'ಮುಂದೆ ನೀವು ಜೋಡಿಯಾಗ್ತೀರಾ?' ಎಂದಿದ್ದಕ್ಕೆ 'ಮ್ಯಾನಿಫೆಸ್ಟ್‌ ಮಾಡ್ತಿದೀವಿ' ಎಂದ ಶಿಶಿರ್‌ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ!

Published : Aug 07, 2025, 03:30 PM ISTUpdated : Aug 07, 2025, 03:58 PM IST

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಶೋನಲ್ಲಿ ಸ್ನೇಹಿತರಾಗಿದ್ದ ಐಶ್ವರ್ಯ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಅವರ ಸ್ನೇಹ ಇನ್ನಷ್ಟು ಸ್ಟ್ರಾಂಗ್‌ ಆಗುತ್ತಿದೆ. ಹೌದು, ಇವರಿಬ್ಬರು ಒಟ್ಟಿಗೆ ಸಿನಿಮಾ, ಬ್ಯುಸಿನೆಸ್‌ ಮಾಡುತ್ತಿದ್ದಾರೆ. ಇವರೀಗ ಮದುವೆ ಆಗ್ತಾರಾ ಎಂಬ ಪ್ರಶ್ನೆ ಎದ್ದಿದೆ. 

PREV
15

ಐಶ್ವರ್ಯಾ ಶಿಂಧೋಗಿ ಅವರ ಜನ್ಮದಿನವನ್ನು ಶಿಶಿರ್‌ ಶಾಸ್ತ್ರೀ ಅವರು ಗ್ರ್ಯಾಂಡ್‌ ಆಗಿ ಆಚರಿಸಿದ್ದಾರೆ. ಈ ವಿಡಿಯೋವನ್ನು ಐಶ್ವರ್ಯಾ ಶೇರ್‌ ಮಾಡಿಕೊಂಡಿದ್ದರು. ಐಶ್ವರ್ಯಾ ಅವರ ಆಪ್ತರನ್ನು ಗುಟ್ಟಾಗಿ ಕರೆದು ಶಿಶಿರ್‌ ಅವರು ಜನ್ಮದಿನ ಆಚರಿಸಿದ್ದರು.

25

ಪ್ರತಿ ವರ್ಷ ನಾನು ನನ್ನ ಜನ್ಮದಿನ ಆಚರಿಸಿಕೊಳ್ತಿದ್ದೆ. ಆದರೆ ಈ ಬಾರಿ ನನ್ನ ಡ್ರೆಸ್‌, ಡೆಕೋರೇಶನ್‌, ಗೆಸ್ಟ್‌ ಕರೆದಿದ್ದು ಹೀಗೆ ಎಲ್ಲವನ್ನು ಶಿಶಿರ್‌ ಅವರೇ ಅರೇಂಜ್‌ ಮಾಡಿದ್ದರು. ಇದೇ ಮೊದಲ ಬಾರಿಗೆ ನನ್ನ ಬರ್ತಡೇಯನ್ನು ಶಿಶಿರ್‌ ಅವರು ಗ್ರ್ಯಾಂಡ್‌ ಆಗಿ ಆಚರಿಸಿದ್ದಾರೆ. ಅಷ್ಟೇ ಅಲ್ಲದೆ ಪ್ರೊಫೆಶನಲ್‌ ಆಗಿ ಹಾಡು ರೆಕಾರ್ಡ್‌ ಕೂಡ ಮಾಡಿದ್ದರು.

35

ಅಂದಹಾಗೆ ಯುಟ್ಯೂಬರ್ಸ್‌ ಜೊತೆ ಮಾತನಾಡುವಾಗ ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಅವರು ಮುಂದೆ ಜೋಡಿಯಾಗ್ತಾರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

45

ಶಿಶಿರ್‌ ಶಾಸ್ತ್ರೀ ಅವರು, “ನಾವು ಹೀಗೆ ಆಗತ್ತೆ ಅಂತ ಹೇಳೋಕಾಗಲ್ಲ, ಮ್ಯಾನಿಫೆಸ್ಟ್‌ ಮಾಡಬಹುದು ಅಷ್ಟೇ. ಯಾವ ಸಮಯಕ್ಕೆ ಏನಾಗಬೇಕೋ ಅದೇ ಆಗೋದು. ಮುಂಚಿತವಾಗಿ ಹೇಳೋದು ಬೇಡ. ಆದಾಗ ಅಥವಾ ಆಗದೆ ಇದ್ದಾಗಲೂ ಕೂಡ ನಿಮಗೆ ಗೊತ್ತಾಗತ್ತೆ” ಎಂದು ಹೇಳಿದ್ದಾರೆ.

55

ಐಶ್ವರ್ಯಾ ಶಿಂಧೋಗಿ, ಶಿಶಿರ್‌ ಶಾಸ್ತ್ರೀ ಅವರು ಒಟ್ಟಿಗೆ ಮೈಕ್ರೋ ಸಿರೀಸ್‌ನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಐಶ್ವರ್ಯಾ ಅವರು ತುಳು ಸಿನಿಮಾದ ಜೊತೆಗೆ ಕನ್ನಡದಲ್ಲಿ ನಿನ್ನ ಜೊತೆ ನನ್ನ ಕಥೆ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

Read more Photos on
click me!

Recommended Stories