1000 ಕೋಟಿ ಕ್ಲಬ್ ಸೇರಲು ಯಶ್‌ಗೆ ಬೇಕಾಗಿರುವುದೆಷ್ಟು? ರಾಮಾಯಣದ ಕಲೆಕ್ಷನ್‌ನಲ್ಲಿ ಕರ್ನಾಟಕದ ಪಾಲೆಷ್ಟು?

Published : Nov 12, 2026, 04:48 PM IST

ಯಶ್, ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಆರನೇ ದಿನಕ್ಕೆ ಭಾರತದಲ್ಲಿ 526.50 ಕೋಟಿ ರೂಪಾಯಿ ಹಾಗೂ ವಿದೇಶಗಳಲ್ಲಿ..

PREV
15
800 ಕೋಟಿ ಗಳಿಕೆ

ದೀಪಾವಳಿ ಹಬ್ಬದ ಅಂಗವಾಗಿ ಅದ್ದೂರಿಯಾಗಿ ತೆರೆಗೆ ಬಂದಿದ್ದ ಯಶ್‌, ರಣಬೀರ್‌ ಕಪೂರ್‌, ಸಾಯಿ ಪಲ್ಲವಿ ನಟನೆಯ ‘ರಾಮಾಯಣ’ ಚಿತ್ರವು 800 ಕೋಟಿ ಗಳಿಕೆ ಮಾಡುವ ಮೂಲಕ ದಾಖಲೆ ಮಾಡಿದೆ. ಆರನೇ ದಿನ ದೇಶಾದ್ಯಂತ ಒಟ್ಟು 24,344 ಶೋಗಳ ಮೂಲಕ ಸುಮಾರು 526.50 ಕೋಟಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ.

25
ಭಾಷವಾರು ಆವೃತ್ತಿ ಕಲೆಕ್ಷನ್ ಎಷ್ಟು?

ವಿಶ್ವವ್ಯಾಪಿಯಾಗಿ 823.50 ಕೋಟಿ ಗ್ರಾಸ್‌ ಕಲೆಕ್ಷನ್‌ ಮಾಡಿದೆ. ಸದ್ಯದಲ್ಲೇ 1000 ಕೋಟಿ ಗುರಿ ಮುಟ್ಟಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಭಾರದಲ್ಲಿ ಭಾಷವಾರು ಆವೃತ್ತಿಗಳ ಪೈಕಿ ಕನ್ನಡ 7.75, ಹಿಂದಿ 76 ಕೋಟಿ, ಕನ್ನಡದಲ್ಲಿ 7.75 ಕೋಟಿ, ತೆಲುಗು 4 ಕೋಟಿ, ತಮಿಳು 3.60 ಕೋಟಿ ಹಾಗೂ ಮಲಯಾಳಂನಲ್ಲಿ 2.75 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

35
ಪ್ರತಿ ಶೋಗೆ ಸರಾಸರಿ ಎಷ್ಟು ಕಲೆಕ್ಷನ್‌?

ಸಿನಿಮಾ ಬಿಡುಗಡೆಯಾದ ಆರನೇ ದಿನದಂದು ಪ್ರತಿ ಶೋಗೆ ಸರಾಸರಿ 38,726 ಸಾವಿರ ರು. ಕಲೆಕ್ಷನ್‌ ಆಗುತ್ತಿದ್ದು, ಶೇ. 55.3 ರಷ್ಟು ಆಕ್ಯುಪೆನ್ಸಿ ಪಡೆಯುವ ಮೂಲಕ ದಾಖಲೆ ಮಾಡಿದೆ.

45
ವಿದೇಶಗಳಲ್ಲೂ ‘ರಾಮಾಯಣ’ ಅಬ್ಬರ

ಇನ್ನು ವಿದೇಶಗಳಲ್ಲೂ ‘ರಾಮಾಯಣ’ ಅಬ್ಬರ ಜೋರಾಗಿದ್ದು, ಮಂಗಳವಾರ ಒಂದೇ ದಿನ 35 ಕೋಟಿ ವಸೂಲಿ ಮಾಡಿದ್ದು, ಒಟ್ಟು ಓವರ್‌ಸೀಸ್ ಗ್ರಾಸ್ ಕಲೆಕ್ಷನ್ ಇಲ್ಲಿವರೆಗೂ 297 ಕೋಟಿಗೆ ಏರಿದೆ. ದೇಶ- ವಿದೇಶಗಳಲ್ಲಿ ‘ರಾಮಾಯಣ’ ಚಿತ್ರವು 823.50 ಕೋಟಿ ಕಲೆಕ್ಷನ್‌ ಮಾಡಿದೆ.

55
ಶೋಗಳ ಸಂಖ್ಯೆ ಹೆಚ್ಚಳ

ಈ ನಡುವೆ ಮುಂಬೈ, ಪುಣೆ, ಅಹಮದಾಬಾದ್‌ ಸೇರಿದಂತೆ ಹಲವು ಕಡೆ ಹಬ್ಬದ ಹಿನ್ನೆಲೆಯಲ್ಲಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ನಗರಗಳಲ್ಲೂ ಇದೇ ರೀತಿ ಶೋಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹಬ್ಬದ ರಜೆಗಳು ಇರುವುದರಿಂದ ಇದೇ ರೀತಿ ಗಳಿಕೆ ಮುಂದುವರಿದ ಸದ್ಯದಲ್ಲೇ ಯಶ್‌ ‘ರಾಮಾಯಣ’ 1000 ಕೋಟಿ ಗಳಿಕೆಯ ಗುರಿ ಮುಟ್ಟಲಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories