ಕಳಂಕ್‌ - ಸಾಮ್ರಾಟ್ ಪೃಥ್ವಿರಾಜ್‌ವರೆಗೆ ಫ್ಲಾಪ್‌ ಆದ ದೊಡ್ಡ-ಬಜೆಟ್ ಬಾಲಿವುಡ್ ಚಿತ್ರಗಳು!

Published : Sep 20, 2023, 06:34 PM IST

ದೊಡ್ಡ ಬಜೆಟಿನ, ದೊಡ್ಡ ಸ್ಟಾರ್ಸ್‌ ಸಿನಿಮಾಗಳೆಲ್ಲಾ ಖಂಡಿತ ಗೆಲುವು ಕಾಣುತ್ತವೆ ಎಂಬುದು ಸುಳ್ಳು. ಇದಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ದೊಡ್ಡ ಸ್ಟಾರ್‌ ನಟನಟಿಯರನ್ನು ಒಳಗೊಂಡ ದೊಡ್ಡ ಬಜೆಟಿನ ಸಿನಿಮಾಗಳು ಸಂಪೂರ್ಣವಾಗಿ ನೆಲಕಚ್ಚಿವೆ.  ಹಲವು  ದೊಡ್ಡ-ಬಜೆಟ್  ಬಾಲಿವುಡ್ ಚಿತ್ರಗಳು ಬಾಕ್ಸ್ ಆಫೀಸ್ ಅನ್ನು ಬೆಳಗಿಸಲು ವಿಫಲವಾಗಿವೆ. 

PREV
19
 ಕಳಂಕ್‌ - ಸಾಮ್ರಾಟ್ ಪೃಥ್ವಿರಾಜ್‌ವರೆಗೆ  ಫ್ಲಾಪ್‌ ಆದ  ದೊಡ್ಡ-ಬಜೆಟ್ ಬಾಲಿವುಡ್ ಚಿತ್ರಗಳು!

ಕಲಾಂಕ್ ಧರ್ಮ ಪ್ರೊಡಕ್ಷನ್ಸ್‌ನ 2019 ರ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ. ದೊಡ್ಡ ಬಜೆಟ್‌ನ ಈ ಸಿನಿಮಾವು ಆಲಿಯಾ ಭಟ್, ವರುಣ್ ಧವನ್, ಮಾಧುರಿ ದೀಕ್ಷಿತ್ ನೆನೆ, ಸೋನಾಕ್ಷಿ ಸಿನ್ಹಾ, ಆದಿತ್ಯ ರಾಯ್ ಸೇರಿ ಎಲ್ಲ ಸ್ಟಾರ್ ಮೇಳವನ್ನು ಒಟ್ಟುಗೂಡಿಸಿತು. ಸುಂದರವಾಗಿ ರೂಪಿಸಲ್ಪಟ್ಟಿದ್ದರೂ ಮತ್ತು ಬೆರಗುಗೊಳಿಸುವ ವೇಷಭೂಷಣಗಳನ್ನು ಪ್ರದರ್ಶಿಸಿದರೂ,  ಸಿನಿಮಾದ ನಿರೂಪಣೆಯು ಹಿಂಬದಿಯ ಸೀಟಿನಲ್ಲಿ ಉಳಿಯಿತು.

29

ಕಳೆದ ಕೆಲವು ವರ್ಷಗಳಲ್ಲಿ ಸಲ್ಮಾನ್ ಖಾನ್‌ಗೆ ಬ್ಲಾಕ್‌ಬಸ್ಟರ್‌ ಅದೃಷ್ಟ ಇರಲಿಲ್ಲ. ಬಜರಂಗಿ ಭಾಯಿಜಾನ್ ಗಳಿಸಿದ ಭಾರೀ ಯಶಸ್ಸಿನ ನಂತರ,   2017 ರಲ್ಲಿ  ನಿರ್ದೇಶಕ ಕಬೀರ್ ಖಾನ್ ಟ್ಯೂಬ್‌ಲೈಟ್‌ ಸಿನಿಮಾದಲ್ಲಿ ಕಾಣಿಸಿಕೊಂಡರು.  ಆದರೆ 135 ಕೋಟಿ ಬಜೆಟ್‌ನ ಈ ಚಿತ್ರ ಮ್ಯಾಜಿಕ್ ಮಾಡುವಲ್ಲಿ ಪೂರ್ತಿ ಫೈಲ್ ಆಯಿತು.

39

ಅನುರಾಗ್ ಕಶ್ಯಪ್ ನಿರ್ದೇಶನದ, ಬಾಂಬೆ ವೆಲ್ವೆಟ್ ಚಿತ್ರದಲ್ಲಿ ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಕೇ ಕೇ ಮೆನನ್, ವಿಕ್ಕಿ ಕೌಶಲ್ ಮತ್ತು ಕರಣ್ ಜೋಹರ್ ಸೇರಿ ಸಮಗ್ರ ತಾರಾಗಣವಿದೆ. ಚಿತ್ರವು ದೊಡ್ಡ ಬಾಕ್ಸ್ ಆಫೀಸ್ ಫ್ಲಾಪ್ ಆಗಿ ಹೊರಹೊಮ್ಮಿತು. 120 ಕೋಟಿ ನಿರ್ಮಾಣದ ಈ ಚಲನಚಿತ್ರವು ಅದರ ಕೆಟ್ಟ ಸ್ಕ್ರಿಪ್ಟ್ ಮತ್ತು ಕೆಟ್ಟ ನಟನೆಯಿಂದಾಗಿ ಸುಮಾರು 43 ಕೋಟಿ ಗಳಿಸಿತು.

49

ಆಲಿಯಾ ಭಟ್ ಮತ್ತು ಶಾಹಿದ್ ಕಪೂರ್ ಅವರ  ಶಾಂದಾರ್ ಬಗ್ಗೆ  ಅಭಿಮಾನಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದರು, ಆದರೆ ಚಲನಚಿತ್ರವು  ಜನರ ನೀರಿಕ್ಷೆ ಮುಟ್ಟಲಿಲ್ಲ. 69 ಕೋಟಿ ಖರ್ಚಿನ ಈ ಸಿನಿಮಾ ಡೊಡ್ಡ ಪ್ಲಾಫ್‌ ಆಗಿದೆ

59

ಸಂಜಯ್‌ ಲೀಲಾ ಬನ್ಸಾಲಿ ಅವರ ಅದ್ದೂರಿ ಸಿನಿಮಾ ಸಾವರಿಯಾ 2007ರಲ್ಲಿ ಬಿಡುಗಡೆಯಾಯಿತು. ಸುಮಾರು 40 ಕೋಟಿ ವೆಚ್ಚದ ಈ ಸಿನಿಮಾ ದುರಂತ ಎಂದು ಪರಿಗಣಿಸಲಾಗಿದೆ. 

69

ರಜ್ನೀಶ್ ಘಾಯ್ ನಿರ್ದೇಶಿಸಿದ  2022 ರ ಢಾಕಡ್ ಚಿತ್ರದಲ್ಲಿ  ಕಂಗನಾ ರಣಾವತ್, ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮತ್ತು ಶಾಶ್ವತ ಚಟರ್ಜಿ ನಟಿಸಿದ್ದಾರೆ. ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ಬಾಕ್ಸ್ ಆಫೀಸ್ ದುರಂತದಲ್ಲಿ  ಒಂದಾಯಿತು, ವಿಶ್ವಾದ್ಯಂತ ಕೇವಲ  3.77 ಕೋಟಿ ಗಳಿಸಿತು. ಇದರ ಬಜೆಟ್‌ 85 ಕೋಟಿ.

79

ಅನುಭವ್ ಸಿನ್ಹಾ ನಿರ್ದೇಶಿಸಿದ ರಾ.ಒನ್  ಸಿನಿಮಾದಲ್ಲಿ ಶಾರುಖ್ ಖಾನ್, ಅರ್ಜುನ್ ರಾಂಪಾಲ್, ಕರೀನಾ ಕಪೂರ್, ಶಹಾನಾ ಗೋಸ್ವಾಮಿ ನಟಿಸಿದ್ದಾರೆ.2011 ರಲ್ಲಿ ಬಿಡುಗಡೆಯಾದ ಈ ಸಿನಿಮಾದ ಬಜೆಟ್‌ 13 ಕೋಟಿ.

89

ಶಾರುಖ್‌ ಖಾನ್‌, ಅನುಷ್ಕಾ ಶರ್ಮ ಮತ್ತು ಕತ್ರಿನಾ ಕೈಫ್‌ ಸಟಿಸಿದ ಜೀರೋ ಸಿನಿಮಾ ಬಾಲಿವುಡ್‌ನ ದೊಡ್ಡ ಫ್ಲಾಫ್‌ಗಳಲ್ಲಿ ಒಂದಾಗಿದೆ. 2018ರಲ್ಲಿ ಬಿಡುಗಡೆಯಾದ ಈ ಸಿನಿಅಮದ ಖರ್ಚು 150 ಕೋಟಿಗಳಷ್ಟು.

99

ಚಂದ್ರ ಪ್ರಕಾಶ್ ದ್ವಿವೇದಿ ನಿರ್ದೇಶನದ  ಅಕ್ಷಯ್ ಕುಮಾರ್, ಸಂಜಯ್ ದತ್, ಮಾನುಷಿ ಛಿಲ್ಲರ್, ಅಶುತೋಷ್ ರಾಣಾ ಅವದ ಆಬಿನಯದ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಯಾವಾಗ ಚಿತ್ರಮಂದಿರಕ್ಕೆ ಬಂತು ಮತ್ತು ಹೋಯಿತು ಎಂದು ಬಹಳಷ್ಷು ಜನರಿಗೆ ತಿಳಿದೇ ಇಲ್ಲ. 2022ರಲ್ಲಿ ತೆರೆಗೆ ಬಂದ ಈ ಚಿತ್ರದ ಬಜೆಟ್‌ 300 ಕೋಟಿ. 

Read more Photos on
click me!

Recommended Stories