ನಟಿ ಕಾಜಲ್ ಅಗರ್‌ವಾಲ್ ಕಾರ್ ಅಪಘಾತ, ಸಾವಿನ ಸುದ್ದಿ ಸುಳ್ಳು

Published : Sep 09, 2025, 10:49 AM IST

Kajal Aggarwal Death Rumors: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕಾಜಲ್ ಅಗರ್‌ವಾಲ್ ಅವರ ಸಾವಿನ ವದಂತಿಗಳನ್ನು ನಟಿ ಸ್ವತಃ ತಳ್ಳಿಹಾಕಿದ್ದಾರೆ. ಅಪಘಾತದಲ್ಲಿ ತಾವು ಸಾವನ್ನಪ್ಪಿದ್ದಾಗಿ ಹಬ್ಬಿದ ಸುದ್ದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.

PREV
15

ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಕಾರ್ ಅಪಘಾತದಲ್ಲಿ ಮೃತರಾಗಿದ್ದಾರೆ ಎಂಬ ಸುಳ್ಳು ಸುದ್ದಿಯ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವೈರಲ್ ಸುಳ್ಳು ಸುದ್ದಿಯ ಕುರಿತು ಮಗಧೀರ ನಟಿ, ನಾನು ಚೆನ್ನಾಗಿದ್ದೇನೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ

25

ಸೋಮವಾರ ಬೆಳಗ್ಗೆ ಅಪಘಾತದಲ್ಲಿ ಜಖಂಗೊಂಡ ಕಾರ್ ಜೊತೆ ನಟಿ ಕಾಜಲ್ ಅಗರ್‌ವಾಲ್ ಫೋಟೋ ಶೇರ್ ಮಾಡಿಕೊಳ್ಳಲಾಗುತ್ತಿತ್ತು. ಹೆದ್ದಾರಿಯಲ್ಲಿ ನಟಿಯ ಕಾರ್ ಅಪಘಾತವಾಗಿದೆ ಎಂಬ ಶೀರ್ಷಿಕೆಯಡಿ ಫೋಟೋ ಶೇರ್ ಮಾಡಲಾಗುತ್ತಿತ್ತು. ಈ ವೈರಲ್ ಸುದ್ದಿ ಬೆನ್ನಲ್ಲೇ ನಟಿ ಕಾಜಲ್ ಅಗರ್‌ವಾಲ್ ಎಕ್ಸ್ ಖಾತೆ ಮೂಲಕ ಸ್ಪಷ್ಟೀಕರಣವನ್ನು ನೀಡಿದ್ದಾರೆ.

35

ನಟಿ ಕಾಜಲ್ ಸ್ಪಷ್ಟನೆ

ದೇವರ ದಯೆಯಿಂದ ನನಗೇನೂ ಆಗಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಯಾವುದೇ ಆಧಾರವಿಲ್ಲದ ಸುದ್ದಿಯೊಂದನ್ನು ನೋಡಿ ನಾನು ಆಶ್ಚರ್ಯಚಕಿತಳಾಗಿದ್ದೇನೆ. ಅಪಘಾತದಲ್ಲಿ ನಾನು ಸಾವನ್ನಪ್ಪಿದ್ದೇನೆ ಸುದ್ದಿ ನೋಡಿ ವಿಚಿತ್ರ ಅನ್ನಿಸಿತು. ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಕಾಜಲ್ ಅಗರ್‌ವಾಲ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವೇಶ್ಯೆಯಾಗಿ ನಟಿಸಿದ ಶ್ರೀದೇವಿಗೆ ವಿಲನ್ ಚಿರಂಜೀವಿ, ಶೋಭನ್ ಬಾಬು ಹೀರೋ: ಯಾವುದು ಆ ಸಿನಿಮಾ?

45

ನಾನು ಆರೋಗ್ಯವಾಗಿದ್ದು, ಯಾರೂ ಈ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಅಭಿಮಾನಿಗಳಲ್ಲಿ ನಟಿ ಮನವಿ ಮಾಡಿಕೊಂಡಿದ್ದಾರೆ. ಹಾಗೆ ಈ ರೀತಿಯ ಸುಳ್ಳು ಸುದ್ದಿ ಬಿತ್ತರಿಸಿದವರ ವಿರುದ್ದ ನಟಿ ಕಾಜಲ್ ಅಗರ್‌ವಾಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಕೆಟ್ಟ ವ್ಯಕ್ತಿ & 'ಗೂಂಡಾ', ಆತನದು ಗಲಾಟೆ ಮಾಡೋ ಕುಟುಂಬ ಅಂದಿದ್ಯಾರು?

55

ನಟಿ ಕಾಜಲ್ ಅಗರ್‌ವಾಲ್ ತೆಲಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದು, ಮದುವೆ ಬಳಿಕ ಬಣ್ಣದ ಲೋಕದಿಂದ ಬ್ರೇಕ್ ತೆಗೆದುಕೊಂಡಿದ್ದರು. ಮುದ್ದಾದ ಮಗುವಿನ ತಾಯಿಯಾಗಿರುವ ಕಾಜಲ್ ಅಗರ್‌ವಾಲ್ ಮತ್ತೆ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಕಾಜಲ್ ಅಗರ್ವಾಲ್ 2015 ರ ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 2021 ರ ವರ್ಷಕ್ಕೆ ದಕ್ಷಿಣ ಚಿತ್ರರಂಗದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಫೋರ್ಬ್ಸ್ ಇಂಡಿಯಾದ ಅತ್ಯಂತ ಪ್ರಭಾವಶಾಲಿ ತಾರೆಗಳಲ್ಲಿ ಕಾಜಲ್ ಒಬ್ಬರಾಗಿದ್ದರು.

ಇದನ್ನೂ ಓದಿ: ನನ್ನ ಈ ಸುಂದರ ಅಂಗವನ್ನು ದಾನ ಮಾಡುತ್ತಿದ್ದೇನೆ ಎಂದ Rakhi Sawant: ವಿಡಿಯೋ ನೋಡಿ ಫ್ಯಾನ್ಸ್​ ಶಾಕ್​! 

Read more Photos on
click me!

Recommended Stories