ಮಿಸ್ & ಮಿಸೆಸ್ ಇಂಡಿಯಾ ಆಸ್ಟ್ರಲ್ 2025: ಕಿರೀಟ ಗೆದ್ದವರು ಯಾರು?

Published : Sep 08, 2025, 03:25 PM IST

ಬೆಂಗಳೂರಿನಲ್ಲಿ ಮಿಸ್ & ಮಿಸೆಸ್ ಇಂಡಿಯಾ ಆಸ್ಟ್ರಲ್ 2025ರ 9ನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ನೆರವೇರಿತು. ವಿವಿಧ ವಿಭಾಗಗಳಲ್ಲಿ ವಿಜೇತರಾದವರು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

PREV
16

ಬೆಂಗಳೂರು: ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 2025ರ 9ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ನಗರದಲ್ಲಿ ಅದ್ದೂರಿಯಾಗಿ ಜರುಗಿತು. ವಿವಾಹಿತ ಮಹಿಳೆಯರ ಮತ್ತು ಮಕ್ಕಳ ಸೌಂದರ್ಯ, ಪ್ರತಿಭೆ ಮತ್ತು ಸಂಸ್ಕೃತಿಯ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿತು. ನಗರದ ಕಿಂಗ್ಸ್‌ ಮೆಡೋಸ್‌ನಲ್ಲಿ ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 2025ರ 9ನೇ ಆವೃತ್ತಿಯನ್ನು ಸೆ.4 ರಿಂದ ಸೆ.6ರ ವರೆಗೆ ಮೂರು ದಿನಗಳ ಕಾಲ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ನಡೆಸಲಾಯಿತು. ಸೆ.6ರ ಭಾನುವಾರದಂದು ಸಂಜೆ ಗ್ರ್ಯಾಂಡ್‌ ಫಿನಾಲೆ ನಡೆದಿದ್ದು, ಸೂಪರ್ ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್ 2025 ಕಿರೀಟವನ್ನು ಡಾ. ಬಿ. ಉಷಾ ಜಗನ್ನಾಥ್, ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್ 2025 ಕಿರೀಟವನ್ನು ಮಾನಸ ಬೆಂಗಳೂರು ರಾಮಕೃಷ್ಣಯ್ಯ, ಮಿಸೆಸ್ ಇಂಡಿಯಾ ಟೂರಿಸಂ ಕ್ವೀನ್ 2025 ಕಿರೀಟವನ್ನು ಯಶೋದಾ ರಾಜೇಶ್, ಎಲೈಟ್ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಇಂಡಿಯಾ 2025 ಕಿರೀಟವನ್ನು ಮಾನಸ ಬೆಂಗಳೂರು ರಾಮಕೃಷ್ಣಯ್ಯ, ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಇಂಡಿಯಾ 2025 ಕಿರೀಟವನ್ನು ತಸ್ಮಾ ಚೇತನ್, ಮಿಸೆಸ್ ಯೂನಿವರ್ಸ್ ಸೆಲೆಸ್ಟಿಯಲ್ ಇಂಡಿಯಾ 2026 ಕಿರೀಟವನ್ನು ಸನ್ಮತಿ ರಕ್ಷಿತ್ ಮತ್ತು ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಇಂಡಿಯಾ 2026 ಕಿರೀಟವನ್ನು ಆಶಾನಾ ಜ್ಯುವೆಲ್ ಡಿಸೋಜಾ ಅವರು ಮುಡಿಗೇರಿಸಿಕೊಂಡರು.

26

ರಾಜ್ಯದ ವಿವಿಧೆಡೆಗಳಿಂದ ಸುಮಾರು 45 ಸ್ಪರ್ಧಿಗಳು ಈ ಸೌಂದರ್ಯ ಸ್ಪರ್ಧೆ ನಲ್ಲಿ ಪಾಲ್ಗೊಂಡಿದ್ದು, ಮೂರು ದಿನಗಳ ಸ್ಪರ್ಧೆಯಲ್ಲಿ ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ತೋರಿದರು. ಈ ಸ್ಪರ್ಧೆಯಲ್ಲಿ ವಿಜೇತರಾದವರು ಫಿಲಿಪೈನ್ಸ್, ಬ್ಯಾಂಕಾಕ್, ಆಮ್‌ಸ್ಟರ್‌ಡ್ಯಾಮ್ ಮತ್ತು ಫ್ರಾನ್ಸ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಪಡೆಯಲಿದ್ದಾರೆ. ಈ ಕುರಿತು ಕಾರ್ಯಕ್ರಮದ ಮುಖ್ಯ ಆಯೋಜಕರಾದ ಶ್ರೀಮತಿ ಪ್ರತಿಭಾ ಸೌಂಶಿಮಠ ( ಅಸ್ಟ್ರಲ್‌ ಪೇಜೆಂಟ್ಸ್‌ನ ಆಯೋಜಕರು ಹಾಗೂ ನಿರ್ದೇಶಕರು) ಮಾತನಾಡಿ, ʼಕಾರ್ಯಕ್ರಮವು ವೈವಿಧ್ಯತೆಯಲ್ಲಿ ಪ್ರತಿಭೆಯನ್ನು ಅರಸುವ ಏಕೈಕ ಸೌಂದರ್ಯ ಸ್ಪರ್ಧೆಯಾಗಿದೆ. ಕಳೆದ 9 ವರ್ಷಗಳಿಂದ ಈ ಸ್ಪರ್ಧೆಯನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಎಲ್ಲಾ ವಯೋಮಾನದ ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಒದಗಿಸಲಾಗುತ್ತಿದೆʼ ಎಂದರು.

36

ಕಾರ್ಯಕ್ರಮದ ತೀರ್ಪುಗಾರರಾದ ಖ್ಯಾತ ಕಲಾವಿದೆ ಹ್ಯುಮೆರಾ ಅಲಿ, ಫ್ಯಾಷನ್ ಗುರು ವಿದ್ಯಾ ವಿವೇಕ್, ನಿರೂಷಾ ನಾರಾಯಣ್ ವಿಜೇತರನ್ನು ಆಯ್ಕೆ ಮಾಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಐಕಾನ್ ನಿರ್ಮಲಾ ಯೆಲಿಗರ್, ಉಮೇಶ್‌, ನಟ ಭಾರ್ಗವ್ ಸೇರಿದಂತೆ ವಿಶೇಷ ಅತಿಥಿಗಳಾಗಿ ಕನ್ನಡ ರಕ್ಷಣಾ ವೇದಿಕೆಯ ಧನಂಜಯ ಗೌಡ, ಕಿಂಗ್ಸ್‌ ಮೆಡೋಸ್‌ನ ಜೋಸೆಫ್‌ ಪ್ರಭು ಉಪಸ್ಥಿತರಿದ್ದರು. ಈ ವೇಳೆ ಎಂಜಿ ರಸ್ತೆಯಲ್ಲಿರುವ ನವರಂಗ್ ಸಿಲ್ಕ್‌ ಶೋ ರೂಂ ಮುಖ್ಯಸ್ಥರಾದ ಮಹಾವೀರ್‌ ಸೇಥಿಯಾ ಅವರು ಅಂತರಾಷ್ಟ್ರೀಯ ಕ್ವೀನ್ಸ್‌ ವಿಜೇತರಿಗೆ ಸೀರೆ ಉಡುಗೆಯಾಗಿ ನೀಡಿದರು.

ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 2025ರ ವಿಜೇತರ ಪಟ್ಟಿ ಹೀಗಿದೆ

ಸೂಪರ್ ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಡಾ. ಬಿ. ಉಷಾ ಜಗನ್ನಾಥ್

ಮೊದಲ ರನ್ನರ್ ಅಪ್ - ಪದ್ಮಾ ಗಾಡಿಯಾ

ಎರಡನೇ ರನ್ನರ್ ಅಪ್ - ಶೋಭಾ ಹಂಜಿ

ಎಲೈಟ್ ಮಿಸೆಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಮಾನಸ ಬೆಂಗಳೂರು ರಾಮಕೃಷ್ಣಯ್ಯ

ಮೊದಲ ರನ್ನರ್ ಅಪ್ - ಹೇಮಾ ವಿ ಬೆಳ್ಳೂರು

ಎರಡನೇ ರನ್ನರ್ ಅಪ್ - ಡಾ. ಸೀಮಂತಿನಿ ದೇಸಾಯಿ

ಮೂರನೇ ರನ್ನರ್ ಅಪ್ - ಪ್ರಾಚಿ ಪವಾರ್

ನಾಲ್ಕನೇ ರನ್ನರ್ ಅಪ್ - ಯಶೋದಾ ರಾಜೇಶ್

46

ಮಿಸೆಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಡಾ. ಜ್ಯೋತಿ ಶಿವಲಿಂಗಯ್ಯ

ಮೊದಲ ರನ್ನರ್ ಅಪ್ - ನಿಶಾ

ಎರಡನೇ ರನ್ನರ್ ಅಪ್ - ತಶ್ಮಾ ಚೇತನ್

ಮೂರನೇ ರನ್ನರ್ ಅಪ್ - ಡಾ. ಅನನ್ಯ ಹದಡಿ ರಾಘವೇಂದ್ರ

ಮಿಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಆಶಾನಾ ಜ್ಯುವೆಲ್ ಡಿಸೋಜಾ

ಲೇಡಿ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಶಿಲ್ಪಾ ಎಸ್

ಮೊದಲ ರನ್ನರ್ ಅಪ್ - ಪಂಪತಿ ದಿವ್ಯ ಶ್ರೀ

ಅಂತರಾಷ್ಟ್ರೀಯ ಮಟ್ಟದ ವಿಜೇತರು

ಮಿಸೆಸ್ ಯೂನಿವರ್ಸ್ ಸೆಲೆಸ್ಟಿಯಲ್ ಇಂಡಿಯಾ 2026 - ಸನ್ಮತಿ ರಕ್ಷಿತ್

ಮಿಸ್ ಯೂನಿವರ್ಸ್ ಸೆಲೆಸ್ಟಿಯಲ್ ಇಂಡಿಯಾ 2026 - ಆಶಾನಾ ಜ್ಯುವೆಲ್ ಡಿಸೋಜಾ

ಮಿಸೆಸ್ ಇಂಡಿಯಾ ಟೂರಿಸಂ ಕ್ವೀನ್ 2025 - ಯಶೋದಾ ರಾಜೇಶ್

ಎಲೈಟ್ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಇಂಡಿಯಾ 2025 - ಮಾನಸ ಬೆಂಗಳೂರು ರಾಮಕೃಷ್ಣಯ್ಯ

ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಇಂಡಿಯಾ 2025 - ತಸ್ಮಾ ಚೇತನ್

56

ಮಕ್ಕಳ ವಿಭಾಗದ ವಿಜೇತರ ಪಟ್ಟಿ :

ಟೈನಿ ಮಿಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಇಶಾನಿ ಎಸ್ ರಾಹುಲ್

ಟೈನಿ ಮಿಸ್ಟರ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ವಾಗೀಶ್

ಮೊದಲ ರನ್ನರ್ ಅಪ್ - ಕುಶಿಕ್ ಎ ರಾವತ್

ಲಿಟಲ್ ಮಿಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಚಾರ್ವಿ ಅಶ್ವಿನ್

ಮೊದಲ ರನ್ನರ್ ಅಪ್ - ಚೇತನ ಸಿರಿ ಎಂ.ಆರ್

ಲಿಟಲ್ ಮಿಸ್ಟರ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಆದಿಶ್ ಎ.ಕೆ

ಮೊದಲ ರನ್ನರ್ ಅಪ್ - ಲಹರ್ ಸಾಯಿ

ಮೂರನೇ ರನ್ನರ್ ಅಪ್ - ರಿಷಬ್ ವಸಿಸ್ಟ್

ಮೂರನೇ ರನ್ನರ್ ಅಪ್ - ಹರೀಶ್ ಬಿ ಭಾರದ್ವಾಜ್

ಪ್ರಿ-ಜೂನಿಯರ್ ಮಿಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಸಾನ್ವಿತಾ ಡಿಸೋಜಾ

ಮೊದಲ ರನ್ನರ್ ಅಪ್ - ಅವನಿ ವೀರೇಶ್ ಜಕಾ

ಎರಡನೇ ರನ್ನರ್ ಅಪ್ - ಆದ್ಯ ಎಚ್ ಕೋಟ್ಯಾನ್

ಮೂರನೇ ರನ್ನರ್ ಅಪ್ - ಚರಿಷ್ಮಾ

ಪ್ರಿ-ಜೂನಿಯರ್ ಮಿಸ್ಟರ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಕಿಯಾನ್

ಮೊದಲ ರನ್ನರ್ ಅಪ್ - ಶೌರ್ಯ ರಾವ್

66

ಜೂನಿಯರ್ ಮಿಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಸಿಂಚನಾ

ಮೊದಲ ರನ್ನರ್ ಅಪ್ - ರಾಹಿಣಿ ಪಿ ಪೂಜಾರಿ

ಎರಡನೇ ರನ್ನರ್ ಅಪ್ - ಅದ್ವಿತಾ

ಮೂರನೇ ರನ್ನರ್ ಅಪ್ - ವಿಯಾ ಸಾಯಿ

ಜೂನಿಯರ್ ಮಿಸ್ಟರ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ಆದಿಶ್ ಗೌಡ

ಟೀನ್ ಮಿಸ್ ಇಂಡಿಯಾ ಆಸ್ಟ್ರಲ್ 2025

ವಿಜೇತರು - ರಕ್ಷಿತಾ ನಾಯರ್

ಮೊದಲ ರನ್ನರ್ ಅಪ್ - ನಿಯತಿ

ಎರಡನೇ ರನ್ನರ್ ಅಪ್ - ಬೆಳಕು

ಮೂರನೇ ರನ್ನರ್ ಅಪ್ - ಸಾನ್ವಿ

ಮಮ್ಮಿ ಮತ್ತು ಮಿನಿ ಇಂಡಿಯಾ ಆಸ್ಟ್ರಲ್ 2025

ವಿಜೇತರು - ವಿನುತಾ ಮತ್ತು ಚೆಶ್ವಿಕಾ

ಮೊದಲ ರನ್ನರ್ ಅಪ್ - ರಾಜಲಕ್ಷ್ಮಿ ಮತ್ತು ತನಿಷ್ಕಾ

Read more Photos on
click me!

Recommended Stories