊಂಡಿದೆ.
ಮಧ್ಯವಸ್ಕಯರ ನವೀರಾದ ಪ್ರೇಮ ಸ್ಟೋರಿಯಿಂದ ಆರಂಭವಾದ ಅಮೃತಧಾರೆ ಸೀರಿಯಲ್ (Amruthadhaare Serial) ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ, ಕಥೆ ಬೇರೆ ಕಡೆ ಪ್ರಯಾಣ ಬೆಳೆಸಿದೆ.
26
ಭೂಮಿಕಾ ಎಂಟ್ರಿ
ಮೊದಲಿನಿಂದಲೂ ಗೌತಮ್ಗೆ ಸಿಕ್ಕಿದ್ದು ಕಷ್ಟವೇ. ಚಿಕ್ಕಮ್ಮ ವಿಲನ್ ಎನ್ನೋದು ತಿಳಿಯದೇ ಗೌತಮ್ ಕುಟುಂಬಕ್ಕಾಗಿ ಎಲ್ಲವನ್ನೂ ಮಾಡುತ್ತಾ ಬಂದವ. ಭೂಮಿಕಾಳ ಎಂಟ್ರಿ ಆದ ಮೇಲೆ ಇನ್ನೇನು ಸಂತೋಷ ಸಿಗುತ್ತದೆ ಎನ್ನುವಷ್ಟರಲ್ಲಿಯೇ ಏನೇನೋ ಆಗೋಯ್ತು.
36
ಮನೆಬಿಟ್ಟ ಭೂಮಿಕಾ
ಅವಳಿ ಮಕ್ಕಳು ಹುಟ್ಟಿದ್ದರೆ ಒಂದು ಮಗುವನ್ನು ಕಳೆದುಕೊಂಡ. ಆ ನೋವು ಇನ್ನೂ ಮಾಯಲಿಲ್ಲ ಎನ್ನುವಾಗಲೇ ಕ್ಷುಲ್ಲಕ ಕಾರಣಕ್ಕೆ ಭೂಮಿಕಾ ಬಿಟ್ಟು ಹೋದಳು.
ಚಿಕ್ಕಮ್ಮ ಮತ್ತು ತಮ್ಮ ಜೈದೇವನ ಕುತಂತ್ರದಿಂದ ಮನೆ ಬಿಡುವಂತಾಯಿತು. ಭೂಮಿಕಾಳಿಗಾಗಿ ಹುಡುಕಿ ಐದು ವರ್ಷ ಅಲೆದ ಗೌತಮ್.
56
ಮಿಂಚುವಿನ ಸ್ಟೋರಿ
ಇನ್ನೇನು ಭೂಮಿಕಾ ಸಿಕ್ಕಳು ಎನ್ನುವಾಗಲೇ ಮಿಂಚುವಿನ ಸ್ಟೋರಿ ಶುರುವಾಯ್ತು. ಮಗಳ ರೂಪದಲ್ಲಿ ಮಿಂಚು ಸಿಕ್ಕಾಗಲೇ ಮಹಿಮಾ ತನಗೆ ಬೇಕೆಂದು ಕುಳಿತುಕೊಂಡಳು. ಅವಳಿಗೆ ಅನಿವಾರ್ಯವಾಗಿ ಮಗಳನ್ನು ದತ್ತು ಕೊಡುವಂತಾಯ್ತು.
66
ಗೌತಮ್ ಅರೆಸ್ಟ್
ಇದರ ನಡುವೆಯೇ ಜೈದೇವ್ ಇದೀಗ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾನೆ. ತಾವೇ ಮಿಂಚು ಅಪ್ಪ-ಅಮ್ಮ ಎಂದು ಜೋಡಿ ಬಂದಿದೆ. ಮಗು ಕಾಣೆಯಾಗಿದೆ ಎಂದು ಹೇಳಿದಾಗ ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಬೇರೆಯವರ ಮಗುವನ್ನು ಇಟ್ಟುಕೊಂಡ ತಪ್ಪಿಗೆ ಮಿಂಚು ಸಿಗುವವರೆಗೆ ನೀವು ಕಸ್ಟಡಿಯಲ್ಲಿ ಇರಬೇಕು ಎಂದು ಗೌತಮ್ನನ್ನು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಸೀರಿಯಲ್ ವೀಕ್ಷಕರು ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. ಯಾಕೆ ನಿರ್ದೇಶಕರಿಗೆ ಗೌತಮ್ ಮೇಲೆ ಇಷ್ಟು ಸಿಟ್ಟು ಎಂದು ಪ್ರಶ್ನಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.