ಕೇವಲ 15 ವರ್ಷಕ್ಕೆ ವರ್ಜಿನಿಟಿ ಕಳೆದುಕೊಂಡೆ; ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ

Published : Dec 10, 2022, 11:26 AM IST

ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಕೇವಲ 15 ವರ್ಷದವರಾಗಿದ್ದಾಗಲೇ ವರ್ಜಿನಿಟಿ ಕಳೆದುಕೊಂಡೆ ಎಂದು ಹೇಳಿದ್ದಾರೆ. 

PREV
17
ಕೇವಲ 15 ವರ್ಷಕ್ಕೆ ವರ್ಜಿನಿಟಿ ಕಳೆದುಕೊಂಡೆ; ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ

ಬಾಲಿವುಡ್ ಸ್ಟಾರ್ ನಟ, ಚಾಕೊಲೇಟ್ ಬಾಯ್ ಎಂದೇ ಖ್ಯಾತಿಗಳಿಸಿರುವ ರಣಬೀರ್ ಕಪೂರ್ ಇತ್ತೀಚಿಗಷ್ಟೆ ತಂದೆಯಾದ ಸಂಭ್ರಮದಲ್ಲಿದ್ದಾರೆ. ಈ ವರ್ಷ ರಣಬೀರ್ ಕಪೂರ್ ಅವರಿಗೆ ತುಂಬಾ ವಿಶೇಷವಾದ ವರ್ಷವಾಗಿದೆ. ಈ ವರ್ಷದ ಏಪ್ರಿಲ್ ನಲ್ಲಿ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಜೊತೆ ಹಸೆಮಣೆ ಏರಿದರು. 

27

ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ದಂಪತಿ ನವೆಂಬರ್ 6ರಂದು ಮೊದಲ ಮಗುವನ್ನು ಸ್ವಾಗತಿಸಿದರು. ಹೆಣ್ಣು ಮಗುವಿಗೆ ಜನ್ಮ ನೀಡಿದ ಅಲಿಯಾ ಭಟ್ ಮಗಳಿಗೆ ರಾಹಾ ಎಂದು ನಾಮಕರಣ ಮಾಡಿದ್ದಾರೆ. 

37

ರಣಬೀರ್ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದಹಾಗೆ ರಣಬೀರ್ ಕಪೂರ್ ಈ ಹಿಂದೆ ತಾನು ವರ್ಜಿನಿಟಿ ಕಳೆದುಕೊಂಡ ಬಗ್ಗೆ ಬಹಿರಂಗ ಪಡಿಸುವ ಮೂಲಕ ಅಚ್ಚರಿ ಮೂಡಿಸಿದ್ದರು. ರಣಬೀರ್ ಕಪೂರ್ ಹಳೆಯ ಹೇಳಿಕೆ ಮತ್ತೆ ವೈರಲ್ ಆಗಿದೆ.  

47

ರಣಬೀರ್ ಕಪೂರ್ 15 ವರ್ಷವಿರುವಾಗಲೇ ವರ್ಜಿನಿಟಿ ಕಳೆದು ಕೊಂಡಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಮ್ಯಾಗಜಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ಈ ಬಗ್ಗೆ ಬಹಿರಂಗ ಪಡಿಸಿದ್ದರು. ಈ  ಹೇಳಿಕೆ ಮತ್ತೆ ವೈರಲ್ ಆಗಿದೆ. 

57

ರಣಬೀರ್ ಕಪೂರ್ ಅಲಿಯಾ ಭಟ್ ಜೊತೆ ಪ್ರೀತಿಯಲ್ಲಿ ಬೀಳುವ ಮೊದಲು ಅನೇಕ ನಟಿಯರ ಜೊತೆ ಡೇಟಿಂಗ್ ಮಾಡಿದ್ದರು. ಸದಾ ಹುಡುಗಿಯರ ವಿಚಾರಕ್ಕೆ ಸುದ್ದಿಯಲ್ಲಿರುತ್ತಿದ್ದರು. ರಾಕ್ ಸ್ಟಾರ್ ಮ್ಯಾಗಜಿನ್‍‌ಗೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ವರ್ಜಿನಿ ಕಳೆದುಕೊಂಡ ಬಗ್ಗೆ ಬಹಿರಂಗ ಪಡಿಸಿದ್ದರು.  ಆದರೆ ಆ ಹುಡುಗಿಯೊಂದಿಗಿನ ಸಂಬಂಧ ದೀರ್ಘ ಕಾಲ ಉಳಿದಿಲ್ಲ ಎಂದು ಸಹ ಹೇಳಿದ್ದರು. 

67

ರಣಬೀರ್ ಕಪೂರ್ ಹೇಳಿಕೆ ಅಚ್ಚರಿ ಮೂಡಿಸಿತ್ತು. ಇದೀಗ ಹೆಣ್ಣು ಮಗುವಿನ ತಂದೆಯಾಗಿರುವ ರಣಬೀರ್ ಹಳೆಯ ಹೇಳಿಕೆ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರಣಬೀರ್ ಕಪೂರ್ ಅಲಿಯಾ ಭಟ್ ಜೊತೆ ಪ್ರೀತಿಯಲ್ಲಿ ಬೀಳುವ ಮೊದಲು ಅನೇಕ ಹುಡುಗಿಯ ಜೊತೆ ಮಾಡಿದ್ದರು. 

77

ರಣಬೀರ್ ಕಪೂರ್ ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್, ಮಹಿರಾ ಖಾನ್, ನಿರ್ಗಿಸಿ ಫಕ್ರಿ, ಆವಂತಿಕಾ ಮಲ್ಲಿಕ್ ಸೇರಿದಂತೆ ಅನೇಕ ನಟಿಯರ ಜೊತೆ ಡೇಟಿಂಗ್ ಮಾಡಿದ್ದರು. ಅದರಲ್ಲೂ ದೀಪಿಕಾ ಮತ್ತು ಕತ್ರಿನಾ ವಿಚಾರದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಸದ್ಯ ಅಲಿಯಾ ಭಟ್ ಅವರನ್ನು ಮದುವೆಯಾಗಿ ಸಂತೋಷದ ಜೀವನ ನಡೆಸುತ್ತಿದ್ದಾರೆ. 

Read more Photos on
click me!

Recommended Stories