ರಾಮ್ ಗೋಪಾಲ್ ಹುಡುಗಿಯರ ಸೌಂದರ್ಯವನ್ನ ಆರಾಧಿಸ್ತಾರೆ. ಬೆಳಗ್ಗೆನೇ ಮದ್ಯಪಾನ ಮಾಡ್ತಾರೆ. ರಿಲೇಷನ್ಸ್, ಎಮೋಷನ್ಸ್ ಅವ್ರಿಗೆ ಇಲ್ಲ. ದೇವ್ರನ್ನ ನಂಬಲ್ಲ. ಆದ್ರೆ ಐಶ್ವರ್ಯಾ ರೈ ಬಗ್ಗೆ ವರ್ಮಾ ಈ ಹಿಂದೆ ಕೆಲವು ಆಸಕ್ತಿಕರ ವಿಚಾರಗಳನ್ನು ಹೇಳಿದ್ದಾರೆ. ಅವರು ಗರ್ಭಿಣಿ ಅನ್ನೋ ಸುದ್ದಿ ಕೇಳಿದ ತಕ್ಷಣ ಒಂದು ಮೆಸೇಜ್ ಅವ್ರಿಗೆ ಹಾಕಿದ್ರಂತೆ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಅಲಂಕರಿಸಿದ ಐಶ್ವರ್ಯಾ ರೈ ಚಿತ್ರರಂಗಕ್ಕೆ ಕಾಲಿಟ್ಟು ಅದ್ಭುತಗಳನ್ನೇ ಮಾಡಿದ್ರು. ಸೌಂದರ್ಯಕ್ಕೆ ಸಾಕ್ಷಾತ್ ಸರಸ್ವತಿ ಅಂತ ಐಶ್ವರ್ಯಾ ರೈ ಬಗ್ಗೆ ಹೇಳ್ತಿದ್ರು. ಸೌಂದರ್ಯದ ಜೊತೆಗೆ ಅವರು ಒಬ್ಬ ದೊಡ್ಡ ನಟಿ, ನೃತ್ಯಗಾರ್ತಿ. ಈ ಕ್ವಾಲಿಟೀಸ್ ಅವರನ್ನ ಸ್ಟಾರ್ ಮಾಡಿದ್ದು.