ಕಾರ್ತಿಕ್‌ ಆರ್ಯನ್‌ ಜೊತೆ ರೋಮ್ಯಾನ್ಸ್‌ ಮಾಡಲಿದ್ದರಾ ರಶ್ಮಿಕಾ ಮಂದಣ್ಣ

Published : Sep 11, 2022, 05:21 PM IST

ಕಾರ್ತಿಕ್ ಆರ್ಯನ್ (Kartik Aryan) ಜೊತೆಗೆನ ಆಶಿಕಿ 3 ಚಿತ್ರದ ಘೋಷಣೆಯಾದಾಗಿನಿಂದಲೂ ಈ ಚಿತ್ರದ ನಾಯಕ ನಟಿಯ ಬಗ್ಗೆ  ಚರ್ಚೆ ನಡೆಯುತ್ತಿದೆ. ಈ ಚಿತ್ರದಲ್ಲಿ ಕಾರ್ತಿಕ್ ನಾಯಕಿಯಾಗಿ ಶ್ರದ್ಧಾ ಕಪೂರ್ ಅಥವಾ ಕೃತಿ ಸನನ್ ನಟಿಸಲಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿದೆ. ಆಗ ದೀಪಿಕಾ ಪಡುಕೋ (Deepika Padukone) ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ಈ ಚಿತ್ರದಲ್ಲಿ ನ್ಯಾಶನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಬಹುದು ಎಂಬ ಸುದ್ದಿ ಹೊರಬಿದ್ದಿದೆ. ಆದರೆ, ಚಿತ್ರದ ನಾಯಕಿ ಬಗ್ಗೆ ನಿರ್ಮಾಪಕರು ಯಾವುದೇ ಘೋಷಣೆ ಮಾಡಿಲ್ಲ

PREV
16
ಕಾರ್ತಿಕ್‌ ಆರ್ಯನ್‌ ಜೊತೆ ರೋಮ್ಯಾನ್ಸ್‌ ಮಾಡಲಿದ್ದರಾ ರಶ್ಮಿಕಾ ಮಂದಣ್ಣ
Rashmika Mandanna

ಈ ವರ್ಷದ ಕೊನೆಯಲ್ಲಿ ಆಶಿಕಿ 3  ಚಿತ್ರ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಆಶಿಕಿ ಚಿತ್ರದ ಎರಡೂ ಭಾಗಗಳು ಭಾರೀ ಹಿಟ್ ಆಗಿದ್ದವು.ಈಟಿಮ್ಸ್ ವರದಿಗಳ ಪ್ರಕಾರ, ಆಶಿಕಿ 3 ಗಾಗಿ ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ಕೃತಿ ಸನೋನ್ ನಂತರ ರಶ್ಮಿಕಾ ಮಂದಣ್ಣ ಅವರು ಕೂಡ ಚರ್ಚೆಯಾಗುತ್ತಿದ್ದಾರೆ.

26

ಭೂಮಿಕೆಯಲ್ಲಿದ್ದರು ಮತ್ತು ಈ ಬಾರಿ ಅವರು ನಾಯಕಿಯಾಗಬಹುದು ಎಂದು ಹೇಳಲಾಗುತ್ತಿದೆ. ಆದರೆ  ಹೊಸ ನಾಯಕಿಯನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಬಯಸಿದ್ದಾರೆ. ಇದೇ ಕಾರಣಕ್ಕೆ ಬೇರೆ ನಟಿಯರ ಹೆಸರುಗಳೂ ಹರಿದಾಡುತ್ತಿವೆ. ಈ ನಡುವೆ ಸೌತ್ ನಟಿ ರಶ್ಮಿಕಾ ಮಂದಣ್ಣ ಹೆಸರು ಕೂಡ ಕೇಳಿ ಬಂದಿದೆ. 

36

ವಾಸ್ತವವಾಗಿ, ಇತ್ತೀಚೆಗೆ ಅವರ ಬಾಲಿವುಡ್ ಚೊಚ್ಚಲ ಚಿತ್ರ ಗುಡ್ ಬೈ ಟ್ರೇಲರ್ ಅನ್ನು ಬಹಿರಂಗಪಡಿಸಲಾಯಿತು, ಇದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಪ್ರಶಂಸಿಸಲ್ಪಟ್ಟಿದೆ.  ಅದೇ ಸಮಯದಲ್ಲಿ, ಅವರು ಸಿದ್ಧಾರ್ಥ್ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು  ಚಿತ್ರದಲ್ಲಿಯೂ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಅಭಿನಯದ ಪುಷ್ಪಾ ಚಿತ್ರವು ಬ್ಲಾಕ್ ಬಸ್ಟರ್ ಆಗಿದ್ದು, ದಕ್ಷಿಣದಿಂದ ಬಾಲಿವುಡ್‌ನಲ್ಲೂ ಅವರ ಕ್ರೇಜ್ ಕಾಣಿಸಿಕೊಳ್ಳಲು ಇದು ಕಾರಣವಾಗಿದೆ.


 

46

ಮಹೇಶ್ ಭಟ್ 1990 ರಲ್ಲಿ ಹೊಸ ಮುಖಗಳಾದ ರಾಹುಲ್ ರಾಯ್ ಮತ್ತು ಅನು ಅಗರ್ವಾಲ್ ಅವರೊಂದಿಗೆ ಆಶಿಕಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಹಿಟ್ ಎಂದು ಸಾಬೀತಾಯಿತು. ಅಷ್ಟೇ ಅಲ್ಲ ಚಿತ್ರದ ಹಾಡುಗಳು ಕೂಡ ಫೇಮಸ್ ಆದವು. ಇಂದಿಗೂ ಜನರು ಈ ಹಾಡನ್ನು ಇಷ್ಟಪಡುತ್ತಾರೆ. 

56

ನಂತರ 2013 ರಲ್ಲಿ ಆಶಿಕಿ 2 ಬಂದಿತು. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ಆದಿತ್ಯ ರಾಯ್ ಕಪೂರ್ ಮುಖ್ಯ ಭೂಮಿಕೆಯಲ್ಲಿದ್ದರು. ಈ ಚಿತ್ರ ಹಿಟ್ ಎಂದು ಸಾಬೀತಾಯಿತು.

66

 ಇದೀಗ ಕಾರ್ತಿಕ್‌ ಆರ್ಯನ್‌ ಆ ಹೀರೋ ಆಗಿ ಆಶಿಕಿ 3 ಸಿನಿಮಾ ಘೋಷಣೆಯ ನಂತರ ಮತ್ತೆ ಜನರಲ್ಲಿ ಅದರ ಕ್ರೇಜ್ ಕಂಡು ಬರುತ್ತಿದೆ.   ಆಶಿಕಿ ಫ್ರಾಂಚೈಸಿಯ ಮೂರನೇ  ಸಂಗೀತಮಯ ಚಿತ್ರವನ್ನು  ಅನುರಾಗ್ ಬಸು ನಿರ್ದೇಶಿಸಲಿದ್ದಾರೆ ಎಂದು ವರದಿಯಾಗಿದೆ
 

Read more Photos on
click me!

Recommended Stories