ಸ್ಕೂಲ್ ಹೋಮ್‌ವರ್ಕ್‌ ಆದ್ಮೇಲೆ ಶೂಟಿಂಗ್ ಹೋಗ್ಬೇಕು: ಸೀತಾರಾಮ ಸಹಿ ಟೀಚರ್ಸ್‌ ಬಿಗ್ ಸಪೋರ್ಟ್‌

Published : May 15, 2024, 04:16 PM IST

ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತಿರುವ ರಿತು ಪೋಷಕರು. ಶೂಟಿಂಗ್ ಶುರು ಮಾಡೋದು ಹೋಮ್‌ವರ್ಕ್‌ ಆದ್ಮೇಲೆ.....

PREV
18
ಸ್ಕೂಲ್ ಹೋಮ್‌ವರ್ಕ್‌ ಆದ್ಮೇಲೆ ಶೂಟಿಂಗ್ ಹೋಗ್ಬೇಕು: ಸೀತಾರಾಮ ಸಹಿ ಟೀಚರ್ಸ್‌ ಬಿಗ್ ಸಪೋರ್ಟ್‌

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ಪುಟ್ಟ ಹುಡುಗಿ ಸಿಹಿ ನಿಜವಾದ ಹೆಸರು ರಿತು ಸಿಂಗ್. 

28

ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಾರಣ ರಿತು ಆಗಾಗ ಸ್ಕೂಲ್‌ಗೆ ಚಕರ್ ಹಾಕಬೇಕು. ಹೇಗೆ ಸ್ಕೂಲ್‌ ಮತ್ತು ಶೂಟಿಂಗ್ ಮ್ಯಾನೇಜ್ ಮಾಡುತ್ತೀಯಾ ಎಂದು ಪ್ರಶ್ನಿಸಿದ್ದಕ್ಕೆ ಸಿಕ್ಕ ಉತ್ತರವಿದು. 

38

'ಸೀತಾ ರಾಮ ಸೀರಿಯಲ್ ಡೈರೆಕ್ಟರ್ ಮತ್ತು ಕ್ಯಾಮೆರಾ ಮ್ಯಾನ್‌ ಅಂದ್ರೆ ನನಗೆ ತುಂಬಾನೇ ಇಷ್ಟ. ಅವರು ಹೇಳಿಕೊಡುವ ಸಣ್ಣ ಪುಟ್ಟ ವಿಚಾರಕ್ಕೆ ಗಮನ ಕೊಡುತ್ತೀನಿ'

48

'ಸೀತಾರಾಮ ಸೀರಿಯಲ್‌ ಸೆಟ್‌ನಲ್ಲಿ ಇರುವುದಕ್ಕೆ ಸದಾ ಖುಷಿಯಾಗುತ್ತದೆ. ಪ್ರತಿಯೊಬ್ಬರ ಜೊತೆಗೂ ತುಂಬಾ ಎಂಜಾಯ್ ಮಾಡುತ್ತೀನಿ ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

58

'ಜೀವನದಲ್ಲಿ ನಾವು ಯಾವುದಕ್ಕೂ ಹೆದರಿಕೊಳ್ಳಬಾರದು. ನಮ್ಮ ಫಿಯರ್ ಅಥವಾ ಭಯಗಳನ್ನು ಎದುರಿಸಿಲ್ಲ ಅಂದ್ರೆ ನಾವು ಸಾಧನೆ ಮಾಡಲು ಸಾಧ್ಯವಿಲ್ಲ

68

ಆರಂಭದಲ್ಲಿ ಆಕ್ಟಿಂಗ್ ಅಂದ್ರೆ ಇಷ್ಟರಲಿಲ್ಲ. ಸ್ವಲ್ಪ ಭಯ ಕೂಡ ಇತ್ತು.ಆದರೆ ಈಗ ಪ್ರತಿ ದಿನವೂ ಎಂಜಾಯ್ ಮಾಡಲು ಶುರು ಮಾಡಿದ್ದೀನಿ ಎಂದು ಸಿಹಿ ಹೇಳಿದ್ದಾರೆ. 

78

ಸ್ಕೂಲ್ ಹೋಗುವುದಕ್ಕೆ ಖುಷಿಯಾಗುತ್ತದೆ. ಶೂಟಿಂಗ್‌ ಸೆಟ್‌ಗೆ ಬರುವ ಮುನ್ನ ನಾನು ಸ್ಕೂಲ್‌ ಹೋಮ್‌ ವರ್ಕ್‌ ಮುಗಿಸಿಕೊಳ್ಳುತ್ತೀನಿ ಎಂದು ಸಿಹಿ ಮಾತನಾಡಿದ್ದಾಳೆ.

88

ಸ್ಕೂಲ್ ಟೀಚರ್‌ ಮತ್ತು ಸ್ನೇಹಿತರ ಜೊತೆ ಸಂಪರ್ಕದಲ್ಲಿ ಇರುತ್ತೀನಿ. ನನ್ನ ಶೂಟಿಂಗ್, ಆಟದ ಸಮಯ ಮತ್ತು ಸ್ಕೂಲ್‌ನ ಮ್ಯಾನೇಜ್‌ ಮಾಡಲು ಸುಲಭವಾಗುತ್ತದೆ. 

Read more Photos on
click me!

Recommended Stories