ಜೊತೆ ಜೊತೆಯಲಿ ಸೀರಿಯಲ್‌ನಲ್ಲಿ ಅಭಿನಯಿಸಿದ್ದ ಮೇಘಾ ಶೆಟ್ಟಿ, ಅನು ಸಿರಿಮನೆ ಹಾಗೂ ರಾಜನಂದಿನಿ ಪಾತ್ರದಲ್ಲಿ ಮಿಂಚಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದರು. ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿ ಬೆಳ್ಳಿ ಪರದೆಯಲ್ಲಿ ಮಿಂಚುತ್ತಿರುವ ಮೇಘಾಶೆಟ್ಟಿ ಈಗ 'ಗ್ರಾಮಾಯಣ' ಸಿನಿಮಾಗೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.