Maadhavi Family Vacation: ಫ್ಯಾಮಿಲಿ ಜೊತೆ ಇಟಲಿಯಲ್ಲಿ ಮೋಜು ಮಾಡ್ತಿದ್ದಾರೆ ಕನ್ನಡಿಗರ ಮನಗೆದ್ದ ಅಣ್ಣಾವ್ರ ನಾಯಕಿ…

Published : Jul 01, 2025, 03:10 PM ISTUpdated : Jul 01, 2025, 03:13 PM IST

ಒಂದು ಕಾಲದಲ್ಲಿ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಟಿ ಮಾಧವಿ. ಇದೀಗ ಫ್ಯಾಮಿಲಿ ಜೊತೆ ಏನು ಮಾಡ್ತಿದ್ದಾರೆ ನೋಡಿ. 

PREV
17

ಕನ್ನಡ ಚಿತ್ರರಂಗದಲ್ಲಿ 80ನೇ ದಶಕದಲ್ಲಿ ಮಿಂಚಿದ ನಟಿ ಅಂದ್ರೆ ಅದು ಮಾಧವಿ (Actress Maadhavi). ಡಾ. ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತನಾಗ್, ಅಂಬರೀಷ್ ಸೇರಿ ಹಲವು ನಟರ ಜೊತೆ ನಟಿಸಿದ ನಟಿ ಅಂದು ಕನ್ನಡಿಗರ ಮೋಸ್ಟ್ ಫೇವರಿಟ್ ಆಗಿದ್ದರು. ಕಣ್ಣಲ್ಲಿ ಮಾತನಾಡುತ್ತಿದ್ದ ನಟಿ ಚಿತ್ರರಂಗದಿಂದ ದೂರ ಸರಿದು ಹಲವು ವರ್ಷಗಳೇ ಕಳೆದಿವೆ.

27

ಚಿತ್ರರಂಗದ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟು, ಸಿನಿಮಾದಿಂದ ದೂರ ಸರಿದಿರುವ ನಟಿ ಮಾಧವಿ, ನ್ಯೂಜೆರ್ಸಿಯಲ್ಲಿ ನೆಲೆಯಾಗಿದ್ದಾರೆ. ಸದ್ಯ ಮಾಧವಿ ಅವರು ತಮ್ಮ ಕುಟುಂಬದ ಜೊತೆ ಇಟಲಿಗೆ ತೆರಳಿದ್ದು, ಅಲ್ಲಿ ವೆಕೇಶನ್ ಎಂಜಾಯ್ ಮಾಡ್ತಿದ್ದಾರೆ. 

37

ತಮ್ಮ ವೆಕೇಶನ್ ಫೋಟೊಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಫೋಟೊದಲ್ಲಿ ನಟಿ ಪತಿ ರಾಲ್ಫ್ ಶರ್ಮಾ, ಮಕ್ಕಳಾದ ಎವಿಲಿನ್ ಶರ್ಮಾ, ಟಿಫಾನಿ ಶರ್ಮಾ, ಪ್ರಿಸ್ಕಿಲಾ ಶರ್ಮಾ ಜೊತೆಗೆ ಕಾಣಿಸಿಕೊಂಡಿದ್ದಾರೆ.

47

ನಟಿ ಮಾಧವಿ ಅವರು ಭಾರತೀಯ ಮೂಲದ ಬ್ಯುಸಿನೆಸ್ ಮೆಸ್ ರಾಲ್ಫ್ ಶರ್ಮಾ ಅವರನ್ನು ವಿವಾಹವಾಗಿದ್ದು, ಈ ಜೋಡಿಗೆ ಮೂವರು ಹೆಣ್ಮಕ್ಕಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ ಹೆಚ್ಚಾಗಿ ತಮ್ಮ ಫ್ಯಾಮಿಲಿ ಫೋಟೊಗಳನ್ನು (family photos) ಹಂಚಿಕೊಳ್ಳುತ್ತಲೇ ಇರುತ್ತಾರೆ.

57

ಮೂವರು ಹೆಣ್ಣುಮಕ್ಕಳ ತಾಯಿಯಾಗಿರುವ ಮಾಧವಿ, ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. ನಟಿಗೆ 62 ವರ್ಷ ವಯಸ್ಸಾಗಿದ್ದು, ತಮ್ಮ ಸ್ಟೈಲ್, ಅಧಾ ಇನ್ನೂ ಕಡಿಮೆಯಾಗಿಲ್ಲ. ಮಾಧವಿ ಮಕ್ಕಳು ಸಹ ಅಮ್ಮನಂತೆ ಸುಂದರ ಕಣ್ಣುಗಳ ಒಡತಿಯರಾಗಿದ್ದಾರೆ.

67

ಆಂಧ್ರಪ್ರದೇಶದಲ್ಲಿ ಜನಿಸಿದ ವಿಜಯಲಕ್ಷ್ಮೀ ಮಾಧವಿಯಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು. ಅವರು ತಮಿಳು, ತೆಲುಗು, ಮಲಯಾಲಂ, ಹಿಂದಿ ಹಾಗೂ ಕನ್ನಡ ಸೇರಿ ಸುಮಾರು 200 ಕ್ಕೂ ಅಧಿಕ ಸಿನಿಮಾಗಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ 25 ಸಿನಿಮಾಗಳಲ್ಲಿ (kannada films) ನಟಿಸಿದ್ದಾರೆ. ಕೊನೆಯದಾಗಿ ನಟಿಸಿದ್ದು ಕೂಡ ಕನ್ನಡ ಸಿನಿಮಾದಲ್ಲೇ.

77

ಹಾಲು ಜೇನು, ಗರುಡ ರೇಖೆ, ಚಿನ್ನದಂಥ ಮಗ, ಚಾಣಕ್ಯ, ಭಾಗ್ಯದ ಲಕ್ಷ್ಮೀ ಬಾರಮ್ಮ, ಅನುರಾಗ ಅರಳಿತು, ಮಲಯ ಮಾರುತ, ಜೀವನ ಚೈತ್ರ, ಆಕಸ್ಮಿಕ (Akasmika), ಒಡಹುಟ್ಟಿದವರು ಮಾಧವಿ ನಟಿಸಿದ ಕನ್ನಡದ ಪ್ರಮುಖ ಚಲನಚಿತ್ರಗಳು.

Read more Photos on
click me!

Recommended Stories