'ಕಪ್ಪುಮೂತಿ ಬೆಕ್ಕು' ಎಂದೋರ ಎದುರೇ ಜಾಗತಿಕ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಮಿಂಚಿದ ಪ್ರಿಯಾಂಕಾ ಚೋಪ್ರಾ

Published : Jun 21, 2026, 04:58 PM IST

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ವೃತ್ತಿಜೀವನದ ಆರಂಭದಲ್ಲಿ ಮೈಬಣ್ಣದ ಕಾರಣಕ್ಕೆ ಬಾಡಿ ಶೇಮಿಂಗ್ ಅನುಭವಿಸಿದ್ದರು. 'ಕರಿ ಬೆಕ್ಕು' ಎಂದು ಅವಮಾನಿಸಲ್ಪಟ್ಟಿದ್ದ ಅವರು, ಇಂದು ತಮ್ಮ ಪರಿಶ್ರಮದಿಂದ ಜಾಗತಿಕ ಮಟ್ಟದಲ್ಲಿ ಯಶಸ್ಸು ಗಳಿಸಿ, Rolex ನಂತಹ ಪ್ರತಿಷ್ಠಿತ ಬ್ರ್ಯಾಂಡ್‌ನ ರಾಯಭಾರಿಯಾಗಿದ್ದಾರೆ.

PREV
16
ಬಾಡಿ ಶೇಮಿಂಗ್​ ಎನ್ನುವ ವಿಕೃತಿ

ಪ್ರಿಯಾಂಕಾ ಚೋಪ್ರಾ ಇಂದು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವ ತಾರೆ. ಬಾಲಿವುಡ್​ ಬಿಟ್ಟು ಹಾಲಿವುಡ್​ನಲ್ಲಿ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಕೆಲವೇ ವರ್ಷಗಳ ಹಿಂದೆ ಅನುಭವಿಸಿದ್ದ ಬಾಡಿ ಶೇಮಿಂಗ್​ ಅಷ್ಟಿಷ್ಟಲ್ಲ. ಅಷ್ಟಕ್ಕೂ, ಬಾಡಿ ಶೇಮಿಂಗ್ (Body Shaming) ಎನ್ನುವುದು ಸಾಮಾನ್ಯ ಜನರಷ್ಟೇ ಅಲ್ಲ, ದೊಡ್ಡ ದೊಡ್ಡ ಸ್ಟಾರ್ ಸೆಲೆಬ್ರಿಟಿಗಳನ್ನೇ ಬಿಟ್ಟಿಲ್ಲ. ಉದ್ದವಿದ್ದರೂ ಕಷ್ಟ, ಗಿಡ್ಡವಿದ್ದರೂ ತೊಂದರೆ... ತುಂಬಾ ಬೆಳ್ಳಗಿದ್ದರೂ ಕಷ್ಟ, ಕಪ್ಪಗಿದ್ದರೂ ಆಡಿಕೊಳ್ಳುವವರೇ ಹೆಚ್ಚು, ದಪ್ಪ ಇದ್ದರಂತೂ ಮುಗಿದೇ ಹೋಯ್ತು, ಇನ್ನು ತೀರಾ ಸಣ್ಣಗಿದ್ದರೆ ಇಲ್ಲದ್ದನ್ನು ಹೇಳಿ ತಮಾಷೆ ಮಾಡುತ್ತಾರೆ... ಇಂಥ ಬಾಡಿ ಶೇಮಿಂಗ್​ ದಿನನಿತ್ಯವೂ ಹಲವರು ಅನುಭವಿಸುತ್ತಲೇ ಇರುತ್ತಾರೆ.

26
ಕರಿ ಬೆಕ್ಕು ಎಂದು ಅವಮಾನ

ಅದರಲ್ಲಿ ಒಬ್ಬರು ಪ್ರಿಯಾಂಕಾ ಚೋಪ್ರಾ, ತಾವು ಬಹಳಷ್ಟು ಸಂದರ್ಭಗಳಲ್ಲಿ ನೋವು, ಅವಮಾನ ಅನುಭವಿಸಿದ್ದುದಾಗಿ ಅವರು ಈ ಹಿಂದೆ ನೆನಪಿಸಿಕೊಂಡಿದ್ದರು. 'ನನ್ನನ್ನು ಅನೇಕರು ಬ್ಲ್ಯಾಕ್ ಕ್ಯಾಟ್ (ಕರಿ ಬೆಕ್ಕು) ಎಂದು ಕರೆಯುತ್ತಿದ್ದರು. ನನ್ನ ಚರ್ಮದ ಬಣ್ಣವನ್ನು ಟೀಕಿಸುತ್ತಿದ್ದರು. ಬಣ್ಣದ ಬಗೆಗಿನ ಗೀಳು ಭಾರತಕ್ಕೆ ಬಂದಿದ್ದು ಬ್ರಿಟಿಷರಿಂದ. ಅವರು ಬಿಟ್ಟು ಹೋದರೂ ಬಣ್ಣದ ಗೀಳು ಕಡಿಮೆ ಆಗಿಲ್ಲ' ಎಂದಿದ್ದರು.

36
ಮೈಬಣ್ಣದ ಆಧಾರದಮೇಲೆ ಗುಣಮಟ್ಟ...

ಮೈಬಣ್ಣದ ಆಧಾರದಮೇಲೆ ಗುಣಮಟ್ಟವನ್ನು ಅಳೆಯಬಾರದು. ಇದು ಬದಲಾಗಬೇಕು ಎಂದು ಅವರು ವೇದಿಕೆಯಲ್ಲಿ ಹೇಳಿದ್ದಾರೆ. 'ನಾನು ಅಷ್ಟು ಸುಂದರವಾಗಿಲ್ಲ ಎಂದು ನನಗೆ ಅನಿಸುತ್ತಿತ್ತು. ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಂಬಿದವಳು. ಆದರೆ ನನ್ನ ಚರ್ಮದ ಬಣ್ಣದಿಂದ ತುಂಬಾ ಹಿಂಸೆ ಅನುಭವಿಸಿದೆ' ಎಂದಿದ್ದರು. ಈ ಮೂಲಕ ನಟನಾ ವೃತ್ತಿಯ ಆರಂಭದ ದಿನಗಳಲ್ಲಿ ಅನುಭವಿಸಿದ ಬಾಡಿ ಶೇಮಿಂಗ್​ ಕುರಿತು ಹೇಳಿಕೊಂಡಿದ್ದರು.

46
ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್

ಆದರೆ, ಇಂದು ಪ್ರಿಯಾಂಕಾ ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಅವರು, ಜಾಗತಿಕ ಮಟ್ಟದಲ್ಲಿ ಭಾರತೀಯರ ಹೆಮ್ಮೆಯನ್ನು ಮತ್ತೊಮ್ಮೆ ಎತ್ತಿ ಹಿಡಿದಿದ್ದಾರೆ. ಅವರಿಗೆ ವಿಶ್ವದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ವಾಚ್ ಬ್ರ್ಯಾಂಡ್‌ಗಳಲ್ಲೊಂದಾದ Rolex ತನ್ನ ಜಾಗತಿಕ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಿದೆ.

56
ಶೇಮಿಂಗ್​ ಮಾಡಿದೋರು ಎಲ್ಲಿ ಹೋದರು

ಈ ಸಾಧನೆಯೊಂದಿಗೆ ಪ್ರಿಯಾಂಕಾ ಚೋಪ್ರಾ ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರತಿನಿಧಿಯಾಗಿ ಮಿಂಚಿದ್ದಾರೆ. ಬಾಡಿ ಶೇಮಿಂಗ್​ ಮಾಡಿದವರು ಅಲ್ಲಿಯೇ ಇದ್ದಾರೆ. ಆದ್ರೆ ಪ್ರಿಯಾಂಕಾ ಬಹು ಎತ್ತರಕ್ಕೆ ಹೋಗಿದ್ದಾರೆ.

66
ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ

ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ತಮ್ಮ ಪ್ರತಿಭೆ, ಪರಿಶ್ರಮ ಮತ್ತು ದೃಢ ಸಂಕಲ್ಪದ ಮೂಲಕ ಕೋಟ್ಯಂತರ ಜನರ ಮನ ಗೆದ್ದಿರುವ ಪ್ರಿಯಾಂಕಾ, ಈಗ ವಿಶ್ವದ ಅತ್ಯಂತ ಪ್ರತಿಷ್ಠಿತ ವ್ಯಕ್ತಿಗಳ ಸಾಲಿನಲ್ಲಿ ಸ್ಥಾನ ಪಡೆದಿದ್ದಾರೆ. Rolex ಸಂಸ್ಥೆ ಸಾಮಾನ್ಯವಾಗಿ ಕ್ರೀಡೆ, ಕಲೆ, ವಿಜ್ಞಾನ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಮಾತ್ರ ತನ್ನ ಪ್ರತಿನಿಧಿಗಳಾಗಿ ಆಯ್ಕೆ ಮಾಡುತ್ತದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories