Published : Aug 07, 2025, 02:33 PM ISTUpdated : Aug 07, 2025, 02:35 PM IST
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಧಾರಾವಾಹಿಯಲ್ಲಿ ಕರ್ಣ ಮತ್ತು ನಿಧಿ ಜೋಡಿ ಜನಮನ ಗೆದ್ದಿದೆ. ಆದರೆ ನಮ್ಮ ಫಾರೆವರ್ ಫೇವರಿಟ್ ಜೋಡಿ ಅಂದ್ರೆ ಅದು ಹರ್ಷ -ಭುವಿ ಎನ್ನುತ್ತಿದ್ದಾರೆ ಜನ.
ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಹಾಗೂ ಟಿಆರ್’ಪಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಸೀರಿಯಲ್ ಅಂದರೆ ಅದು ಕರ್ಣ ಧಾರಾವಾಹಿ. ಈ ಸೀರಿಯಲ್ ನಾಯಕ ಕಿರಣ್ ರಾಜ್ ಎನ್ನುವುದು ಗೊತ್ತಾದ ತಕ್ಷಣವೇ ಸೀರಿಯಲ್ ಟಿಆರ್ ಪಿಯಲ್ಲಿ ಗೆದ್ದಿತ್ತು. ಈವಾಗಂತೂ ಕರ್ಣ ಮತ್ತು ನಿಧಿ ಜೋಡಿ ಮೋಡಿ ಮಾಡುತ್ತಿದೆ.
28
ವೈದ್ಯನಾಗಿರುವ ಕರ್ಣ ಹಾಗೂ, ಆತನನ್ನು ಪ್ರೀತಿಸುವ ವಿದ್ಯಾರ್ಥಿನಿ ನಿಧಿ. ನಿಧಿಯ ಮುದ್ದು ಮುದ್ದು ಮಾತು, ತುಂಟಾಟ, ನಗು, ಕರ್ಣನನ್ನು ಮನಸಾರೆ ಪ್ರೀತಿಸುತ್ತಾ, ಆತನಿಗೆ ತನ್ನ ಪ್ರೀತಿಯನ್ನು ಹೇಳಿಕೊಂಡು, ಅವರ ಪ್ರೀತಿಗೆ ಕಾಯುತ್ತಿರುವ ಮುಗ್ಧ ಹುಡುಗಿ ನಿಧಿ.
38
ಯಾವಾಗ್ಲೂ ಸೀರಿಯಸ್ ಆಗಿರುವ ಕರ್ಣ ಹಾಗೂ ಯಾವಾಗ್ಲೂ ಮುದ್ದು ಪೆದ್ದಾಗಿ ಆಡುವ ನಿಧಿ, ಇವರಿಬ್ಬರ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಶನ್ ಹುಟ್ಟು ಹಾಕಿದೆ. ಈ ಜೋಡಿಗೆ ಈಗಾಗಲೇ ಹಲವು ಫ್ಯಾನ್ ಪೇಜಸ್ ಗಳು ಕೂಡ ಹುಟ್ಟಿಕೊಂಡಿವೆ.
ಆದರೆ ಕರ್ಣ ನಿಧಿ ಜೋಡಿಯನ್ನು ಎಲ್ಲರೂ ಇಷ್ಟ ಪಡುತ್ತಿದ್ದಾರೆ ನಿಜಾ, ಆದರೆ ವೀಕ್ಷಕರ ಹೃದಯದಲ್ಲಿ ಸದಾ ನಂಬರ್ 1 ಸ್ಥಾನದಲ್ಲಿರುವ ಜೋಡಿ ಎಂದರೆ ಅದು ಭುವಿ ಮತ್ತು ಹರ್ಷ. ಹೌದು ಕನ್ನಡತಿ ಸೀರಿಯಲ್ ಮೂಲಕ ಜನಪ್ರಿಯತೆ ಗಳಿಸಿದ ಜೋಡಿ ಇದು. ಜೋಡಿ ಅಂದ್ರೆ ಹೀಗೆ ಇರಬೇಕು ಎನ್ನುವಂತೆ ಜನರ ಮನಸಿನಲ್ಲಿ ಉಳಿದಂತಹ ಜೋಡಿ ಇವರದ್ದು.
58
ಹರ್ಷ ಪಾತ್ರಕ್ಕೆ ಜೀವ ತುಂಬಿದ ನಟ ಕಿರಣ ರಾಜ್, ಇನ್ನು ಭುವಿ ಪಾತ್ರದಲ್ಲಿ ನಟಿ ರಂಜನಿ ರಾಘವನ್ ನಟಿಸಿದ್ದರು. ಕನ್ನಡ ಟೀಚರ್ ಹಾಗೂ ಜೀವನವನ್ನು ಸಿಂಪಲ್ ಆಗಿ ಅನುಭವಿಸುವ ನೇರ ನುಡಿಯ, ಒಳ್ಳೆಯ ಮನಸ್ಸಿನ ಹುಡುಗಿ ಭುವಿ. ನೇರ ನುಡಿಯ, ಬಿಂದಾಸ್ ಲೈಫ್ ಜೀವಿಸುವ ಹುಡುಗ ಹರ್ಷ.
68
ಇಬ್ಬರು ತದ್ವಿರುದ್ಧ ಜೀವಗಳು ಜೀವನದ ಹಾದಿಯಲ್ಲಿ ಹೇಗೆ ಒಬ್ಬರತ್ತ ಒಬ್ಬರು ಆಕರ್ಷಿತರಾಗಿ ಒಂದಾಗುತ್ತಾರೆ ಅನ್ನೋದು ಕಥೆಯಾಗಿತ್ತು. ಈ ಧಾರಾವಾಹಿಯಲ್ಲಿ ಹರ್ಷನ ಪಾತ್ರ ಎಷ್ಟೊಂದು ಅದ್ಭುತವಾಗಿತ್ತು ಅಂದರೆ, ಇವತ್ತಿಗೂ ಪ್ರತಿಯೊಬ್ಬ ಹುಡುಗಿಯರ ಕ್ರಶ್ ಆಗಿದ್ದಾರೆ ಹರ್ಷ.
78
ವೀಕ್ಷಕರ ಪಾಲಿಗೆ ಹರ್ಷ ಪಾತ್ರ ಮಾಸ್ಟರ್ ಪೀಸ್ ಆಗಿತ್ತು, ಆತನ ಸ್ಟೈಟ್ ಪಾರ್ವರ್ಡ್ ಗುಣ., ಹಾವಾಭಾವ ಸೂಪರ್ ಆಗಿತ್ತು ಅಂದ್ರೆ, ಈವಾಗ ಕರ್ಣನ ಪಾತ್ರ ನೋಡಿರುವವರಿಗೆ ಕರ್ಣ ತುಂಬಾನೆ ಸಪ್ಪೆ ಎಂದು ಅನಿಸುತ್ತಿದೆ. ಹರ್ಷ ಭುವಿ ಜೋಡಿಯನ್ನು ರೀಪ್ಲೇಸ್ ಮಾಡಲು ಯಾರಿಂದಲೂ ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ.
88
ಹರ್ವಿ ತೆರೆಯ ಮೇಲೆ ಮರೆಯಲಾಗದ ಜೋಡಿ, ಅವರು ತೆರೆಯ ಮೇಲೆ ಒಟ್ಟಿಗೆ ಸೃಷ್ಟಿಸಿದ ವೈಬ್‌ಗಳು ಸೂಪರ್, ಯಾರೂ ಬದಲಾಯಿಸಲು ಸಾಧ್ಯವಿಲ್ಲ, ಹರ್ಷ ಮತ್ತು ಭುವಿ ಪಾತ್ರಗಳಿಗೆ ಸಮಾನ ತೂಕವಿತ್ತು.. ಅವರನ್ನು ಮತ್ತೆ ಒಟ್ಟಿಗೆ ನೋಡಲು ಇಷ್ಟಪಡುತ್ತೇನೆ, ದಯವಿಟ್ಟು ಯಾರಾದರೂ ಇಬ್ಬರಿಗಾಗಿ ಒಂದು ಕಥೆ ಮಾಡಿ, ಅದು ದೊಡ್ಡ ಪರದೆಯಲ್ಲಿದ್ದರೆ.. ಒಳ್ಳೆಯದು ಎಂದಿದ್ದಾರೆ.