Sudharani Bengaluru Buzz: ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ನಟಿ ಸುಧಾರಾಣಿ ಅವರು ಇತ್ತೀಚೆಗೆ 'ಬೆಂಗಳೂರು ಬಝ್' ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ, ರಾಜಕೀಯ ಪ್ರವೇಶದ ಕುರಿತು ತಮ್ಮ ನೇರ ನಿಲುವನ್ನು ಹಂಚಿಕೊಂಡಿದ್ದಾರೆ.
ಕನ್ನಡದ ಜನಪ್ರಿಯ ನಟಿ ಸುಧಾರಾಣಿ ಅವರು ಇತ್ತೀಚೆಗೆ ಸುವರ್ಣ ನ್ಯೂಸ್ ನ ಬೆಂಗಳೂರು ಬಜ್ ಪಾಡ್ ಕಾಸ್ಟ್ ನಲ್ಲಿ ಪಾಲ್ಗೊಂಡು ತಮ್ಮ ಜೀವನ ಮತ್ತು ವೃತ್ತಿಜೀವನದ ಬಗ್ಗೆ ಹಲವು ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಸಂವಾದದಲ್ಲಿ ಸುಧಾರಾಣಿ ಅವರು ರಾಜಕೀಯ ಪ್ರವೇಶದ ಬಗ್ಗೆ ನೀಡಿರುವ ಖಡಕ್ ಮತ್ತು ಪಕ್ವವಾದ ಉತ್ತರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
27
ರಾಜಕೀಯದ ಬಗ್ಗೆ ಸುಧಾರಾಣಿ ನಿಲುವು
ಸಂದರ್ಶನದ ವೇಳೆ ನಿರೂಪಕಿ ಭಾವನಾ ನಾಗಯ್ಯ ಅವರು, "ನಿಮ್ಮ ಆಪ್ತ ಗೆಳತಿಯರಾದ ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅವರು ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ, ನೀವು ರಾಜಕೀಯಕ್ಕೆ ಬರುವ ಆಲೋಚನೆ ಮಾಡಿದ್ದೀರಾ?" ಎಂದು ಪ್ರಶ್ನಿಸಿದರು. ಇದಕ್ಕೆ ಬಹಳ ಸರಳವಾಗಿ ಹಾಗೂ ಮಾರ್ಮಿಕವಾಗಿ ಉತ್ತರಿಸಿದ್ದಾರೆ ಸುಧಾರಾಣಿ.
37
ರಾಜಕೀಯಕ್ಕೇ ಬರಬೇಕಾ?
"ಒಳ್ಳೆಯ ಕೆಲಸ ಮಾಡಲಿಕ್ಕೆ ರಾಜಕೀಯಕ್ಕೇ ಬರಬೇಕಾ?" ಎಂದು ಉತ್ತರಿಸಿರುವ ಸುಧಾರಾಣಿ ಅವರು ತಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. "ನನ್ನ ವೇವ್ ಲೆಂತ್ (Wavelength) ರಾಜಕೀಯಕ್ಕೆ ಮ್ಯಾಚ್ ಆಗುವುದಿಲ್ಲ" ಎಂದು ಹೇಳುವ ಮೂಲಕ ಅಧಿಕಾರಕ್ಕಿಂತ ಸೇವೆಯೇ ಮುಖ್ಯ ಎಂಬ ಸಂದೇಶ ನೀಡಿದ್ದಾರೆ.
1973ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಸುಧಾರಾಣಿ (ಮೂಲ ಹೆಸರು ಜಯಶ್ರೀ), 'ಕಿಲಾಡಿ ಕಿಟ್ಟು' ಚಿತ್ರದ ಮೂಲಕ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. 1986ರಲ್ಲಿ ಶಿವರಾಜ್‌ಕುಮಾರ್ ಅವರ ಚೊಚ್ಚಲ ಸಿನಿಮಾ 'ಆನಂದ್' ಮೂಲಕ ನಾಯಕಿಯಾಗಿ ಮಿಂಚಿದ ಇವರು, ನಂತರ ಹಿಂತಿರುಗಿ ನೋಡಲೇ ಇಲ್ಲ. 'ರಣರಂಗ', 'ಮೈಸೂರು ಮಲ್ಲಿಗೆ', 'ಮಣ್ಣಿನ ದೋಣಿ', 'ಸ್ಪರ್ಶ'ದಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿ ಕನ್ನಡಿಗರ ಮನಗೆದ್ದರು. ಎರಡು ಬಾರಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿರುವ ಇವರು, ಕೇವಲ ನಟಿಯಷ್ಟೇ ಅಲ್ಲದೆ ಅದ್ಭುತ ಧ್ವನಿ ಕಲಾವಿದೆಯೂ ಹೌದು.
57
ಕಿರುತೆರೆಯಲ್ಲೂ ಸಕ್ರಿಯ
ಬೆಳ್ಳಿಪರದೆಯ ಮೇಲೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಸುಧಾರಾಣಿ ಅವರು ಸಕ್ರಿಯರಾಗಿದ್ದಾರೆ. 'ಶ್ರೀರಸ್ತು ಶುಭಮಸ್ತು' ಅಂತಹ ಜನಪ್ರಿಯ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
67
ಅಪರೂಪದ ಸ್ನೇಹ
ಸುಧಾರಾಣಿ, ಶ್ರುತಿ ಮತ್ತು ಮಾಳವಿಕಾ ಅವಿನಾಶ್ ಅವರ ಸ್ನೇಹ ಸ್ಯಾಂಡಲ್‌ವುಡ್‌ನಲ್ಲಿ ಬಹಳ ಪ್ರಸಿದ್ಧ. ಈ ಮೂವರು ಭೇಟಿಯಾದಾಗಲೆಲ್ಲಾ ರಾಜಕೀಯದ ಬಣ್ಣವಿಲ್ಲದೆ ಹರಟೆ ಹೊಡೆಯುತ್ತಾರೆ. ಶ್ರುತಿ ಮತ್ತು ಮಾಳವಿಕಾ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದರೂ, ಸುಧಾರಾಣಿ ಅವರು ಮಾತ್ರ ತಮ್ಮ ವೃತ್ತಿ ಮತ್ತು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಈ ಸ್ನೇಹವನ್ನು ಜೀವಂತವಾಗಿರಿಸಿದ್ದಾರೆ.
77
'ನಂದಿನಿ' ಉತ್ಪನ್ನಗಳ ನೂತನ ರಾಯಭಾರಿ
ಬಮೂಲ್ ಸಂಸ್ಥೆಯು ನಟಿ ಸುಧಾರಾಣಿ ಅವರನ್ನು 'ನಂದಿನಿ' ಉತ್ಪನ್ನಗಳ ನೂತನ ರಾಯಭಾರಿಯನ್ನಾಗಿ ಅಧಿಕೃತವಾಗಿ ನೇಮಿಸಿದೆ. ಡಾ. ರಾಜ್‌ಕುಮಾರ್ ಮತ್ತು ಅವರ ಪುತ್ರರು ನಡೆದ ಹಾದಿಯಲ್ಲೇ ಸಾಗುತ್ತಿರುವ ಈ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಸುಧಾರಾಣಿ, ರೈತರ ಕಲ್ಯಾಣ ಹಾಗೂ ಎ2 (A2) ಹಾಲು ಮತ್ತು ತುಪ್ಪದಂತಹ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ತಲುಪಿಸಲು ಸಜ್ಜಾಗಿದ್ದಾರೆ. ಸುಧಾರಾಣಿ ಅವರ ಸರಳ ವ್ಯಕ್ತಿತ್ವವು ನಂದಿನಿ ಬ್ರ್ಯಾಂಡ್‌ನ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ತಿಳಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.