ಐಪಿಎಲ್ 2026 ಟೂರ್ನಿಯ ಪ್ಲೇ ಆಫ್ ಲೆಕ್ಕಾಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಆರ್‌ಸಿಬಿ ಸತತ 2 ಸೋಲಿನ ಬಳಿಕ ಹಾಗೂ ಕೆಕೆಆರ್ ಸತತ 4 ಗೆಲುವಿನ ಬಳಿಕ ಸದ್ಯ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ, ಯಾರಿಗಿದೆ ಚಾನ್ಸ್?
ಐಪಿಎಲ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ರೋಚಕ ಘಟ್ಟ ತಲುಪಿದೆ. ಪ್ರತಿ ತಂಡಕ್ಕೆ ಗೆಲುವು ಅನಿವಾರ್ಯವಾಗುತ್ತಿದೆ. ಒಂದು ಸಣ್ಣ ಎಡವಟ್ಟು ಕೂಡ ತಂಡವನ್ನು ಲೀಗ್‌ನಿಂದಲೇ ಹೊರಗೆ ದಬ್ಬುವ ಸಾಧ್ಯತೆ ಹೆಚ್ಚಿದೆ. ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದ ಆರ್‌ಸಿಬಿ ಸತತ 2 ಸೋಲು ಕಂಡು 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸೋಲಿನಿಂ ಕಂಗೆಟ್ಟ ಕೆಕೆಆರ್ ಸತತ 4 ಗೆಲುವಿನ ಮೂಲಕ ಪ್ಲೇ ಆಫ್ ರೇಸ್‌ನಲ್ಲಿ ಕಾಣಿಸಿಕೊಂಡಿದೆ.
26
ಆರ್‌ಸಿಬಿ ಪ್ಲೇ ಆಫ್ ಚಾನ್ಸ್
ಲಖನೌ ವಿರುದ್ಧದ ಸೋಲಿನಿಂದ ಆರ್‌ಸಿಬಿ ಸತತ 2 ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 12 ಅಂಕದೊಂದಿಗೆ 3ನೇ ಸ್ಥಾನದಲ್ಲಿದೆ. ಆದರೆ ಆರ್‌ಸಿಬಿ ನೆಟ್ ರನ್‌ರೇಟ್ +1.234 ಇರುವ ಕಾರಣ 3ನೇ ಸ್ಥಾನದಲ್ಲಿದೆ. ಸದ್ಯ ಪರಿಸ್ಥಿತಿಯಲ್ಲಿ ಆರ್‌ಸಿಬಿಗೆ ಇನ್ನೊಂದು ಗೆಲುವು ಅನಿವಾರ್ಯವಾಗಿದೆ. ಬಳಿಕ ಎಲ್ಲಾ ನೆಟ್ ರನ್‌ರೇಟ್ ಲೆಕ್ಕಾಚಾರ ನಡೆಯಲಿದೆ. ಆದರೆ 2 ಅಥವ ಅದಕ್ಕಿಂತ ಹೆಚ್ಚಿನ ಗೆಲುವು ಆರ್‌ಸಿಬಿ ತಂಡವನ್ನು ಯಾವುದೇ ಅಡೆ ತಡೆ ಇಲ್ಲದೆ ಪ್ಲೇ ಆಫ್ ಟಾಪ್ 2 ಸ್ಥಾನಕ್ಕೆ ಕೊಂಡೊಯ್ಯಲಿದೆ.
36
ನಾಲ್ಕರಲ್ಲಿ ಆರ್‌ಸಿಬಿ ಭವಿಷ್ಯ ನಿರ್ಧಾರ
ಆರ್‌ಸಿಬಿ ತಂಡಕ್ಕೆ ಮುಂಬೈ ಇಂಡಿಯನ್ಸ್, ಕೆಕೆಆರ್, ಪಂಜಾಬ್, ಹಾಗೂ ಎಸ್ಆರ್‌ಹೆಚ್ ತಂಡಗಳ ವಿರುದ್ದ ಪಂದ್ಯ ಬಾಕಿ ಇದೆ. ನಾಲ್ಕು ಪಂದ್ಯದಲ್ಲಿ 1 ಗೆಲುವು ದಾಖಲಿಸಿದರೆ 14 ಅಂಕದೊಂದಿಗೆ ಆರ್‌ಸಿಬಿ ಪ್ರಯಾಸದಲ್ಲಿ ಪ್ಲೇ ಆಫ್ ಸಾಧ್ಯತೆ ಪಡೆಯಲಿದೆ. 14 ಅಂಕ ಪಡೆದರೆ ನೆಟ್ ರನ್ ರೇಟ್ ಆಧಾರದಲ್ಲಿ ಅರ್ಹತೆ ಪಡೆಯುವ ಸಾಧ್ಯತೆ ಇದೆ. ಕನಿಷ್ಠ 2 ಗೆಲುವು 16 ದೊಂದಿಗೆ ಪ್ಲೇ ಆಫ್ ಹಾದಿ ಸುಗಮಗೊಳಿಸಲಿದೆ.
ಪ್ರತಿ ಐಪಿಎಲ್ ಟೂರ್ನಿಯಲ್ಲಿ ತಂಡಗಳ ಪ್ರದರ್ಶನ, ಗೆಲುವಿನ ಆಧಾರದಲ್ಲಿ ಪ್ಲೇ ಆಫ್ ಕಟ್ ಆಫ್ ಪಾಯಿಂಟ್ ನಿರ್ಧಾರವಾಗುತ್ತದೆ. ಈ ಬಾರಿ ಸದ್ಯದ ಪರಿಸ್ಥಿತಿ ನೋಡಿದರೆ ಕನಿಷ್ಠ 14 ಅಂಕ ಬೇಕೇ ಬೇಕು, 18 ಅಂಕ ಸಂಪಾದಿಸಿದರೆ ಹೆಚ್ಚಿನ ಆತಂಕವಿಲ್ಲದೆ ಪ್ಲೇ ಆಫ್ ಹಂತಕ್ಕೆ ಎಂಟ್ರಿಕೊಡಲು ಸಾಧ್ಯವಾಗಲಿದೆ.
56
ಕೆಕೆಆರ್ ಪ್ಲೇ ಆಫ್ ಲೆಕ್ಕಾಚಾರ
ಕೆಕೆಆರ್ ಪ್ಲೇ ಆಫ್ ರೇಸ್‌ನಿಂದ ಬಹುತೇಕ ದೂರ ಉಳಿದಿತ್ತು. ಆದರೆ ಅಜಿಂಕ್ಯ ರಹಾನೆ ನಾಯಕತ್ವದ ತಂಡ ಸತತ 4 ಗೆಲುವು ದಾಖಲಿಸಿ 9 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಇನ್ನುಳಿದ 4 ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ಒಟ್ಟು ಅಂಕ 17 ಆಗಲಿದೆ. ಈ ಮೂಲಕ ಕೆಕೆಆರ್ ಕೊನೆಯ ಅವಕಾಶ ಒಂದನ್ನು ಪಡೆಯುವ ಸಾಧ್ಯತೆ ಇದೆ.
66
ಪ್ಲೇ ಆಫ್ ಸಿನಾರಿಯೋ
ಬಾಕಿ ಉಳಿದ ಎಲ್ಲಾ ಪಂದ್ಯ ಗೆದ್ದರೆ, 20 ಅಂಕದೊಂದಿಗೆ ಪ್ಲೇಆಫ್ ಟಾಪ್ 2 ಸ್ಥಾನ
ಮೂರು ಪಂದ್ಯ ಗೆದ್ದರೆ, 18 ಅಂಕದೊಂದಿಗೆ ಪ್ಲೇ ಆಫ್ ಹಾದಿ ಸುಗಮ
2 ಪಂದ್ಯ ಗೆದ್ದರೆ, 16 ಅಂಕದೊಂದಿಗೆ ಪ್ಲೇ ಆಪ್ ಸ್ಥಾನ ಖಚಿತಪಡಿಸುವ ಅವಕಾಶ
1 ಪಂದ್ಯ ಗೆದ್ದರೆ, 14 ಅಂಕದ ಜೊತೆಗೆ ನೆಟ್ ರನ್‌ರೇಟ್ ಮೂಲಕ ಪ್ಲೇ ಆಫ್ ಅವಕಾಶ
ಬಾಕಿ ಉಳಿದ ನಾಲ್ಕು ಪಂದ್ಯ ಸೋತರೆ, 12 ಅಂಕದೊಂದಿಗೆ ಎಲಿಮಿನೇಶನ್
ಪ್ಲೇ ಆಫ್ ಸಿನಾರಿಯೋ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.