ಆಟಾಗಾರರು ಅಪರಿಚಿತರು, ಸೋಶಿಯಲ್ ಮೀಡಿಯಾದಲ್ಲಿ ಪರಿಚಯಸ್ಥರು ಐಪಿಎಲ್ ಸ್ಟಾರ್ ಆಟಗಾರರನ್ನು ಹೊಟೆಲ್ ರೂಂಗಳಲ್ಲಿ ಭೇಟಿಯಾಗುತ್ತಿದ್ದಾರೆ. ಭ್ರಷ್ಟಾಚಾರ ವಿರೋಧಿ ದಳ ಅಧಿಕಾರಿಗಳ ಈ ಕುರಿತ ತಂಡದ ಮ್ಯಾನೇಜರ್ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕೆಲ ಸ್ಫೋಟಕ ಮಾಹಿತಿಗಳು ಬಯಲಾಗಿದೆ.
ಐಪಿಎಲ್ ಟೂರ್ನಿಯಲ್ಲಿ ನಿಯಮಗಳು ಕಠಿಣಗೊಳ್ಳುತ್ತಿದೆ. ಈಗಾಗಲೇ ಬಿಸಿಸಿಐ 10 ಫ್ರಾಂಚೈಸಿಗಳಿಗೆ ಎಚ್ಚರಿಕೆ ನೋಟಿಸ್ ನೀಡಿದೆ. 7 ಪುಟಗಳ ಭದ್ರತಾ ಮಾರ್ಗಸೂಚಿಯನ್ನು ನೀಡಿದೆ. ಬಿಸಿಸಿಐ ಆ್ಯಂಟಿ ಕರಪ್ಶನ್ ಯುನಿಟ್( ಎಸಿಯು) ಅಧಿಕಾರಿಗಳು ಕೆಲ ಸ್ಫೋಟಕ ಮಾಹಿತಿ ಕಲೆ ಹಾಕಿದ್ದಾರೆ. ಐಪಿಎಲ್‌ನ ಸ್ಟಾರ್ ಆಟಗಾರರ ಹೊಟೆಲ್ ರೂಂನಲ್ಲಿ ತಡ ರಾತ್ರಿವರೆಗೆ ಕೆಲವರು ತಂಗಿದ್ದರು ಅನ್ನೋ ಮಾಹಿತಿ ಬಯಲಾಗಿದೆ.
25
ಮ್ಯಾನೇಜರ್ ಕರೆಯಿಸಿ ವಿಚಾರಣೆ
ಸ್ಟಾರ್ ಹಾಗೂ ಪ್ರಮುಖ ಆಟಗಾರನ ನಡೆ ಮೇಲೆ ಬಿಸಿಸಿಐ ಎಸಿಯು ಘಟಕ ನಿಗಾವಹಿಸಿದೆ. ಪದೇ ಪದೇ ತನ್ನ ಕೋಣೆಗೆ ತಡ ರಾತ್ರಿ ವೇಳೆ ಕೆಲವರು ಆಗಮಿಸುತ್ತಿರುವ ಬಗ್ಗೆ ಎಸಿಯು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಯುವತಿಯರು, ಸೋಶಿಯಲ್ ಮೀಡಿಯಾ ಮೂಲಕ ಪರಿಚಯಸ್ಥರು ಆಟಗಾರನ ಹೊಟೆಲ್ ರೂಂಗೆ ಭೇಟಿ ನೀಡುತ್ತಿರುವುದು ಎಸಿಯು ಗಮನಕ್ಕೆ ಬಂದಿದೆ. ಹೀಗಾಗಿ ತಂಡದ ಮ್ಯಾನೇಜರ್ ಕರೆಯಿಸಿ ವಾರ್ನಿಂಗ್ ನೀಡಲಾಗಿದೆ.
35
ಆಟಗಾರನ ಹೆಸರು ಬಹಿರಂಗಪಡಿಸದ ಎಸಿಯು
ಸ್ಟಾರ್ ಆಟಗಾರನ ವರ್ತನೆ ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯ ಆಟಗಾರನ ಹೆಸರು ಗೌಪ್ಯವಾಗಿ ಇಡಲಾಗಿದೆ. ಟೂರ್ನಿ ಹಾಗೂ ಆಟಗಾರನ ಘನತೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಿರುವ ಕಾರಣ ಈ ಪ್ರಕರಣವನ್ನು ರಹಸ್ಯವಾಗಿ ನಿರ್ವಹಿಸಲು ಬಿಸಿಸಿಐ ಮುಂದಾಗಿದೆ.
ಬಿಸಿಸಿಐನ ಎಸಿಯು ಘಟಕ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹೊಟೆಲ್‌ನಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಆಟಗಾರರು, ಸ್ಟಾಫ್, ಕೋಣೆಗೆ ಯಾರನ್ನೇ ಕರೆಯಿಸಿಕೊಳ್ಳಲು ಭದ್ರತಾ ಅಧಿಕಾರಿಗಳು, ಬಿಸಿಸಿಐ ಅಧಿಕಾರಿಗಳ ಅನುಮತಿ ಪಡೆಯಬೇಕು. ಈ ಕುರಿತು 7 ಪುಟಗಳ ಮಾರ್ಗಸೂಚಿಯಲ್ಲಿ ಖಡಕ್ ಎಚ್ಚರಿಕೆ ನೀಡಲಾಗಿದೆ.
55
ಯಾರು ಆ ಕ್ರಿಕೆಟಿಗ?
ಸದ್ಯ ಬಿಸಿಸಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ಆ ಸ್ಟಾರ್ ಕ್ರಿಕೆಟಿಗ ಯಾರು ಅನ್ನೋ ಚರ್ಚೆ ಶುರುವಾಗಿದೆ. ಸದ್ಯ ಪ್ರಕರಣದ ಆಂತರಿಕ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಆಟಗಾರನಿಗೆ ಅಮಾನತು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ಯಾರು ಆ ಕ್ರಿಕೆಟಿಗ?
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.