ರೋಲೆಕ್ಸ್ ಖ್ಯಾತಿಯ ಸೂರ್ಯ ಹೊಸ ಚಿತ್ರಕ್ಕೆ ಕಾಂತಾರ ಬೆಡಗಿ ಹೀರೋಯಿನ್: ವಿಲನ್ ಯಾರು ಗೊತ್ತಾ?

Published : Jun 01, 2026, 04:34 PM IST

ನಟಿ ರುಕ್ಮಿಣಿ ವಸಂತ್‌ ಖಾತೆಗೆ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಜಮೆಯಾಗಿದೆ. ತಮಿಳಿನ ಸೂರ್ಯ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಗಿದ್ದಾರೆ. ಈ ಚಿತ್ರವನ್ನು ನಿರ್ಮಿಸುತ್ತಿರುವುದು ಕೆವಿಎನ್‌ ಪ್ರೊಡಕ್ಷನ್‌.

PREV
14
ಬಿಗ್‌ ಬಜೆಟ್‌ ಸಿನಿಮಾ

ನಟಿ ರುಕ್ಮಿಣಿ ವಸಂತ್‌ ಖಾತೆಗೆ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಜಮೆಯಾಗಿದೆ. ತಮಿಳಿನ ಸೂರ್ಯ ಅಭಿನಯದ ಚಿತ್ರಕ್ಕೆ ನಾಯಕಿಯಾಗಿ ಆಗಿದ್ದಾರೆ. ಇದು ಸೂರ್ಯ ಅವರ 50ನೇ ಸಿನಿಮಾ.

24
ಕೆವಿಎನ್‌ ಪ್ರೊಡಕ್ಷನ್‌

ಮತ್ತೊಂದು ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಿಸುತ್ತಿರುವುದು ಕೆವಿಎನ್‌ ಪ್ರೊಡಕ್ಷನ್‌. ತಮಿಳುನಾಡು ಸಿಎಂ ವಿಜಯ್‌ ನಟಿಸಿರುವ ‘ಜನನಾಯಗನ್‌’ ಚಿತ್ರದ ನಂತರ ಮತ್ತೊಬ್ಬ ತಮಿಳಿನ ನಟನ ಸಿನಿಮಾ ಕೈಗೆತ್ತಿಕೊಂಡಿದೆ.

34
ವಿಶೇಷವಾದ ಕತೆ

ಇದು ಪ್ಯಾನ್‌ ಇಂಡಿಯಾ ಸಿನಿಮಾ ಆಗಿದ್ದು, ಬಹುಭಾಷೆಯಲ್ಲಿ ಮೂಡಿ ಬರಲಿದೆ. ಇನ್ನೂ ಸೂರ್ಯ ಅವರಿಗೆ 50ನೇ ಚಿತ್ರವಾಗಿರುವ ಕಾರಣ ವಿಶೇಷವಾದ ಕತೆಯನ್ನು ತೆರೆ ಮೇಲೆ ತರಲು ಪ್ಲಾನ್‌ ಮಾಡಲಾಗುತ್ತಿದೆ.

44
ಅಕ್ಷಯ್‌ ಖನ್ನಾ ವಿಲನ್

ಈ ಹಿಂದೆ ಸೂರ್ಯ ಅವರ ಜೊತೆಗೆ ‘24’ ಹೆಸರಿನ ಚಿತ್ರ ನಿರ್ದೇಶಿಸಿದ್ದ ವಿಕ್ರಂ ಈ ಚಿತ್ರಕ್ಕೂ ನಿರ್ದೇಶಕರು. ಖಳನಟನ ಪಾತ್ರದಲ್ಲಿ ಬಾಲಿವುಡ್‌ನ ಅಕ್ಷಯ್‌ ಖನ್ನಾ ನಟಿಸಲಿದ್ದಾರೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸದ್ಯದಲ್ಲೇ ಈ ಚಿತ್ರದ ಅಧಿಕೃತ ಘೋಷಣೆ ಆಗಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories