ಆದಿತ್ಯ ರಾಯ್‌ ಕಪೂರ್‌ ಜೊತೆ ಬ್ರೇಕಪ್‌ ಬೆನ್ನಲ್ಲಿಯೇ, ಅನನ್ಯಾ ಪಾಂಡೆ 'ಹಾಟ್‌' ಬಿಕಿನಿ ಫೋಟೋಸ್‌ ವೈರಲ್‌ !

Published : May 15, 2024, 04:34 PM ISTUpdated : May 15, 2024, 04:35 PM IST

ಇತ್ತೀಚೆಗೆ ನಟಿ ಅನನ್ಯಾ ಪಾಂಡೆ ತಮ್ಮ ದೀರ್ಘಕಾಲದ ಗೆಳೆಯ ಆದಿತ್ಯ ರಾಯ್‌ ಕಪೂರ್‌ ಜೊತೆ ಬ್ರೇಕ್‌ಅಪ್‌ ಮಾಡಿಕೊಂಡಿದ್ದರು. ಅದರ ಬೆನ್ನಲ್ಲಿಯೇ ಅನನ್ಯಾ ಪಾಂಡೆ ಅವರ ಹಿಂದೆಂದೂ ಕಾಣದ ಬಿಕಿನಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

PREV
18
ಆದಿತ್ಯ ರಾಯ್‌ ಕಪೂರ್‌ ಜೊತೆ ಬ್ರೇಕಪ್‌ ಬೆನ್ನಲ್ಲಿಯೇ, ಅನನ್ಯಾ ಪಾಂಡೆ 'ಹಾಟ್‌' ಬಿಕಿನಿ ಫೋಟೋಸ್‌ ವೈರಲ್‌ !

ತೀರಾ ಇತ್ತೀಚೆಗೆ ಬಂದ ಬ್ರೇಕಿಂಗ್‌ ನ್ಯೂಸ್‌ ಏನೆಂದರೆ, ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಹಾಗೂ ನಟ ಆದಿತ್ಯ ರಾಯ್‌ ಕಪೂರ್‌ ಬ್ರೇಕ್‌ಅಪ್‌ ಆಗಿರುವುದು.
 

28


ದೀರ್ಘ ಕಾಲದಿಂದ ಜೊತೆಯಲ್ಲಿದ್ದ ಇವರಿಬ್ಬರು ತೀರಾ ಇತ್ತೀಚೆಗೆ ಬೇರ್ಪಟ್ಟಿದ್ದರು. ಆದರೆ, ಇವರು ಬೇರೆ ಬೇರೆಯಾಗಲೂ ಇನ್ನೂ ಕಾರಣ ತಿಳಿಸಿಲ್ಲ. ಆದರೆ, ಇವರ ಆಪ್ತ ಮೂಲಗಳು ಮಾತ್ರ ಇದನ್ನು ಖಚಿತಪಡಿಸಿವೆ.

38

ಬ್ರೇಕ್‌ಅಪ್‌ ಆದ ಬಳಿಕ ಅನನ್ಯಾ ಪಾಂಡೆ ಅವರ ಇನ್ಸ್‌ಟಾಗ್ರಾಮ್‌ ಪೋಸ್ಟ್‌ ಸಖತ್‌ ವೈರಲ್‌ ಆಗುತ್ತಿದೆ. ಇದರಲ್ಲಿ ಅನನ್ಯಾ ಪಾಂಡೆ ಈ ಹಿಂದೆಂದೂ ಪ್ರಕಟಿಸಿದ ಹಳೆಯ ಬಿಕಿನಿ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

48

ಈ ಫೋಟೋಗಳನ್ನು ಹಂಚಿಕೊಳ್ಳುವ ವೇಳೆ ಅನನ್ಯಾ ಪಾಂಡೆ, ನನ್ನ ಕ್ಯಾಮೆರಾ ರೋಲ್‌ನಲ್ಲಿ ಮರೆತು ಹೋಗಿದ್ದ ಫೋಟೋಗಳಿವು ಎಂದು ಬರೆದಿದ್ದಾರೆ.
 

58

ಇನ್ನು ಅನನ್ಯಾ ಪಾಂಡೆ ಅವರ ಬಿಕಿನಿ ಫೋಟೋ ಕಂಡು ಅವರ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ. ಅದರೊಂದಿಗೆ ಅವರ ಸೌಂದರ್ಯವನ್ನು ಮೆಚ್ಚಿದ್ದಾರೆ.

68

ಕೆಲವು ಕಾಮೆಂಟ್‌ಗಳಲ್ಲಿ ನಟ ಆದಿತ್ಯ ರಾಯ್‌ ಕಪೂರ್‌ನ ಕಾಲೆಳೆಯಲಾಗಿದೆ. ಈ ಬಿಕಿನಿ ಫೋಟೋಗಳನ್ನು ನೋಡಿದ ಬಳಿಕ, ಆದಿತ್ಯ ರಾಯ್‌ ಕಪೂರ್‌ಗೆ ದೊಡ್ಡ ನಷ್ಟವಾಗಿದೆ ಅನ್ನೋದು ಗೊತ್ತಾಗುತ್ತಿದೆ ಎಂದಿದ್ದಾರೆ.

 

78


ಇನ್ನೂ ಕೆಲವರು ಅನನ್ಯಾ ಪಾಂಡೆ ತನ್ನ ಬ್ರೇಕಪ್ಅನ್ನು ಸಂಭ್ರಮಿಸುವ ಕಾರಣಕ್ಕಾಗಿಯೇ ಇಂಥ ಹಾಟ್‌ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಎಂದಿದ್ದಾರೆ.

88
Most Stunning Bikini Look

ಪ್ರಸ್ತುತ ಅನನ್ಯಾ ಪಾಂಡೆ ಬ್ಯಾಡ್‌ ನ್ಯೂಸ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಲವು ಮೂಲಗಳ ಪ್ರಕಾರ ಅನನ್ಯಾ ಪಾಂಡೆ ಶೀಘ್ರದಲ್ಲಿಯೇ ದಕ್ಷಿಣ ಭಾರತದ ಸಿನಿಮಾಗೆ ಡೆಬ್ಯು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories