ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದೆ ಎಂದು ಭಾವಿಸಿ ಜೈಲಿನಲ್ಲಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಮಾತನಾಡಿಕೊಂಡಿರುವ ಸೀಕ್ರೆಟ್ ಸಂಭಾಷಣೆ ಬಹಿರಂಗವಾಗಿದೆ. ಇನ್ನು 4-5 ತಿಂಗಳು ಸಹಿಸಿಕೊ ಎಂದು ದರ್ಶನ್ ಹೇಳಿದ್ದೇನು? ಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮತ್ತು ನಟಿ ಪವಿತ್ರಾ ಗೌಡ ನಡುವಿನ ರಹಸ್ಯ ಸಂಭಾಷಣೆಯೊಂದು ಕೋರ್ಟ್ ವಿಡಿಯೋ ಕಾನ್ಫರೆನ್ಸ್ (Video Conference) ವೇಳೆ ಬಹಿರಂಗವಾಗಿದೆ. ವಿಚಾರಣೆ ನಡುವೆ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿ ಇಬ್ಬರೂ ಪರಸ್ಪರ ಮಾತನಾಡಿಕೊಂಡಿದ್ದು, ಆ ಮಾತುಗಳು ಎಲ್ಲರಿಗೂ ಕೇಳಿಸಿವೆ. ಈ ವೇಳೆ 'ಇನ್ನು ಕೇವಲ 4 ರಿಂದ 5 ತಿಂಗಳು ಸಹಿಸಿಕೊ, ಹೈಕೋರ್ಟ್‌ನಲ್ಲಿ ಜಡ್ಜ್ ಬದಲಾಗುತ್ತಾರೆ' ಎಂದು ದರ್ಶನ್ ಹೇಳಿರುವುದು ಇದೀಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ.
25
ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದಿದ್ದೇನು?
ಪ್ರಕರಣದ ವಿಚಾರಣೆಗಾಗಿ ಜೈಲಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದ ಸಂದರ್ಭದಲ್ಲಿ ತಾಂತ್ರಿಕ ಕಾರಣದಿಂದ ಸಂಪರ್ಕ ಕಟ್ ಆಗಿತ್ತು. ಈ ವೇಳೆ ಹಾಲ್‌ನಲ್ಲಿದ್ದ ಉಳಿದ ಆರೋಪಿಗಳು ಹೊರಗೆ ಹೋಗಿದ್ದರು. ವಿಡಿಯೋ ಕಾನ್ಫರೆನ್ಸ್ ಕಟ್ ಆಗಿದೆ ಎಂದು ಭಾವಿಸಿದ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ. ಆದರೆ, ಆಡಿಯೋ ಸಂಪರ್ಕ ಕಡಿತಗೊಳ್ಳದ ಕಾರಣ ಅವರ ಸಂಪೂರ್ಣ ಸಂಭಾಷಣೆ ದಾಖಲಾಗಿದೆ.
35
ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಭಾಷಣೆಯ ಪೂರ್ಣ ವಿವರ:
ಪವಿತ್ರಾ ಗೌಡ: ಊಟ ಆಯ್ತಾ...? ಹೇಗಿದೆ ಬೆನ್ನು ನೋವು...? ಫಿಸಿಯೋಥೆರಪಿ ಆಯ್ತಾ...? ಎಷ್ಟು ದಿನ ಮಾಡಿಸಬೇಕು...?
ನಟ ದರ್ಶನ್: ಬೆನ್ನು ಪೂರ್ತಿ ಮುರಿದು ಹೋಗಿದೆ, ತುಂಬಾ ನೋವು ಆಗ್ತಿದೆ. ಫಿಸಿಯೋಥೆರಪಿ ಮಾಡ್ತಾ ಇದ್ದಾರೆ.. 1 ಸೆಷನ್ ಆಗಿದೆ ಅಷ್ಟೇ, ಇನ್ನೂ ಮಾಡಿಸಬೇಕು.
ಪವಿತ್ರಾ ಗೌಡ: ಇನ್ನು ಎಷ್ಟು ದಿನ ಹೀಗೆ ಜೈಲಲ್ಲಿ ಇರಬೇಕು?
(ಈ ಪ್ರಶ್ನೆಗೆ ದರ್ಶನ್ ಕೈ ಸನ್ನೆಯ ಮೂಲಕ '4' ಎಂದು ತೋರಿಸಿದ್ದಾರೆ)
ಪವಿತ್ರಾ ಗೌಡ: ನಂಗೆ ಇಲ್ಲಿ ಇರೋದಕ್ಕೆ ಆಗ್ತಾ ಇಲ್ಲ, ನರಕ ಆಗ್ತಿದೆ.
ನಟ ದರ್ಶನ್: ಇನ್ನು 4 ತಿಂಗಳು ಇರು, ಹೈಕೋರ್ಟ್‌ನಲ್ಲಿ ಜಡ್ಜ್ ಚೇಂಜ್ ಆಗ್ತಾರೆ.
ಪವಿತ್ರಾ ಗೌಡ: ಯಾರು ವಿಶ್ವಜಿತ್ ಶೆಟ್ಟಿ ಅವರಾ...?
ನಟ ದರ್ಶನ್: ಹೌದು. ಇಷ್ಟು ದಿನನೇ ಇದ್ದೀಯ, ಇನ್ನು 4 ರಿಂದ 5 ತಿಂಗಳು ಇರು. ಮೆಂಟಲಿ ಸ್ಟ್ರಾಂಗ್ ಇರು, ಹೃದಯ ಗಟ್ಟಿ ಮಾಡ್ಕೊ.
55
ಸಂಪರ್ಕ ಬರುತ್ತಿದ್ದಂತೆ ಸೈಲೆಂಟ್ ಆದ ಜೋಡಿ!
ಇಬ್ಬರೂ ಹೀಗೆ ಜೈಲಿನ ಕಷ್ಟ ಮತ್ತು ಜಾಮೀನಿನ ನಿರೀಕ್ಷೆಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾಗ, ತಕ್ಷಣವೇ ವಿಡಿಯೋ ಕಾನ್ಫರೆನ್ಸ್ ಮರುಸಂಪರ್ಕಗೊಂಡಿದೆ. ವಿಡಿಯೋ ಆನ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ದರ್ಶನ್ ಮತ್ತು ಪವಿತ್ರಾ ಗೌಡ ತಕ್ಷಣವೇ ಮೌನಕ್ಕೆ ಶರಣಾದರು. ಸದ್ಯ ದರ್ಶನ್ ಅವರು ನೀಡಿರುವ ಈ '4-5 ತಿಂಗಳ' ಸುಳಿವು ಜಾಮೀನು ಪ್ರಕ್ರಿಯೆಯ ಕುರಿತೇ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.