ನಾನಿದ್ದ ರೀತಿಯ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಹರಿದುಬರಲಾರಂಭಿಸಿದವು. ನನಗೆ ಆಘಾತವಾಯಿತು. ನನ್ನ ಆತ್ಮವಿಶ್ವಾಸ ಕುಸಿಯಿತು. ಖಿನ್ನತೆಗೆ ಜಾರಿದ್ದೆ. ‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ ಮಾತುಗಳಿವು.
‘ನನ್ನ ಎರಡನೇ ಸಿನಿಮಾದ ಬಳಿಕ ನನ್ನ ಲುಕ್, ನಾನಿದ್ದ ರೀತಿಯ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಕಾಮೆಂಟ್ಸ್ ಹರಿದುಬರಲಾರಂಭಿಸಿದವು. ನನಗೆ ಆಘಾತವಾಯಿತು. ನನ್ನ ಆತ್ಮವಿಶ್ವಾಸ ಕುಸಿಯಿತು. ಖಿನ್ನತೆಗೆ ಜಾರಿದ್ದೆ’.
24
ಬಾಡಿ ಶೇಮಿಂಗ್
‘ಟಾಕ್ಸಿಕ್’ ಸಿನಿಮಾ ನಟಿ ಹುಮಾ ಖುರೇಷಿ ಮಾತುಗಳಿವು. ಒಂದು ಕಾಲದಲ್ಲಿ ತಾನು ಬಾಡಿ ಶೇಮಿಂಗ್‌ನಿಂದ ಡಿಪ್ರೆಶನ್‌ಗೆ ಹೋಗಿ ಪಾರಾಗಿ ಬಂದ ಬಗ್ಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ.
34
ಸತ್ಯದ ಅರಿವಾಯ್ತು
ಒಂದು ಹಂತದ ಬಳಿಕ ಇಂಥಾ ವಿಚಾರಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು, ಕೆಲಸದ ಮೇಲೆ ಗಮನ ಹರಿಸಬೇಕು ಎಂಬ ಸತ್ಯದ ಅರಿವಾಯ್ತು. ನನ್ನ ಭಾವನೆಗಳನ್ನು ಬರೆಯುತ್ತಾ ಹೋದೆ, ಧ್ಯಾನ ಮಾಡಿದೆ, ಮಾನಸಿಕ ತಜ್ಞರಿಂದ ಚಿಕಿತ್ಸೆ ಪಡೆದುಕೊಂಡೆ.
ನಿಧಾನಕ್ಕೆ ನನ್ನ ಬಗ್ಗೆ ನನಗಿದ್ದ ಅಸುರಕ್ಷತಾ ಭಾವ ಮರೆಯಾಯ್ತು. ಇವತ್ತು ನನ್ನನ್ನು ನಾನೇ ಗೇಲಿ ಮಾಡಿ ನಗುತ್ತೇನೆ. ಆತ್ಮವಿಶ್ವಾಸ ತನ್ನಿಂತಾನಾಗಿ ಬಂದಿದೆ. ಮೊದಲು ನನ್ನನ್ನು ಖಿನ್ನತೆ ನೂಕಿದ್ದ ಚರ್ಮದ ಬಣ್ಣ, ಲುಕ್ ಎಲ್ಲವೂ ಈಗ ಚಂದ ಕಾಣುತ್ತಿದೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.