ಶೆಫಾಲಿ ನಿಧನದ ನಂತರ ವಿಡಿಯೋ ಮಾಡಿದ ಮಲ್ಲಿಕಾ; 'ನೀವು ಸರ್ಜರಿ ಮಾಡಿಸಿಕೊಂಡಿಲ್ವ' ಅನ್ನೋದಾ ನೆಟ್ಟಿಗರು

Published : Jul 01, 2025, 03:22 PM ISTUpdated : Jul 02, 2025, 06:44 PM IST

ಪ್ರಸ್ತುತ ನಟಿ ಮಲ್ಲಿಕಾ ಶೆರಾವತ್ ಕೂಡ ತಮ್ಮ ಮನದಾಳದ ಮಾತುಗಳನ್ನಾಡಿದ್ದು, ಅವರು ಸೌಂದರ್ಯದ ಕುರಿತು ಬಹುಶಃ ಎಲ್ಲರೂ ಯೋಚಿಸವಂತಹ ಸಲಹೆಯನ್ನೇ ಜನರಿಗೆ ನೀಡಿದ್ದಾರೆ.

PREV
16
ಅಸಮಾಧಾನ ವ್ಯಕ್ತಪಡಿಸಿದ ಸೆಲೆಬ್ರಿಟಿಗಳು, ಫ್ಯಾನ್ಸ್

Mallika Sherawat Video: ಬಾಲಿವುಡ್ ನಟಿ, ಮಾಡೆಲ್ ಶೆಫಾಲಿ ಜರಿವಾಲಾ ಕೇವಲ ಮೂರು ದಿನಗಳ ಹಿಂದೆ ನಿಧನರಾದರು. ಅಂಥ ದೊಡ್ಡ ಕಾಯಿಲೆ ಇಲ್ಲದಿದ್ದರೂ ಅವರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾಗಿರುವುದಕ್ಕೆ ಎಲ್ಲರೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

26
ಬ್ಯೂಟಿ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದ ಶೆಫಾಲಿ

ಶೆಫಾಲಿ ಜರಿವಾಲಾ ಮರಣದ ನಂತರ ವಿವಿಧ ಪ್ರಶ್ನೆಗಳು ಎದ್ದಿವೆ. ಇದೀಗ ಬೆಳಕಿಗೆ ಬಂದಿರುವ ದೊಡ್ಡ ವಿಷಯವೆಂದರೆ ನಟಿ 5-6 ವರ್ಷಗಳಿಂದ ಬ್ಯೂಟಿ ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದರು. ಇದು ಸಾವಿಗೆ ಕಾರಣ ಎಂದು ಹೇಳಲಾಗಿಲ್ಲವಾದರೂ, ಇದನ್ನು ಕೇಳಿದ ನಂತರ ಎಲ್ಲರೂ ಜಾಗೃತರಾಗಿದ್ದಾರೆ.

36
ಸಲಹೆ ನೀಡಿದ ಮಲ್ಲಿಕಾ

ಪ್ರಸ್ತುತ ನಟಿ ಮಲ್ಲಿಕಾ ಶೆರಾವತ್ ಕೂಡ ತಮ್ಮ ಮನದಾಳದ ಮಾತುಗಳನ್ನಾಡಿದ್ದು, ಅವರು ಸೌಂದರ್ಯದ ಕುರಿತು ಬಹುಶಃ ಎಲ್ಲರೂ ಯೋಚಿಸವಂತಹ ಸಲಹೆಯನ್ನೇ ಜನರಿಗೆ ನೀಡಿದ್ದಾರೆ. 

46
ಇಲ್ಲಿದೆ ನೋಡಿ ವಿಡಿಯೋ

ಹೌದು. ಮಲ್ಲಿಕಾ ಶೆರಾವತ್ ಇತ್ತೀಚೆಗೆ ಒಂದು ವಿಡಿಯೋ ಹಂಚಿಕೊಂಡಿದ್ದು, ಆ ವಿಡಿಯೋದಲ್ಲಿ "ನಿಮಗೆಲ್ಲರಿಗೂ ಶುಭೋದಯ, ನಾನು ಈಗಷ್ಟೇ ಎಚ್ಚರಗೊಂಡು ಸೆಲ್ಫಿ ವಿಡಿಯೋ ಮಾಡಿ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕೆಂದು ಯೋಚಿಸಿದೆ. ನಾನು ಯಾವುದೇ ಫಿಲ್ಟರ್ ಬಳಸಿಲ್ಲ, ನಾನು ಯಾವುದೇ ಮೇಕಪ್ ಹಾಕಿಕೊಂಡಿಲ್ಲ, ನಾನು ಇನ್ನೂ ನನ್ನ ಕೂದಲನ್ನು ಬಾಚಿಕೊಂಡಿಲ್ಲ. ನಾನು ಮಾಡುತ್ತಿರುವ ಮೊದಲ ಕೆಲಸ ಇದು" ಎಂದು ಹೇಳಿದ್ದಾರೆ.

56
ಆರೋಗ್ಯಕರ ಜೀವನ ವಿಧಾನಕ್ಕೆ ಯೆಸ್ ಹೇಳಿ

ಹಾಗೆಯೇ "ನಾವೆಲ್ಲರೂ ಒಟ್ಟಾಗಿ ಬೊಟಾಕ್ಸ್‌ಗೆ, ಕೃತಕ ಕಾಸ್ಮೆಟಿಕ್ ಫಿಲ್ಲರ್‌ಗಳಿಗೆ ನೋ ಎಂದು ಹೇಳಲು ಮತ್ತು ಆರೋಗ್ಯಕರ ಜೀವನ ವಿಧಾನಕ್ಕೆ ಯೆಸ್" ಎಂದು ಹೇಳಲು ನಾನು ಈ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ" ಎಂದು ಹೇಳಿದರು.

66
ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲವೇ?

ನಟಿಯ ಈ ಪೋಸ್ಟ್‌ಗೆ ಅಭಿಮಾನಿಗಳು ಕೂಡ ಒಬ್ಬೊಬ್ಬರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದಾರೆ. ಜನರು ಅವರ ಉಪಕ್ರಮ (Initiative)ವನ್ನು ಶ್ಲಾಘಿಸುತ್ತಿದ್ದಾರೆ. ನಿಜಕ್ಕೂ ನಿಮ್ಮ ಸೌಂದರ್ಯ ನೈಜವಾದದ್ದು ಎಂದು ಶ್ಲಾಘಿಸುತ್ತಿದ್ದಾರೆ. ಜೊತೆಗೆ "ನೀವು ಎಂದಿಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲವೇ" ಎಂದು ಮತ್ತೆ ಕೆಲವು ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories