ಡ್ರಗ್ಸ್‌ ಹೆಚ್ಚಾಗಿ ಎರಡು ದಿನಗಳ ನಂತರ ಎಚ್ಚರವಾದಾಗ ಶಾಕ್‌ ಆದ ಸಂಜಯ್‌ ದತ್‌

First Published Oct 31, 2022, 4:22 PM IST

ಸಂಜಯ್ ದತ್ (Sanjay Dutt) ಅವರ ವೈಯಕ್ತಿಕ ಜೀವನದ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಾದಕ ವ್ಯಸನಿಯಾಗಿದ್ದ ಈತ ಹಲವು ಗಂಭೀರ ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಬಂದಿರುವುದು ಎಲ್ಲರಿಗೂ ಗೊತ್ತೇ ಇದೆ. ಸಂಜಯ್ ಅವರ ಜೀವನಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಸಹ ಹೇಳಿದ್ದಾರೆ. ಈ ನಡುವೆ  ಅವರಿಗೆ ಸಂಬಂಧಿಸಿದ ಒಂದು ಸಂಗತಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ವರ್ಷಗಳ ಹಿಂದೆ ಸಲ್ಮಾನ್ ಖಾನ್ ಅವರ ದಸ್ ಕಾ ದಮ್ ಶೋನಲ್ಲಿ ಅವರು ಈ ಘಟನೆಯನ್ನು ವಿವರಿಸಿದ್ದರು, ಅದರ ವೀಡಿಯೊ ಮತ್ತೊಮ್ಮೆ ವೈರಲ್ ಆಗಿದೆ.  ಆ ಸಮಯದಲ್ಲಿ ಅವರು ಬಹಳಷ್ಟು ಕುಡಿಯುತ್ತಿದ್ದರು ಮತ್ತು ಒಂದು ದಿನ  ಮಿತಿಮೀರಿದ ಡ್ರಗ್ಸ್‌  ಕಾರಣದಿಂದಾಗಿ, ಅವರು ಎರಡು ದಿನಗಳ ನಂತರ ಎಚ್ಚರಗೊಂಡರು ಮತ್ತು ನಂತರ ಆಘಾತಕ್ಕೊಳಗಾದರು. ಸಂಜಯ್ ದತ್‌ಗೆ ಸಂಬಂಧಿಸಿದ ಈ ಉಪಾಖ್ಯಾನದ ಸಂಪೂರ್ಣ ಕಥೆ ಇಲ್ಲಿದೆ.

ಈ ವರ್ಷ ಸಂಜಯ್ ದತ್ ಅವರ ಅನೇಕ ಚಿತ್ರಗಳು ಬಿಡುಗಡೆಯಾಗಿವೆ, ಅವುಗಳಲ್ಲಿ ಕೆಲವು ಹಿಟ್ ಮತ್ತು ಕೆಲವು ಫ್ಲಾಪ್ ಆಗಿವೆ. ಸಂಜಯ್ ಅವರ ಕೆಜಿಎಫ್ 2 ಬ್ಲಾಕ್ಬಸ್ಟರ್ ಎಂದು ಸಾಬೀತಾದರೆ, ಶಂಶೇರಾ ಮತ್ತು ಸಾಮ್ರಾಟ್ ಪೃಥ್ವಿರಾಜ್ ಫ್ಲಾಪ್ ಎಂದು ಸಾಬೀತಾಯಿತು. ಪ್ರಸ್ತುತ, ಅವರು ತಮ್ಮ ಮುಂಬರುವ ಚಿತ್ರಗಳಾದ ದಿ ಗಾಡ್ ಮಹಾರಾಜ ಮತ್ತು ಘಡ್ಚಡಿ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಸಂಜಯ್ ದತ್ ಅವರು ತಮ್ಮ ಶಾಲಾ ದಿನಗಳಿಂದಲೇ ಮಾದಕ ವ್ಯಸನಿಯಾಗಿದ್ದರು. ಕಾಲೇಜಿಗೆ ತಲುಪಿದಾಗ ಡ್ರಗ್ಸ್ ಚಟಕ್ಕೆ ಬಿದ್ದು ಈ ಚಟ ಅವರ ಜೀವನದ ಹಲವು ಕ್ಷಣಗಳನ್ನು ಹಾಳು ಮಾಡಿತ್ತು.

ಮಾದಕ ದ್ರವ್ಯ ಸೇವನೆಯ ಅಭ್ಯಾಸದ ಬಗ್ಗೆ ಮಾತನಾಡುತ್ತಾ ಸಂಜಯ್ ದತ್ ಹೀಗೆ ಹೇಳಿದ್ದರು - ಒಂದು ಕಾಲದಲ್ಲಿ ನಾನು ಸ್ಟ್ರಾಂಗ್‌ ಅಮಲು ಪದಾರ್ಥಗಳನ್ನು ಸೇವಿಸುತ್ತಿದ್ದೆ. ಒಂದು ದಿನ ನಾನು ಮಿತಿಮೀರಿದ ಸೇವನೆಯ ನಂತರ ನನ್ನ ಕೋಣೆಯಲ್ಲಿ ಮಲಗಿದ್ದೆ. ಎಚ್ಚರವಾದಾಗ ನನಗೆ ಹಸಿವಾದಂತಾಯಿತು ಮತ್ತು ಮನೆಯ ಕೆಲಸದವನಿಗೆ ಊಟ ಕೇಳಿದೆ. ಆಗ ಅವನು ಅಳಲು ಪ್ರಾರಂಭಿಸಿದ ಮತ್ತು ಅವನ  ಪ್ರತಿಕ್ರಿಯೆ ನೋಡಿ ನನಗೆ ಏನೂ ಅರ್ಥವಾಗಲಿಲ್ಲ.

ನಾನು ಕೆಲಸದವನಿಗೆ ಊಟ ಕೊಡು, ನನಗೆ ಹಸಿವಾಗಿದೆ ಎಂದು ಕೇಳಿದಾಗ, ಎರಡು ದಿನಗಳ ನಂತರ ನೀವು ಆಹಾರವನ್ನು ಕೇಳುತ್ತಿದ್ದೀರಿ ಎಂದು ಅಳುತ್ತಾ ಹೇಳಿದ್ದನು. ನಾನು ನಿನ್ನೆ ರಾತ್ರಿಯೇ ಮಲಗಿದ್ದೆ ಅಲ್ಲವಾ ಎಂದಾಗ ನಾನು ಎರಡು ದಿನಗಳಿಂದ ಮಲಗಿದ್ದೇನೆ ಎಂದು ಹೇಳಿದನು.

ಅವನ ಮಾತು ಕೇಳಿ ನನಗೆ ನಂಬಲಾಗಲಿಲ್ಲ. ನಂತರ ನಾನು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ, ಬಿಡುತ್ತೇನೆ ಎಂದು ನಿರ್ಧರಿಸಿದೆ ಮತ್ತು ಡ್ರಗ್ಸ್ ಒಳ್ಳೆಯದಲ್ಲ, ಜೀವನದ ನಶೆಯೇ ಸರ್ವಸ್ವ ಎಂದು ಸಂಜಯ್ ದತ್ ಹೇಳಿದ್ದರು 

ಸಂಜಯ್ ದತ್ ಅವರು ತುಂಬಾ ನಾಚಿಕೆ ಸ್ವಭಾವದವರಾಗಿದ್ದರು ಮತ್ತು ಹುಡುಗಿಯರ ಮುಂದೆ ಕೂಲ್ ಆಗಿ ಕಾಣಲು ಡ್ರಗ್ಸ್ ಸೇವಿಸಲು ಪ್ರಾರಂಭಿಸಿದರು ಎಂದು ಮತ್ತೊಂದು ಸಂದರ್ಶನದಲ್ಲಿ ನಟ ಹೇಳಿದ್ದರು.

ನನ್ನ ಜೀವನದ 10 ವರ್ಷ ಹೀಗೆಯೇ ವ್ಯರ್ಥವಾಯಿತು.ನಾನು ಯಾವಾಗ ನನ್ನ ರೂಮಿನಲ್ಲಿದ್ದೇನೆ ಅಥವಾ ಬಾತ್ರೂಮ್‌ನಲ್ಲಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
 

ಸಂಜಯ್ ದತ್ ಅವರು ಡ್ರಗ್ಸ್ ಒಳ್ಳೆಯದಲ್ಲ ಎಂದು ಅರ್ಥಮಾಡಿಕೊಂಡಾಗ, ಅವರು ಚಿಕಿತ್ಸೆ ಪಡೆದರುಈ ಸಮಯದಲ್ಲಿಯೂ ಅವರು ಅನೇಕ ತೊಂದರೆಗಳನ್ನು ಅನುಭವಿಸಿದರು ಮತ್ತು ಈ ಚಟದಿಂದ ಸುಲಭವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಇವತ್ತಿಗೂ ಅದರ ಬಗ್ಗೆ ಯೋಚಿಸಿದರೆ ಸಿಟ್ಟು ಬರುತ್ತದೆ ಎಂದು ಸಂಜಯ್‌ ದತ್‌ ತಮ್ಮ ಹಿಂದಿನ ದಿನಗಳ ಬಗ್ಗೆ ಹೇಳಿದರು.

Sanjay dutt

ಸಂಜಯ್ ದತ್ ತನ್ನನ್ನು ತಪ್ಪು ದಾರಿಯಿಂದ ತನ್ನ ಗಮನವನ್ನು ಜೀವನದ ಮೇಲೆ ಕೇಂದ್ರೀಕರಿಸಿದರು ಮತ್ತು ಅವರು ತಮ್ಮ ಆರೋಗ್ಯವನ್ನು ಹೆಚ್ಚಿಸಲು ಜಿಮ್‌ನಿಂದ ಶ್ರಮಿಸಿದರು.
 

click me!