ಕಾಂತಾರ ಚಾಪ್ಟರ್‌ 1: ಮೊದಲ ವಾರದಲ್ಲೇ 509 ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆದ ರಿಷಬ್ ಶೆಟ್ಟಿ ಸಿನಿಮಾ!

Published : Oct 11, 2025, 06:15 PM IST

ಉತ್ತರ ಭಾರತದಲ್ಲಿ ಹಿಂದಿ ಡಬ್ಬಿಂಗ್‌ ವರ್ಶನ್‌ನಿಂದಲೇ ಕಾಂತಾರ ಚಾಪ್ಟರ್‌ 1 ಅಂದಾಜು 120 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಭಾರತದಲ್ಲಿ ಸಿನಿಮಾ ಅಂದಾಜು 350 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿರುವ ಸಾಧ್ಯತೆ ಇದೆ.

PREV
16
ವಿಶ್ವಾದ್ಯಂತ 509 ಕೋಟಿ ಗಳಿಕೆ

‘ಕಾಂತಾರ ಚಾಪ್ಟರ್‌ 1’ ಮೊದಲ ವಾರವೇ ವಿಶ್ವಾದ್ಯಂತ 509 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಂಸ್‌ ಈ ಸಂಗತಿಯನ್ನು ಅಧಿಕೃತವಾಗಿ ಘೋಷಿಸಿದೆ.

26
ಕೆಜಿಎಫ್‌ ಚಾಪ್ಟರ್‌ 2 ದಾಖಲೆಯನ್ನೂ ಮುರಿಯುವ ಸಾಧ್ಯತೆ?

ರಿಷಬ್‌ ಶೆಟ್ಟಿಯವರ ‘ಕಾಂತಾರ ಚಾಪ್ಟರ್‌ 1’ ಚಿತ್ರ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ದಾಖಲೆಯನ್ನೂ ಶೀಘ್ರ ಮುರಿಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಚಿತ್ರ ಕರ್ನಾಟಕದಲ್ಲಿ ಅಂದಾಜು 130 ಕೋಟಿ ರು.ಗಳ ದಾಖಲೆಯ ಗಳಿಕೆ ಕಂಡಿದೆ.

36
ಭಾರತದಲ್ಲಿ 350 ಕೋಟಿ ಗಳಿಕೆ

ಉತ್ತರ ಭಾರತದಲ್ಲಿ ಹಿಂದಿ ಡಬ್ಬಿಂಗ್‌ ವರ್ಶನ್‌ನಿಂದಲೇ ಅಂದಾಜು 120 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಭಾರತದಲ್ಲಿ ಸಿನಿಮಾ ಅಂದಾಜು 350 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿರುವ ಸಾಧ್ಯತೆ ಇದೆ.

46
ಅಜನೀಶ್ ಲೋಕನಾಥ್‌ರ ಶಕ್ತಿಯುತ ಸಂಗೀತ

2022ರ ಬ್ಲಾಕ್‌ಬಸ್ಟರ್ ಚಿತ್ರ 'ಕಾಂತಾರ'ದ ಪ್ರೀಕ್ವೆಲ್ ಆಗಿರುವ ಈ ಚಿತ್ರಕ್ಕೆ ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಅವರ ಶಕ್ತಿಯುತ ಸಂಗೀತವಿದೆ. ಕಾಂತಾರ ಚಾಪ್ಟರ್ 1 ಕೇವಲ ದಾಖಲೆಗಳನ್ನು ಮುರಿಯುವುದಷ್ಟೇ ಅಲ್ಲದೆ, ಸಿನಿಮೀಯ ಭಕ್ತಿಯನ್ನು ಪುನಃ ಬರೆಯುತ್ತಿದೆ.

56
ಕಾಂತಾರ ಒಟಿಟಿ ಹಕ್ಕುಗಳು ಯಾರಿಗೆ?

ಕಾಂತಾರ ಒಟಿಟಿ ಹಕ್ಕುಗಳನ್ನು ಅಮೇಜಾನ್ ಪ್ರೈಮ್‌ ಪಡೆದುಕೊಂಡಿದೆ. ಅಂದಾಜು ಸುಮಾರು 125 ಕೋಟಿ ರೂ. ಗಳಿಗೆ ಡಿಜಿಟಲ್ ಪ್ರಸಾರದ ಹಕ್ಕನ್ನು ಅಮೆಜಾನ್ ಪಡೆದುಕೊಂಡಿದೆ ಎಂದು ವರದಿಯಾಗಿದೆ.

66
ಬುಕ್ ಮೈ ಶೋನಲ್ಲಿ ಹೆಚ್ಚು ಟಿಕೆಟ್‌ಗಳು ಸೇಲ್

ಬುಕ್ ಮೈ ಶೋನಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾದ ಟಿಕೆಟ್‌ಗಳು ಹೆಚ್ಚು ಸೇಲ್ ಆಗಿದ್ದು, ಹೆಚ್ಚು ಹೌಸ್‌ಫುಲ್ ಶೋಗಳು ಸೇರಿದಂತೆ ಇನ್ನೂ ಅನೇಕ ದಾಖಲೆಗಳನ್ನು ರಿಷಬ್ ಶೆಟ್ಟಿ ಸಿನಿಮಾ ತನ್ನದಾಗಿಸಿಕೊಂಡಿದೆ.

Read more Photos on
click me!

Recommended Stories