Recap: ನಿರ್ಮಾಣ ವೆಚ್ಚವನ್ನೂ ಗಳಿಸಲಾಗದ ಸೂಪರ್ ಫ್ಲಾಪ್ ಚಿತ್ರಗಳಿವು!

First Published Dec 10, 2022, 4:55 PM IST

2022 ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಬಾಲಿವುಡ್‌ನ ಸ್ಥಿತಿ ತುಂಬಾ ಕೆಟ್ಟದಾಗಿತ್ತು. ಈ ವರ್ಷ ಬಿಡುಗಡೆಯಾದ ಸುಮಾರು 92 ಪ್ರತಿಶತ ಬಾಲಿವುಡ್ ಚಿತ್ರಗಳು ಫ್ಲಾಪ್ ಆದವು. ಕೆಲವು ಚಿತ್ರಗಳು  ದೊಡ್ಡ ದುರಂತಗಳು ಎನಿಸಿಕೊಂಡಿವೆ. ಚಿತ್ರಗಳ ಸ್ಥಿತಿಯು ಗಲ್ಲಾಪೆಟ್ಟಿಗೆಯಲ್ಲಿ ಎಷ್ಟು ಕೆಟ್ಟದಾಗಿದೆ ಎಂದರೆ ಈ ಚಿತ್ರಗಳು ತಮ್ಮ  ನಿರ್ಮಾಣ ವೆಚ್ಚವನ್ನು ಸಹ ಪಡೆಯಲು ಸಾಧ್ಯವಾಗಲಿಲ್ಲ. 10 ಕೋಟಿ ಗಳಿಸುವಲ್ಲಿಯೂ ಕೆಲವು ಹಿಂದಿ ಚಿತ್ರಗಳು ವಿಫಲವಾದವು. ಆದರೆ, ದಕ್ಷಿಮ ಭಾರತೀಯ ಸಿನಿಮಾಗಳಿಗೆ ಮಾತ್ರ 2022 ಲಕ್ಕಿ ಇಯರ್ ಎಂದೇ ಹೇಳಬಹುದು. 
 

ನಿಕಮ್ಮ

ಬಜೆಟ್ - 22 ಕೋಟಿ
ಗಳಿಕೆ - 1.77 ಕೋಟಿ

ನಿಕಮ್ಮ ಚಿತ್ರದ ಮೂಲಕ ಶಿಲ್ಪಾ ಶೆಟ್ಟಿ ಬೆಳ್ಳಿತೆರೆಗೆ ಮರಳಿದರು. ಆದರೆ ಅವರ ಪುನರಾಗಮನವು ಅದರ ವಿಶೇಷ ಮೋಡಿ ತೋರಿಸಲು ಸಾಧ್ಯವಾಗಲಿಲ್ಲ. ಈ ವರ್ಷದ ಜೂನ್‌ನಲ್ಲಿ ಬಿಡುಗಡೆಯಾದ ಅವರ ಚಿತ್ರ ನಿಕಮ್ಮ ಕೇವಲ 1.77 ಕೋಟಿ ಗಳಿಸಿ ಫ್ಲಾಪ್ ಚಿತ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಚಿತ್ರವನ್ನು 22 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿತ್ತು. ಶಿಲ್ಪಾ ಜೊತೆ ಅಭಿಮನ್ಯು ದಸ್ಸಾನಿ ಮುಖ್ಯ ಭೂಮಿಕೆಯಲ್ಲಿದ್ದರು.

ಶಭಾಷ್ ಮಿಥು

ಬಜೆಟ್ - 48 ಕೋಟಿ
ಗಳಿಕೆ - 2.89 ಕೋಟಿ

ತಾಪ್ಸಿ ಪನ್ನು ಅಭಿನಯದ ಶಭಾಶ್ ಮೀಟೂ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಸೋತಿದೆ. ಇದು ಈ ವರ್ಷದ ಜೂನ್‌ನಲ್ಲಿ ಬಂದ ಬಯೋಪಿಕ್ ಆಗಿದ್ದು, ಇದು ಪ್ರೇಕ್ಷಕರ ಮನ ಗೆಲ್ಲುವಲ್ಲಿ ವಿಫಲವಾಯಿತು. ಈ ಚಿತ್ರವನ್ನು 48 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಕೇವಲ 2.89 ಕೋಟಿಯನ್ನಷ್ಟೇ ಗಳಿಸಿತು.

ಚಲನಚಿತ್ರ - ಧಾಕಡ್

ಬಜೆಟ್ - 85 ಕೋಟಿ
ಗಳಿಕೆ - 3.77 ಕೋಟಿ

ಕಂಗನಾ ರಣಾವತ್ ಅವರ ಏಕೈಕ ಚಿತ್ರ ಧಕಡ್ ಈ ವರ್ಷ ಬಿಡುಗಡೆಯಾಯಿತು. ಅದೂ ವರ್ಷದ ಅಟ್ಟರ್ ಫ್ಲಾಪ್ ಮೂವಿಗಳಲ್ಲಿ ಒಂದು ಎಂದು ಸಾಬೀತಾಯಿತು. ಮೇ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರದ ಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂದರೆ ಅನೇಕ ನಗರಗಳಲ್ಲಿ ಅದರ ಪ್ರದರ್ಶನಗಳನ್ನು ಸಹ ರದ್ದುಗೊಳಿಸಬೇಕಾಯಿತು. ಈ ಚಿತ್ರದ ಬಜೆಟ್ 85 ಕೋಟಿ ರೂ. ಮತ್ತು ಬಾಕ್ಸ್ ಆಫೀಸ್‌ನಲ್ಲಿ ಕೇವಲ 3.77 ಕೋಟಿ ವ್ಯವಹಾರ ಮಾಡಿದೆ.

ಚಲನಚಿತ್ರ - ಜನ್‌ ಹಿತ್‌ ಮೆ ಜಾರಿ

ಬಜೆಟ್ - 12 ಕೋಟಿ
ಗಳಿಕೆ- 5.12 ಕೋಟಿ

ಈ ವರ್ಷ ಜೂನ್‌ನಲ್ಲಿ ಬಿಡುಗಡೆಯಾದ ನುಸ್ರತ್ ಭರುಚಾ ಅವರ ಚಿತ್ರ ಜನಹಿತ್ ಕೂಡ ದುರಂತವಾಗಿತ್ತು. ವಿಭಿನ್ನ ವಿಷಯದ ಮೇಲೆ ಮಾಡಿದ ಈ ಸಿನಿಮಾವನ್ನು ಪ್ರೇಕ್ಷಕರು ಸ್ವಿಕರಿಸಲೇ ಇಲ್ಲ. 12 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 5.12 ಕೋಟಿ ಬ್ಯುಸಿನೆಸ್ ಮಾಡಿದೆ.

ಚಿತ್ರ- ಗುಡ್‌ಬೈ

ಬಜೆಟ್ - 30 ಕೋಟಿ
ಗಳಿಕೆ - 9.66ಕೋಟಿ

ಅಮಿತಾಭ್ ಬಚ್ಚನ್, ರಶ್ಮಿಕಾ ಮಂದಣ್ಣ ಮತ್ತು ನೀನಾ ಗುಪ್ತಾ ಅವರ ಗುಡ್ ಬೈ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾಯಿತು. 30 ಕೋಟಿ ಬಜೆಟ್‌ನಲ್ಲಿ ತಯಾರಾಗಿ, ಅಕ್ಟೋಬರ್‌ನಲ್ಲಿ ರಿಲೀಸ್ ಆದ ಭಾವನಾತ್ಮಕ ಫ್ಯಾಮಿಲಿ ಡ್ರಾಮಾ ಸಿನಿಮಾವಿದು. ಆದರೆ, ಚಿತ್ರ ಗಳಿಸಿದ್ದು ಬರೀ 9.66 ಕೋಟಿ ಮಾತ್ರ.

ಚಲನಚಿತ್ರ - ಅನೇಕ್‌

ಬಜೆಟ್ - 47 ಕೋಟಿ
ಗಳಿಕೆ - 10.89 ಕೋಟಿ

ಆಯುಷ್ಮಾನ್ ಖುರಾನಾ ಅವರ ಚಿತ್ರವು ಈ ವರ್ಷದ ಮೇ ತಿಂಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗುವಲ್ಲಿ ವಿಫಲವಾಯಿತು. ಈ ಚಿತ್ರ ಅದ್ಯಾವಾಗ ಬಂತೋ, ಯಾವಾಗ ಹೋಯಿತು ಎಂಬುವುದೇ ತಿಳಿಯಲಿಲ್ಲ. ಚಿತ್ರದ ಬಜೆಟ್ 47 ಕೋಟಿ ಮತ್ತು ಅದು ಕೇವಲ 10.89 ಕೋಟಿ ವ್ಯವಹಾರ ಮಾಡಿತು.

ಚಿತ್ರ- ಅಟ್ಯಾಕ್‌

ಬಜೆಟ್ - 80 ಕೋಟಿ
ಗಳಿಕೆ - 22.07 ಕೋಟಿ

ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾದ ಅಟ್ಯಾಕ್ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸೋತಿತು. ಜಾನ್ ಅಬ್ರಹಾಂ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ರಾಕುಲ್ ಪ್ರೀತ್ ಸಿಂಗ್ ಅಭಿನಯದ ಈ ಚಿತ್ರ ಡಿಸಾಸ್ಟರ್ ಆಗಿತ್ತು. 80 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಕೇವಲ 22.07 ಕೋಟಿ ಗಳಿಸಲು ಸಾಧ್ಯವಾಯಿತು.
 

ಚಿತ್ರ- ಜಯೇಶ್‌ಭಾಯ್ ಜೋರ್ದಾರ್

ಬಜೆಟ್ - 86 ಕೋಟಿ
ಗಳಿಕೆ - 26.31 ಕೋಟಿ

86 ಕೋಟಿ ಬಜೆಟ್‌ನಲ್ಲಿ ತಯಾರಾದ ರಣವೀರ್ ಸಿಂಗ್ ಅವರ ಚಿತ್ರ ಜಯೇಶ್‌ಭಾಯ್ ಜೋರ್ದಾರ್ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಯಿತು. ಮೇ ತಿಂಗಳಲ್ಲಿ ಬಿಡುಗಡೆಯಾದ ಈ ಚಿತ್ರ 26.31 ಕೋಟಿ ಬ್ಯುಸಿನೆಸ್ ಮಾಡಿದೆ. ಚಿತ್ರದಲ್ಲಿ ಶಾಲಿನಿ ಪಾಂಡೆ ಪ್ರಮುಖ ಪಾತ್ರದಲ್ಲಿದ್ದರು.

ಜರ್ಸಿ

ಬಜೆಟ್ - 80 ಕೋಟಿ
ಗಳಿಕೆ - 27.90 ಕೋಟಿ

ಶಾಹಿದ್ ಕಪೂರ್ ಮತ್ತು ಮೃಣಾಲ್ ಠಾಕೂರ್ ಅಭಿನಯದ ಜರ್ಸಿ ಚಿತ್ರ ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿತ್ತು. ಇದು ಸೌತ್‌ನ ಚಿತ್ರದ ರಿಮೇಕ್ ಆಗಿತ್ತು, ಆದರೆ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 80 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಕೇವಲ 27.9 ಕೋಟಿ ಬ್ಯುಸಿನೆಸ್ ಮಾಡಿದೆ.

ಚಿತ್ರ- ಬದಾಯಿ ದೋ

ಬಜೆಟ್ - 35 ಕೋಟಿ
ಗಳಿಕೆ - 28.33 ಕೋಟಿ

ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅವರ ಚಿತ್ರ ಬದಾಯಿ ದೋ ಕೂಡ ಬಾಕ್ಸ್ ಆಫೀಸ್‌ನಲ್ಲಿ ತನ್ನ ಮೋಡಿ ತೋರಿಸಲು ವಿಫಲವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಚಿತ್ರವು 35 ಕೋಟಿ ಬಜೆಟ್‌ನಲ್ಲಿ ತಯಾರಾಗಿದೆ ಮತ್ತು ಕೇವಲ 28.33 ಕೋಟಿ ಗಳಿಸಿದೆ.

click me!