ಐಪಿಎಲ್ ಟೂರ್ನಿಗೆ ಹೊಸ ತಲೆನೋವು ಪ್ಲೇಯರ್ಸ್‌ಗೆ ಹನಿಟ್ರಾಪ್, ಲೈಂಗಿಕ ಕಿರುಕುಳ ಭೀತಿ, ಬಿಸಿಸಿಐ ಕ್ರಮ

Published : May 08, 2026, 10:16 AM IST

ಐಪಿಎಲ್‌ನಲ್ಲಿ ಹನಿಟ್ರಾಪ್, ಸಂಭಾವ್ಯ ಲೈಂಗಿಕ ಕಿರುಕಳ ಭೀತಿ ಎದುರಾಗಿದೆ. ಬಿಸಿಸಿಐನಿಂದ ಕಠಿಣ ಮಾರ್ಗಸೂಚಿ ಹೊರಡಿಸಿದೆ. ಸುಂದರ ಯುವತಿಯನ್ನು ಆಟಗಾರರು ಆಟಗಾರರು, ತಂಡದ ಸ್ಟಾಫ್‌ಗಳ ಹೊಟೆಲ್ ರೂಂಗೆ ಕಳುಹಿಸುತ್ತಿರುವ ಅಪಾಯ ಎದುರಾಗಿದೆ.

PREV
16
ಐಪಿಎಲ್ ಟೂರ್ನಿಯಲ್ಲಿ ಹನಿಟ್ರಾಪ್, ಲೈಂಗಿಕತೆ

ಸ್ಪಾಟ್ ಫಿಕ್ಸಿಂಗ್ ಬಳಿಕ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಪಂದ್ಯದ ಬಳಿಕ ನಡೆಯುತ್ತಿದ್ದ ಭರ್ಜರಿ ಪಾರ್ಟಿ ಸೇರಿದಂತೆ ಹಲವು ಸಂಭಾವ್ಯ ಅಪಾಯಗಳಿಗೆ ಕಡಿವಾಣ ಹಾಕಲಾಗಿದೆ. ಇದೀಗ ಬಿಸಿಸಿಐಗೆ ಹೊಸ ತಲೆನೋವು ಎದುರಾಗಿದೆ. ಐಪಿಎಲ್ ಟೂರ್ನಿಯಲ್ಲಿ ಆಟಗಾರರು, ತಂಡದ ಸ್ಟಾಫ್‌‌ನ್ನು ಹನಿಟ್ರಾಪ್, ಲೈಂಗಿಕತೆಗೆ ತಳ್ಳಿ ರಹಸ್ಯ ಮಾಹಿತಿ ಸೋರಿಕೆ ಮಾಡುವ ಅಪಾಯ ಎದುರಾಗಿದೆ.

26
ಬುಕ್ಕಿಂಗಳಿಂದ ಹೊಸ ಪ್ಲಾನ್

ಕೆಲ ಸಂಘಟನೆಗಳು, ಬುಕ್ಕಿಗಳು ಯುವತಿಯರನ್ನು ಬಳಸಿಕೊಂಡು ತಂಡದ ರಹಸ್ಯ ಮಾಹಿತಿ ಸೋರಿಕೆ ಮಾಡುವ, ಈ ಮೂಲಕ ಫಿಕ್ಸಿಂಗ್ ಅಥವಾ ಇತರ ಉದ್ದೇಶಕ್ಕೆ ಬಳಸಿಕೊಳ್ಳುವ ಅಪಾಯ ಎದುರಾಗಿದೆ. ಆಟಗಾರರು, ಸ್ಟಾಫ್ ತಂಗವು ಹೊಟೆಲ್ ರೂಂಗೆ ಮಹಿಳೆಯರನ್ನು, ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗರಿಗೆ ಪರಿಚಯವಾಗುವ ಯುವತಿಯರನ್ನು ಕಳುಹಿಸಿ ಹನಿಟ್ರಾಪ್ ಮಾಡುವ ಅಪಾಯದ ಸುಳಿವು ಬಿಸಿಸಿಐಗೆ ಸಿಕ್ಕಿದೆ.

36
ಲೈಂಗಿಕ ಕಿರುಕಳ ಮೂಲಕ ಟ್ರಾಪ್

ಹೊಟೆಲ್ ರೂಂಗೆ ಯುವತಿಯರನ್ನು ಕಳುಹಿಸಿ ಲೈಂಗಿಕತೆಯಲ್ಲಿ ತೊಡಗಿಸಿಕೊಳ್ಳುವ , ರಹಸ್ಯವಾಗಿ ವಿಡಿಯೋ ಚಿತ್ರೀಕರಣ ಮೂಲಕ ಬೆದರಿಸಿ ರಹಸ್ಯ ಮಾಹಿತಿ ಸೋರಿಕೆ ಮಾಡುವ ಅಪಾಯದ ಸೂಚನೆ ಸಿಕ್ಕಿದೆ. ಹೊಟೆಲ್ ರೂಂಗೆ ಅಪರಿಚಿತ ಯುವತಿಯರ ಪ್ರವೇಶದ ಕುರಿತು ಬಿಸಿಸಿಐ ಮಾಹಿತಿ ಕಲೆ ಹಾಕಿದೆ. ಐಪಿಎಲ್ ಟೂರ್ನಿಯ ಹಿಡಿತ ಬಿಸಿಸಿಐನಿಂದ ಕೈತಪ್ಪುವ ಮೊದಲೇ ಎಚ್ಚೆತ್ತುಕೊಂಡಿದೆ.

46
7 ಪುಟದ ಕಠಿಣ ಕ್ರಮ ಜಾರಿಗೊಳಿಸಿದ ಬಿಸಿಸಿಐ

ಐಪಿಎಲ್ ಟೂರ್ನಿಯಲ್ಲಿ ಹನಿಟ್ರಾಪ್ ಹಾಗೂ ಲೈಂಗಿಕ ಅಪಾಯ ಭೀತಿ ಎದುರಾಗಿರುವ ಕಾರಣ ಬಿಸಿಸಿಐ 7 ಪುಟಗಳ ಭದ್ರತಾ ಮಾರ್ಗಸೂಚಿ ಹೊರಡಿಸಿದೆ. ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. ಐಪಿಎಲ್ ಲೀಗ್ ಟೂರ್ನಿಯ ಗೌರವ ಹಾಗೂ ನಂಬಿಕೆ ಕಾಪಾಡಲು ಮಾರ್ಗಸೂಚಿ ಹೊರಡಿಸಿದೆ.

56
ಹೊಟೆಲ್‌ನಲ್ಲಿ ಕಠಿಣ ಭದ್ರತಾ ನಿಯಮ

ಆಟಗಾರರು ತಂಗಿರುವ ಹೊಟೆಲ್ ಕೊಠಡಿಗಳಿಗೆ ಅಪರಿಚತ ವ್ಯಕ್ತಿಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಇಷ್ಟೇ ಅಲ್ಲ ಕೊಠಡಿಗಳಿಗೆ ಯಾರನ್ನೇ ಆಹ್ವಾನಿಸಲು ಬಿಸಿಸಿಐ ಭದ್ರತಾ ಅಧಿಕಾರಿಗಳ ಅನುಮತಿ ಕಡ್ಡಾಯ ಮಾಡಲಾಗಿದೆ. ಇದೇ ವೇಳೆ ಸೋಶಿಯಲ್ ಮೀಡಿಯಾ ಸೇರಿದಂತೆ ಪ್ಲಾಟ್‌ಫಾರ್ಮ್ ಮೂಲಕ ಪರಿಚಯವಾಗುವ ವ್ಯಕ್ತಿಗಳ ಜೊತೆ ಯಾವುದೇ ಮಾಹಿತಿ ಹಂಚಿಕೊಳ್ಳದಂತೆ ಕಠಿಣ ಸೂಚನೆ ನೀಡಲಾಗಿದೆ.

66
ACU ನಿಗಾ, ಆಟಗಾರಿಗೆ ಸೂಚನೆ

ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಈ ಕುರಿತು ತೀವ್ರ ನಿಗಾಇಟ್ಟಿದೆ. ಸಾರ್ವಜನಿಕರ ಜೊತೆ, ಖಾಸಗಿ ವ್ಯಕ್ತಿಗಳ ಜೊತೆ ಹೇಗೆ ವರ್ತಿಸಬೇಕು ಅನ್ನೋ ಕುರಿತು ಸೂಚನೆ ನೀಡಲಾಗಿದೆ. ಲೀಗ್ ಮೇಲೆ ದೇಶದ ಪ್ರತಿಷ್ಠೆ ಅಡಗಿದೆ. ಅಭಿಮಾನಿಗಳು ಸೇರಿದಂತೆ ವಿಶ್ವದೆಲ್ಲೆಡೆ ಭಾರಿ ನಂಬಿಕೆ ಇದೆ. ಯುವ ಕ್ರಿಕೆಟಿಗರ ಬದುಕು ರೂಪಿಸುವ ಲೀಗ್ ಆಗಿದೆ. ಹೀಗಾಗಿ ಯಾವುದೇ ರೀತಿಯ ಲೋಪಕ್ಕೆ ಅವಕಾಶವಿಲ್ಲ ಎಂದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories