ಗಣೇಶ ಚತುರ್ಥಿಯಲ್ಲೂ ಅಂಟಿಕೊಂಡಿದ್ದ ದಿಶಾ ಪಟಾನಿ, ಮೌನಿ ರಾಯ್‌, ಏನ್ಕತೆ ಕೇಳ್ತಿದ್ದಾರೆ ಫ್ಯಾನ್ಸ್!

Published : Sep 20, 2023, 06:29 PM IST

ಬಿಟೌನ್‌ನ BFF ಎಂದೇ ಫೇಮಸ್‌ ಆಗಿರುವ ದಿಶಾ ಪಟಾನಿ (Disha Patani) ಮತ್ತು ಮೌನಿ ರಾಯ್‌ (mOuni Roy) ಅಂಬಾನಿಯವರ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗವಹಿಸಿದರು. ಇಬ್ಬರು ಒಟ್ಟಿಗೆ ಪೋಸ್‌ ನೀಡಿದ್ದಾರೆ. ಇವರಿಬ್ಬರ ಫೋಟೋ ಸಖತ್‌ ವೈರಲ್‌ ಆಗಿದ್ದು, ಇವರ ನಡುವಿನ ಸಂಬಂಧದ ಬಗ್ಗೆ ಮತ್ತೆ ಕೂತೂಹಲ ಹುಟ್ಟಿಸಿದೆ. ದಿಶಾ ಮತ್ತು ಮೌನಿ ಹೀಗೆ ಒಟ್ಟಿಗೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಅಷ್ಟಕ್ಕೂ ಇವರಿಬ್ಬರು ಕೇವಲ ಫ್ರೆಂಡ್ಸ್‌ ಮಾತ್ರನಾ ಎಂದು ಜನರಲ್ಲಿ ಅನುಮಾನಗಳಿವೆ. 

PREV
111
ಗಣೇಶ ಚತುರ್ಥಿಯಲ್ಲೂ ಅಂಟಿಕೊಂಡಿದ್ದ ದಿಶಾ ಪಟಾನಿ, ಮೌನಿ ರಾಯ್‌, ಏನ್ಕತೆ ಕೇಳ್ತಿದ್ದಾರೆ ಫ್ಯಾನ್ಸ್!

ಜನಪ್ರಿಯ ನಟಿಯರಾದ ಮೌನಿ ರಾಯ್ ಮತ್ತು ದಿಶಾ ಪಟಾನಿ ಆಂಟಿಲಿಯಾದಲ್ಲಿ ಅಂಬಾನಿಯವರ ಗಣೇಶ ಚತುರ್ಥಿ ಆಚರಣೆಯಲ್ಲಿ ಭಾಗವಹಿಸಿದರು.

211

ಮೌನಿ ರಾಯ್ ಪ್ರಿಂಟೆಡ್ ಸೀರೆಯನ್ನು ಧರಿಸಿದ್ದರೆ, ದಿಶಾ ಪಟಾನಿ ಸರಳ ರೇಷ್ಮೆ ಸೀರೆಯನ್ನು ಬ್ರೇಲೆಟ್ ಬ್ಲೌಸ್‌ನೊಂದಿಗೆ ಧರಿಸಿದ್ದರು.

311

ಬಿಟೌನ್‌ನ BFF ಎಂದೇ ಫೇಮಸ್‌ ಆಗಿರುವ ದಿಶಾ ಪಟಾನಿ ಮತ್ತು ಮೌನಿ ರಾಯ್‌ ಅಂಬಾನಿಯವರ ಗಣೇಶ ಚತುರ್ಥಿ ಆಚರಣೆಯಲ್ಲಿ ಒಟ್ಟಿಗೆ ಪೋಸ್‌ ನೀಡಿದ್ದಾರೆ.

411

ಮೌನಿ ರಾಯ್ ಮತ್ತು ದಿಶಾ ಪಟಾನಿ ಅವರು ಮಾರ್ಚ್ 2023 ರಲ್ಲಿ ಅಕ್ಷಯ್ ಕುಮಾರ್ ಮತ್ತು ಇತರರೊಂದಿಗೆ ಅಮೇರಿಕಾಕ್ಕೆ ಮನರಂಜನಾ ಪ್ರವಾಸಕ್ಕೆ ಭೇಟಿ ನೀಡಿದ್ದರು. 

511

ಅಮೆರಿಕದಲ್ಲಿ  ಇಬ್ಬರು ನಟಿಯರು ಪರಸ್ಪರರು ಸಾಕಷ್ಟು ಸಮಯ ಕಳೆದರು. ಮಾತ್ರವಲ್ಲದೆ ಒಬ್ಬರಿಗೊಬ್ಬರು ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡರು. 

611

ಮೌನಿ ತನ್ನ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ತನ್ನ ಕೋಣೆಯ ಬಾಲ್ಕನಿಯಲ್ಲಿ ದಿಶಾ ಜೊತೆ ಪೋಸ್ ನೀಡುತ್ತಿರುವ ಫೊಟೋವನ್ನು ಹಂಚಿಕೊಂಡಿದ್ದಾರೆ. ಅಂದಿನಿಂದ, ಈ ಜೋಡಿಯು ಬಿಟೌನ್‌ನಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಯಿತು. 

711

ತಮ್ಮ US ಪ್ರವಾಸದ ನಂತರ, ಮೌನಿ ಮತ್ತು ದಿಶಾ  ವಿವಿಧ ಸಾಮಾಜಿಕ ಸಂದರ್ಭಗಳಲ್ಲಿ ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ತಮ್ಮ ಒಡನಾಟವನ್ನು ಪರಿಚಯಿಸಿದ್ದಾರೆ. 

811

ಮುಂಬೈನಲ್ಲಿ ಮೌನಿ ಅವರ ಹೊಸ ರೆಸ್ಟೋರೆಂಟ್ ಉದ್ಘಾಟನೆಯಲ್ಲಿಯೂ ದಿಶಾ ಅವರಿದ್ದ. ಇದರ ನಡುವೆಯೇ ಇಬ್ಬರು ಪಾಪರಾಜಿಗಳಿಗೆ ಪೋಸ್ ನೀಡುತ್ತಿರುವುದು ಕಂಡುಬಂದಿತು.

911

ರೆಸ್ಟೋರೆಂಟ್ ಉದ್ಘಾಟನೆಯ  ಫೋಟೋದಲ್ಲಿ, ಮೌನಿರಾಯ್‌  ದಿಶಾ ಪಟಾನಿ ಅವರ ಕೆನ್ನೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು. ಈ ಫೋಟೋ ಸಖತ್‌ ವೈರಲ್‌ ಆಗಿದ್ದು ಇವರ ಸಂಬಂಧದ ಬಗ್ಗೆ ಹಲವು ರೂಮರ್‌ಗಳಿಗೆ ದಾರಿ ಮಾಡಿಕೊಟ್ಟಿತ್ತು.

1011

ಇಷ್ಟೇ ಅಲ್ಲದೆ ಇವರಿಬ್ಬರ ನಡುವಿನ ಬಾಂಧವ್ಯ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳಲ್ಲೂ ಕಂಡುಬರುತ್ತದೆ. ಕಳೆದವಾರ ಮೌನಿ ಅವರ ಫೋಟೋಗೆ ದಿಶಾ ಸೂಪರ್‌ ಹಾಟ್‌ ಎಂದು ಪ್ರತಿಕ್ರಿಯೆ ನೀಡಿದ್ದರು.

1111

ಈ ವರ್ಷ ಜೂನ್‌ನಲ್ಲಿ ದಿಶಾ ಅವರ ಬರ್ತ್‌ಡೇ ಗಾಗಿ ಮೌನಿ ಅವರು ದೀರ್ಘವಾದ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದರು. ಅದರ ಜೊತೆಗೆ ಇಬ್ಬರ ಕ್ಯೂಟ್‌ ಡ್ಯಾನ್ಸ್ ವೀಡಿಯೋ ಕೂಡ ಹಂಚಿಕೊಂಡಿದ್ದರು

Read more Photos on
click me!

Recommended Stories