ದಕ್ಷಿಣ ಭಾರತದ ಅತ್ಯಂತ ಪ್ರಖ್ಯಾತ ನಟಿಯಾಗಿ ಗುರುತಿಸಿಕೊಳ್ಳುತ್ತಿರುವ ಐಶ್ವರ್ಯ ರಾಜೇಶ್, ತಮ್ಮ ವೃತ್ತಿಜೀವನದಲ್ಲಿ ತಮಗಾದ ಅತ್ಯಂತ ಕಹಿ ಘಟನೆಯೊಂದನ್ನು ಎಲ್ಲರೆದರು ಬಹಿರಂಗ ಪಡಿಸಿದ್ದಾರೆ. ಯಾರು ಈ ನಟಿ? ಏನದು ಘಟನೆ? ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇವೆ ನೋಡಿ.
ತಮಿಳುನಾಡು ಮೂಲದ ಅತ್ಯಂತ ಜನಪ್ರಿಯ ನಟಿ ಐಶ್ವರ್ಯ ರಾಜೇಶ, ತಮಿಳು, ತೆಲುಗು ಹಾಗೂ ಮಲೆಯಾಳಂನಲ್ಲಿ ಅಭಿನಯಿಸುವ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಐಶ್ವರ್ಯ ರಾಜೇಶ್ ಅವರ ಮನೋಜ್ಞ ನಟನೆಗೆ ಎರಡು ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಹಾಗೂ ನಾಲ್ಕು ಸೈಮಾ ಪ್ರಶಸ್ತಿಗಳು ಸಿಕ್ಕಿವೆ.
26
ನಿರೂಪಕಿಯಾಗಿ ವೃತ್ತಿಜೀವನ ಆರಂಭ, ಸಿನಿಮಾ ರಂಗದಲ್ಲಿ ನೆಲೆ
ದೂರದರ್ಶನ ನಿರೂಪಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಐಶ್ವರ್ಯ, ಕೊನೆಗೆ ನೆಲೆ ಕಂಡುಕೊಂಡಿದ್ದು ಸಿನಿಮಾ ರಂಗದಲ್ಲಿ. ಹಲವು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಐಶ್ವರ್ಯ, ಇತ್ತೀಚೆಗೆ ಮಹಿಳಾ ಪ್ರಧಾನ ಚಿತ್ರಗಳಲ್ಲೂ ಮಿಂಚುತ್ತಿದ್ದಾರೆ.
36
ಸಂದರ್ಶನವೊಂದರಲ್ಲಿ ತಮಗಾದ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡಿದ ಐಶ್ವರ್ಯ
ಇತ್ತೀಚೆಗೆ ಐಶ್ವರ್ಯ ರಾಜೇಶ್, ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ಎದುರಾದ ಅತ್ಯಂತ ಕಹಿ ಘಟನೆಯೊಂದನ್ನು ಬಹಿರಂಗ ಪಡಿಸಿದ್ದಾರೆ. ಮೀಡಿಯಾ ಇಂಡಸ್ಟ್ರಿಯಲ್ಲಿ ಎಂತಹ ಕೊಳಕು ಜನರಿರುತ್ತಾರೆ ಎನ್ನುವುದನ್ನು ಐಶ್ವರ್ಯ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತಾವು ಸಿನಿಮಾ ವೃತ್ತಿಜೀವನದ ಆರಂಭದ ದಿನಗಳಲ್ಲಿ ಅನುಭವಿಸಿದ ಕಿರುಕುಳಗಳನ್ನು ಮೆಲುಕು ಹಾಕಿದ್ದಾರೆ.
ಅನೇಕ ಉದಯೋನ್ಮುಖ ನಟಿಯರು ವೃತ್ತಿಜೀವನವನ್ನು ಮುಂದುವರಿಸುವಾಗ ಇದನ್ನು ಎದುರಿಸಬೇಕಾಗುತ್ತದೆ. ನಿಖಿಲ್ ವಿಜಯೇಂದ್ರ ಸಿಂಹ ಅವರ ಪಾಡ್‌ಕಾಸ್ಟ್‌ನಲ್ಲಿ ಛಾಯಾಗ್ರಾಹಕನ ಬಗ್ಗೆ ಆಘಾತಕಾರಿ ವಿಚಾರವೊಂದನ್ನು ಐಶ್ವರ್ಯ ಬಹಿರಂಗ ಪಡಿಸಿದ್ದಾರೆ. ಆ ಸಮಯದಲ್ಲಿ ನಾನು ತುಂಬಾ ಚಿಕ್ಕವಳಿದ್ದೆ ಹಾಗೆಯೇ ಈ ಉದ್ಯಮಕ್ಕೆ ಹೊರಬಳಾಗಿದ್ದೆ. ಚಿತ್ರೀಕರಣದ ಸಮಯದಲ್ಲಿ ನಾನು ನನ್ನ ಸಹೋದರನನ್ನು ಕರೆದುಕೊಂಡು ಹೋಗಿದ್ದೆ ಆ ಸಂದರ್ಭದ ಆದ ಘಟನೆ ನನ್ನನ್ನು ತುಂಬಾ ನೋಯಿಸಿತು ಎಂದು ಐಶ್ವರ್ಯ ರಾಜೇಶ್ ಹೇಳಿದ್ದಾರೆ.
56
ಸಹೋದರನ ಜತೆ ಶೂಟಿಂಗ್‌ಗೆ ಹೋದಾಗ ನಡೆದ ಘಟನೆ
ನಾನು ತುಂಬಾ ಚಿಕ್ಕವನಾಗಿದ್ದೆ. ನಾನು ನನ್ನ ಸಹೋದರನೊಂದಿಗೆ ಹೋಗಿದ್ದೆ. ಛಾಯಾಗ್ರಾಹಕ ನನ್ನ ಸಹೋದರನನ್ನು ಹೊರಗೆ ಕುಳಿತುಕೊಳ್ಳಲು ಹೇಳಿದನು ಮತ್ತು ನಂತರ ನನ್ನನ್ನು ಒಳಗೆ ಕರೆದೊಯ್ದನು. ಅವನು ನನ್ನ ಬಟ್ಟೆಯಿಲ್ಲದೇ ಬಾಡಿ ತೋರಿಸಲು ಹೇಳಿದನು ಎಂದು ಆ ಕಹಿ ಘಟನೆಯನ್ನು ವಿವರಿಸಿದ್ದಾರೆ.
66
ಆ ಕರಾಳ ಘಟನೆ ಮೆಲುಕು ಹಾಕಿದ ಐಶ್ವರ್ಯ ರಾಜೇಶ್
ಈ ಸಂದರ್ಭದಲ್ಲಿ ನನಗೆ ಈ ಇಂಡಸ್ಟ್ರಿ ಅಷ್ಟೊಂದು ಅರ್ಥವಾಗುತ್ತಿರಲಿಲ್ಲ. ಇದೇ ರೀತಿ ಜೀವನ ನಡೆಯುತ್ತದೆ. ಆಗ ನಾನು ಕೆಲವೊಂದನ್ನು ಒಪ್ಪಿಕೊಂಡೆ, ಹಾಗಂತ ಎಲ್ಲವನ್ನೂ ಅಲ್ಲ. ಆಗ ಇದು ತಪ್ಪು ಎಂದು ಅರ್ಥವಾಯಿತು ಎಂದು ಐಶ್ವರ್ಯ ರಾಜೇಶ್ ಆ ಕರಾಳ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.