ಕ್ಯಾಮೆರಾಗಳ ಮುಂದೆಯೇ ನಟಿಯರ ಸೊಂಟಕ್ಕೆ ಕೈ ಹಾಕಿದ ನಟ ಶಕೀಬ್ ಖಾನ್: ವಿಡಿಯೋ ವೈರಲ್

Published : Apr 04, 2026, 01:19 PM IST

'ಪ್ರಿನ್ಸ್' ಸಿನಿಮಾ ಸುದ್ದಿಗೋಷ್ಠಿಯಲ್ಲಿ ನಟ ಶಕೀಬ್ ಖಾನ್, ನಟಿ ಜ್ಯೋತಿರ್ಮಯಿ ಅವರ ಸೊಂಟಕ್ಕೆ ಕೈ ಹಾಕಿ ಮುಜುಗರ ಉಂಟುಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದ್ದು, ನಟ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

PREV
15
ನಟಿಯ ಸೊಂಟಕ್ಕೆ ಕೈ ಹಾಕಿದ ನಟ ಶಕೀಬ್ ಖಾನ್

ನಟ ಶಕೀಬ್ ಖಾನ್ ಸಿನಿಮಾದ ಸುದ್ದಿಗೋಷ್ಠಿ ಸಂದರ್ಭದಲ್ಲಿ ನಟಿಯ ಸೊಂಟಕ್ಕೆ ಕೈ ಹಾಕಿರುವ ವಿಡಿಯೋ ಸೋಸಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಬಳಿಕ ನಟ ಶಕೀಬ್ ಖಾನ್ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನಟನ ನಡವಳಿಕೆ ಬಗ್ಗೆ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ದಾರೆ. ಹಾಗೆಯೇ ನಟಿ ಇದೆಲ್ಲವನ್ನು ಸಹಿಸಿಕೊಳ್ಳುವ ಅಗತ್ಯವಿರಲಿಲ್ಲ. ಅಲ್ಲಿಯೇ ನಟನ ವರ್ತನೆಯನ್ನು ಖಂಡಿಸಬೇಕಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

25
ಪ್ರಿನ್ಸ್ ಸಿನಿಮಾದ ನಟ ಶಕೀಬ್ ಖಾನ್

ಬಾಂಗ್ಲಾದೇಶದ ನಟ ಶಕೀಬ್ ಖಾನ್ ನಟನೆಯ ಸಿನಿಮಾ ಪ್ರಿನ್ಸ್ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಸೋಲಿನ ಸಾಲಿಗೆ ಪ್ರಿನ್ಸ್ ಸಿನಿಮಾ ಸೇರಿಕೊಂಡಿತ್ತು. ಈ ಚಿತ್ರದಲ್ಲಿ ಶಕೀಬ್ ಖಾನ್ ಜೊತೆ ಇಬ್ಬರು ನಾಯಕಿಯರು ನಟಿಸಿದ್ದರು. ಸುದ್ದಿಗೋಷ್ಠಿ ವೇಳೆ ನಟಿಯರಿಬ್ಬರ ಮಧ್ಯೆದಲ್ಲಿ ನಿಂತುಕೊಂಡು ಶಕೀಬ್ ಖಾನ್ ಕ್ಯಾಮೆರಾಗಳಿಗೆ ಪೋಸ್ ನೀಡಿದ್ದರು. ಈ ವೇಳೆ ನಟಿ ಜ್ಯೋತಿರ್ಮಯಿ ಅವರ ಸೊಂಟಕ್ಕೆ ನಟ ಶಕೀಬ್ ಕೈ ಹಾಕಿದ್ದರು. ನಟಿ ಮೃದುವಾಗಿ ವಿರೋಧ ವ್ಯಕ್ತಪಡಿಸಿದ್ರೂ ಶಕೀಬ್ ಮಾತ್ರ ಕೈ ತೆಗೆದಿರಲಿಲ್ಲ.

35
ತೀವ್ರ ಮುಜುಗೊರಕ್ಕೊಳಗಾದ ಜ್ಯೋತಿರ್ಮಯಿ ಮತ್ತು ತಸ್ನಿಯಾ ಫಾರಿನ್

ಇಡೀ ಸುದ್ದಿಗೋಷ್ಠಿಯಲ್ಲಿ ನಟಿ ಜ್ಯೋತಿರ್ಮಯಿ ಮುಜುಗರಕ್ಕೊಳಗಾಗಿರೋದು ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ನಟ ಶಕೀಬ್ ಕೈಗಳನ್ನು ಜ್ಯೋತಿರ್ಮಯಿ ಹಿಂದೆ ಸರಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ತಮ್ಮ ಒಂದು ಕೈಯಿಂದ ಇದನ್ನು ಮರೆಮಾಡುವ ಪ್ರಯತ್ನವನ್ನು ನಟಿ ಮಾಡಿದ್ದಾರೆ. ಈ ಸುದ್ದಿಗೋಷ್ಠಿ ಬಳಿಕ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಇನ್ನು ಶಕೀಬ್ ಖಾನ್ ಎಡಭಾಗದಲ್ಲಿ ನಿಂತಿದ್ದ ನಟಿ ತಸ್ನಿಯಾ ಫಾರಿನ್ ಮುಖದಲ್ಲಿಯೂ ಹಿಂಜರಿಕೆ ಕಂಡು ಬಂದಿತ್ತು. ಸುದ್ದಿಗೋಷ್ಠಿ ಯಾವಾಗ ಮುಕ್ತಾಯವಾಗುತ್ತೆ ಎಂದು ನಟಿಯರಾದ ಜ್ಯೋತಿರ್ಮಯಿ ಮತ್ತು ತಸ್ನಿಯಾ ಫಾರಿನ್ ಕಾಯುತ್ತ ನಿಂತಂತೆ ಕಾಣಿಸುತ್ತಿತ್ತು.

45
ವೈರಲ್ ವಿಡಿಯೋ ಬಗ್ಗೆ ನಟನ ಪ್ರತಿಕ್ರಿಯೆ

ಇತ್ತೀಚೆಗೆ ಡಾಕಾದಲ್ಲಿ ಪ್ರಿನ್ಸ್ ಸಿನಿಮಾ ತಂಡದಿಂದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಮಾಧ್ಯಮಗೋಷ್ಠಿಯಲ್ಲಿ ಸಿನಿಮಾ ಸೋಲಿನ ಹೊಣೆಯನ್ನು ನಟ ಶಕೀಬ್ ಖಾನ್ ತೆಗೆದುಕೊಂಡರು. ಪ್ರಿನ್ಸ್ ಕಥೆ ಕೇಳಿದಾಗ ಇದು ನನ್ನ ಜೀವನದ ಅತಿದೊಡ್ಡ ಸಿನಿಮಾ ಆಗಲಿದೆ ಎಂದು ಭಾವಿಸಿದ್ದೆ. ಆದ್ರೆ ಸಿನಿಮಾ ಯಶಸ್ಸುಗೊಳಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ಶಕೀಬ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ: ಥಿಯೇಟರ್‌ಗೆ ಬಂದು ಸಿನಿಮಾ ನೋಡೋದು ಬಿಟ್ಟು ಉಳಿದಿದ್ದೆನ್ನೆಲ್ಲಾ ಮಾಡಿದ ಕಾರ್ನರ್ ಸೀಟ್ ಜೋಡಿ

55
ನಾನು ಏನೂ ಹೇಳಲ್ಲ

ಈ ಸುದ್ದಿಗೋಷ್ಠಿಯಲ್ಲಿ ವೈರಲ್ ವಿಡಿಯೋ ಬಗ್ಗೆ ಪತ್ರಕರ್ತರು ಪ್ರಶ್ನೆ ಮಾಡಿದಾಗ, ಶಕೀಬ್ ಖಾನ್ ಉತ್ತರಿಸಲು ಹಿಂದೇಟು ಹಾಕಿದರು. ಈ ಕುರಿತು ನಟಿ ಜ್ಯೋತಿರ್ಮಯಿ, ನಾನು ಈ ವಿಷಯದಲ್ಲಿ ಏನನ್ನೂ ಹೇಳಲು ಬಯಸುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಕೆಲವರು ಸಿನಿಮಾ ಪ್ರಚಾರಕ್ಕಾಗಿ ಈ ರೀತಿಯ ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯಕ್ಷಗಾನ ನೋಡುವಾಗ ವೀಕ್ಷಕರು ಶಿಳ್ಳೆ ಹಾಕಬಾರದಾ? ಕಲಾವಿದರಲ್ಲಿಯೇ ಭಿನ್ನ ಅಭಿಪ್ರಾಯಗಳು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories