ಅಯ್ಯಯ್ಯಬ್ಬಾ..! ಹಲ್ಲಿಯನ್ನು ಹಿಡಿದು ಮುದ್ದಾಡಿದ ನಟಿ ಅದಾ ಶರ್ಮಾ

Published : May 15, 2024, 03:24 PM IST

ಹಲ್ಲಿಗೆ ಹೆದರದ ಹುಡುಗಿಯರು ಯಾರಾದರೂ ಈ ಭೂಮಿ ಮೇಲಿದ್ದರೆ ಅದು ಈಕೆಯೇ ಇರಬೇಕು. ಅದೊಂದು ಮುದ್ದಿನ ಕೂಸು ಎಂಬಂತೆ ಕೈಲಿ ಹಿಡಿದಿದ್ದಾಳೆ 'ದಿ ಕೇರಳ ಸ್ಟೋರಿ' ನಟಿ ಅದಾ ಶರ್ಮಾ.   

PREV
19
ಅಯ್ಯಯ್ಯಬ್ಬಾ..! ಹಲ್ಲಿಯನ್ನು ಹಿಡಿದು ಮುದ್ದಾಡಿದ ನಟಿ ಅದಾ ಶರ್ಮಾ

ನಟಿ ಅದಾ ಶರ್ಮಾ ಕಳೆದ 15 ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಕೇರಳ ಸ್ಟೋರಿಯಿಂದಾಗಿ ಸ್ಟಾರ್‌ಗಿರಿ ಪಡೆದಾಕೆ. ಆಕೆ ಸದಾ ಕೊಂಚ ವಿಭಿನ್ನವಾದ ತನ್ನ ವ್ಯಕ್ತಿತ್ವದಿಂದಾಗಿ ಇನ್ಸ್ಟಾಗ್ರಾಂನಲ್ಲಿ ಕಾಣಿಸಿಕೊಳ್ಳುತ್ತಾಳೆ. 

29

ಈ ಹಿಂದೆ ಕಾಡಾನೆಗಳ ಜೊತೆಗೆ ಪ್ರೀತಿಯಲ್ಲಿ ನಡೆದುಕೊಂಡು ಆ ಅನುಭವ ಹಂಚಿಕೊಂಡಿದ್ದಳು. ಅವುಗಳೊಂದಿಗೆ ನೀರಿನಲ್ಲಿ ಮಿಂದೆದ್ದಿದ್ದಳು. ಕಡೆಗೆ ಆ ಆನೆಯ ಪ್ರೀತಿಗೂ ಪಾತ್ರವಾಗಿದ್ದಳು. 
 

39

ಇನ್ನು ನಾಯಿ ಬೆಕ್ಕುಗಳ ಮೇಲಿನ ನಟಿಯ ಪ್ರೀತಿ ಹಲವಾರು ಬಾರಿ ವ್ಯಕ್ತವಾಗಿದೆ. ಆಕೆ ಬೀದಿ ಬದಿಯ ನಾಯಿಗಳನ್ನು ಮುದ್ದಾಡುತ್ತಾ ಸಾಕಷ್ಟು ಫೋಟೋ ವಿಡಿಯೋ ಹಂಚಿಕೊಂಡಿದ್ದಾಳೆ. 
 

49

ಇವೆಲ್ಲವೂ ಓಕೆ, ಆದರೆ, ಈ ಬಾರಿ ಅದಾ ಶರ್ಮಾ ಮುದ್ದಾಡುತ್ತಿರುವುದು- ಸ್ತ್ರೀಯರು ಹೋಗಲಿ, ಗಂಡಸರು ಕೂಡಾ ನೋಡಿದರೆ ಅಸಹ್ಯ ಪಟ್ಟುಕೊಳ್ಳೋ, ಹೆದರಿ ಹೌಹಾರೋ ಹಲ್ಲಿಯನ್ನು!
 

59

ಹೌದು, ಕೈಲಿ ಹಲ್ಲಿ ಹಿಡಿದು ಮುದ್ದಾಡುತ್ತಿರುವ ಅದಾ ಶರ್ಮಾ ತನ್ನ ಅಭಿಮಾನಿಗಳಿಗೆ ಅವುಗಳ ಬಗ್ಗೆ ಒಂದು ವಿಷಯ ಹೇಳುತ್ತಲೇ ಸಂದೇಶವನ್ನೂ ನೀಡಿದ್ದಾಳೆ.
 

69

ಹಲ್ಲಿಗಳು ತಮ್ಮ ಜೀವಿತಾವಧಿಯ ಪೂರ್ತಿ ನೀರು ಕುಡಿಯದೆಯೇ ಬದುಕುತ್ತವೆ. ಆದರೆ, ನೀವು ಮನುಷ್ಯರಾಗಿರಿ ಅಥವಾ ನಾಯಿಯಾಗಿರಿ- ನೀವಿದನ್ನು ಓದುತ್ತಿದ್ದರೆ ಈಗಲೇ ಹೋಗಿ ನೀರು ಕುಡಿಯುರಿ(ಎಚ್‌ಟುಒ ರಿಮೈಂಡರ್) ಎಂದು ಅದಾ ಬರೆದಿದ್ದಾಳೆ. 

79

ಅದಾ ನೀರು ಕುಡಿಯಿರಿ ಎಂದಿದ್ದಕ್ಕಿಂತ ಆಕೆ ಕೈಲಿ ಹಲ್ಲಿ ಇರುವುದೇ ಎಲ್ಲರ ಗಮನ ಸೆಳೆದಿದೆ. ನಿಜವಾಗಿಯೂ ಅದು ನಿಜವಾದದ್ದಾ ಹೇಳಿ ಎಂದು ಹಲವರು ಕಣ್ಣರಳಿಸಿ(ಎಮೋಜಿಯಲ್ಲಿ) ಕೇಳಿದ್ದಾರೆ. 

89

ಇನ್ನೂ ಹಲವರು, ಹಲ್ಲಿಯನ್ನು ಹುಡುಗಿಯೊಬ್ಬಳು ಕೈಲಿ ಹಿಡಿದಿರುವುದು ನೋಡಿದ್ದು ಇದೇ ಮೊದಲ ಬಾರಿ. ಸಖತ್ ಧೈರ್ಯವಂತರು ನೀವು ಎಂದು ಕಾಮೆಂಟ್ ಮಾಡಿದ್ದಾರೆ. 

99

ಇದಂತೂ ಎಕ್ಸ್ಟ್ರಾರ್ಡಿನರಿ, ಹಲ್ಲಿಗೂ ಹೆದರದ ಹುಡುಗಿ, ನಮ್ಮನೆ ಹಲ್ಲಿಗಳನ್ನು ಹಿಡಿದು ಹೊರ ಹಾಕಿಕೊಡ್ತೀರಾ ಎಂದು ಮತ್ತೆ ಕೆಲವರು ಕೇಳಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories