ಅಮೃತಧಾರೆ ಬೆನ್ನಲ್ಲೇ ಮತ್ತೊಂದು ಜನಪ್ರಿಯ ಸೀರಿಯಲ್‌ಗೆ ಅಂತ್ಯ! ಕಲರ್ಸ್ ಕನ್ನಡದ ಈ ಧಾರಾವಾಹಿ ಮುಕ್ತಾಯ?

Published : Nov 12, 2026, 05:14 PM IST

Colors Kannada Serial: ಸದ್ಯ ಎಲ್ಲಾ ವಾಹಿನಿಗಳಲ್ಲೂ ಕೆಲವು ಧಾರಾವಾಹಿಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿವೆ. ಜೀ ಕನ್ನಡದ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಈಗಾಗಲೇ ಶೂಟಿಂಗ್ ಮುಗಿಸಿದೆ. ಇದೀಗ ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ಕೂಡ ಮುಕ್ತಾಯವಾಗಲಿದೆ.

PREV
16
ಜನಪ್ರಿಯ ಧಾರಾವಾಹಿ ಶೀಘ್ರದಲ್ಲಿ ಅಂತ್ಯ

ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ‘ಅಮೃತಧಾರೆ’ ಶೀಘ್ರದಲ್ಲಿ ಅಂತ್ಯವಾಗಲಿದ್ದು, ಈಗಾಗಲೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೇ ಸಮಯದಲ್ಲಿ ಕಲರ್ಸ್ ಕನ್ನಡ ಒಂದು ಜನಪ್ರಿಯ ಧಾರಾವಾಹಿಯೂ ಮುಕ್ತಾಯಗೊಳ್ಳಲಿರುವ ಸೂಚನೆ ಸಿಕ್ಕಿದೆ. ಈ ಬಗ್ಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ.

26
ಕಲರ್ಸ್ ಕನ್ನಡದ ಧಾರಾವಾಹಿ

ಕಲರ್ಸ್ ಕನ್ನಡವು ಅನೇಕ ಜನಪ್ರಿಯ ಜನಮೆಚ್ಚಿದ ಧಾರಾವಾಹಿಗಳನ್ನು ನೀಡಿದೆ. ಪವಿತ್ರ ಬಂಧನ, ಶ್ರೀಗಂಧದ ಗುಡಿ, ನಂದಗೋಕುಲ, ಮುದ್ದು ಸೊಸೆ, ರಾಣಿ, ಅಗ್ನಿಸಾಕ್ಷಿ, ಗೌರಿ ಕಲ್ಯಾಣ ಧಾರಾವಾಹಿಗಳು ತಮ್ಮ ಕಥೆ ಹಾಗೂ ಪಾತ್ರಧಾರಿಗಳ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಒಂದು ಧಾರಾವಾಹಿ ಶೀಘ್ರದಲ್ಲಿ ಅಂತ್ಯವಾಗಲಿದೆ.

36
ಅಂತ್ಯವಾಗಲಿರುವ ಧಾರಾವಾಹಿ ಯಾವುವು?

ಅಂದ ಹಾಗೆ ಕಲರ್ಸ್ ಕನ್ನಡದ ರಾಣಿ ಧಾರಾವಾಹಿ ಮುಕ್ತಾಯದ ಹಂತ ತಲುಪಿದ್ದು, ಶೀಘ್ರದಲ್ಲೇ ಮುಕ್ತಾಯವಾಗಲಿದೆ ಎನ್ನುವ ಸುದ್ದಿ ಸದ್ಯ ಇಂಟರ್ನೆಟ್ಟಲ್ಲಿ ಸದ್ದು ಮಾಡುತ್ತಿದೆ. ಈ ಸುದ್ದಿ ಕೇಳಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದು, ಇಷ್ಟು ಒಳ್ಳೆಯ ಕಥೆಯನ್ನು ಹೊಂದಿರುವ ಧಾರಾವಾಹಿಯನ್ನು ಇಷ್ಟು ಬೇಗ ಯಾಕೆ ಅಂತ್ಯ ಮಾಡುವಿರಿ ಎಂದಿದ್ದಾರೆ.

46
ಮುದ್ದು ಹುಡುಗಿ ರಾಣಿಯ ಕಥೆ ಹೊಂದಿರುವ ಧಾರಾವಾಹಿ

ಈ ಧಾರಾವಾಹಿಯ ಹೈಲೈಟ್ ಪುಟಾಣಿ ರಾಣಿ, ಮಾಡದ ತಪ್ಪಿಗೆ ಜೈಲು ಸೇರಿದ ಕಾವೇರಿಯ ಮುದ್ದಿನ ಮಗಳು ರಾಣಿ, ಜೈಲಲ್ಲಿದ್ದರೂ ಮಗಳನ್ನು ಅಪ್ಪಟ ಚಿನ್ನದಂತೆ ಬೆಳೆಸಿರುತ್ತಾಳೆ. ನಂತರ ತನ್ನ ಮಾವನ ಮನೆಯಲ್ಲಿ ಕಷ್ಟಪಡುವ ರಾಣಿಗೆ, ಅಪ್ಪನ ಪರಿಚಯ, ಬಳಿಕ ಅಮ್ಮನ ಬಿಡುಗಡೆ, ಜಗಳ ಗಲಾಟೆ, ಮೋಸಗಳ ಮಧ್ಯೆ ಕಥೆ ಅದ್ಭುತವಾಗಿ ಸಾಗುತ್ತಾ ಬಂದಿದ್ದು.

56
ತಾಯಿ ಮಗಳ ಭಾವನಾತ್ಮಕ ಸರಳ ಕಥೆ

ಈ ಧಾರಾವಾಹಿ ಸರಳ ಕಥೆಯನ್ನು ಹೊಂದಿದ್ದು, ಅಮ್ಮ ಮತ್ತು ಮಗಳ ಭಾವನಾತ್ಮಕ ಬೆಸುಗೆಯ ಕಥೆಯಾಗಿದೆ. ಸದ್ಯ ಅಮ್ಮ ಮತ್ತು ಅಪ್ಪನನ್ನು ಒಂದು ಮಾಡಲು ರಾಣಿ ಶ್ರಮಿಸುತ್ತಿದ್ದಾರೆ. ಎಲ್ಲಾ ಮೋಸದಾಟಗಳು ಬಯಲಾಗಿ, ಕೊನೆಗೂ ರಾಣಿ ತನ್ನ ಅಮ್ಮ ಮತ್ತು ಅಪ್ಪನ ಜೊತೆ ನೆಮ್ಮದಿಯಾಗಿ ಬದುಕುತ್ತಾಳೋ ಎನ್ನುವುದು ಶೀಘ್ರದಲ್ಲೇ ಗೊತ್ತಾಗಲಿದೆ.

66
ವೀಕ್ಷಕರು ಹೇಳುತ್ತಿರುವುದು ಏನು?

500 ಎಪಿಸೋಡ್ ಆದ್ರೂ ಆಗೋ ತನಕ ಕಥೆ ಮುಂದುವರಿಸ ಬಹುದಿತ್ತು ರಾಣಿ ಜನರೇಷನ್ ಲೀಪ್ ತೆಗೆದುಕೊಳ್ಳಬಹುದಿತ್ತು ಪುಟ್ಟ ರಾಣಿ ದೊಡ್ಡ ರಾಣಿ ಆಗಿ ಲಾಯರ್ ಆಗಿ ಒಂದು ಕೇಸ್ ಗೆದ್ದು ಮದ್ವೆ ಆಗಿ ಸೀರಿಯಲ್ ಹ್ಯಾಪಿ ಎಂಡಿಂಗ್ ಮಾಡಬಹುದಿತ್ತು, ಒಳ್ಳೆ ಸೀರಿಯಲ್ ಗಳನ್ನು ಯಾಕೆ ಮುಗಿಸುತ್ತೀರಿ, ಇದಕ್ಕಿಂತ ಬಿಗ್ ಬಾಸ್ ಮುಗಿಸಬಹುದಿತ್ತು ಅಂತಾನೂ ಜನ ಕಾಮೆಂಟ್ ಮಾಡಿ, ಸೀರಿಯಲ್ ಮುಗಿಯುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories