Varun Dhawan ಈ ಕೃತ್ಯದಿಂದ ಕೋಪಗೊಂಡು ಕಪಾಳಮೋಕ್ಷ ಮಾಡುತ್ತೇನೆ ಎಂದ salman khan

First Published | Apr 24, 2022, 5:28 PM IST

ಬಾಲಿವುಡ್‌ ನಟ ವರುಣ್ ಧವನ್  (Varun Dhawan) ಅವರಿಗೆ 35 ವರ್ಷ . ಏಪ್ರಿಲ್ 24, 1987 ರಂದು ಮುಂಬೈನಲ್ಲಿ ಜನಿಸಿದ ವರುಣ್ ಧವನ್ 10 ವರ್ಷಗಳ ಹಿಂದೆ 2012 ರಲ್ಲಿ ಬಿಡುಗಡೆಯಾದ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಲ್ಮಾನ್ ಖಾನ್ (Salaman Khan) ಅವರ ಸೂಪರ್‌ಹಿಟ್ ಚಿತ್ರ 'ಜುಡ್ವಾ' ದ ಸೀಕ್ವೆಲ್‌ನಲ್ಲಿ ಕೂಡ   ವರುಣ್ ಧವನ್ ಕೆಲಸ ಮಾಡಿದ್ದಾರೆ. ಅಂದಹಾಗೆ, ವರುಣ್ ಧವನ್ ಅವರ ಕೃತ್ಯದಿಂದ ಸಲ್ಮಾನ್ ಖಾನ್ ಎಷ್ಟು ಸಿಟ್ಟಾಗಿದ್ದಾರೆಂದರೆ, ಅವರಿಗೆ ಕಪಾಳಮೋಕ್ಷ ಮಾಡುವುದಾಗಿ ಸಾರ್ವಜನಿಕವಾಗಿ ಹೇಳಿದ್ದರು. ಸಲ್ಮಾನ್‌ ಅವರು ಕೋಪಗೊಳ್ಳಲು ಕಾರಣವೇನು ತಿಳಿಯಲು ಪೂರ್ತಿ ಓದಿ. 

'ನಾನು ಚಲನಚಿತ್ರದ ಟ್ರಯಲ್‌ಗೆ ಹೋಗಿದ್ದಾಗ ಅಲ್ಲಿ  ಸಲ್ಮಾನ್ ಖಾನ್ ಅವರ ಮೊದಲ ಭೇಟಿಯಾಯಿತು. ಅವರು ಶಾರ್ಟ್ಸ್ ಮತ್ತು ಬನಿಯನ್‌ ಧರಿಸಿ ಸ್ಟುಡಿಯೊದ ಹೊರಗೆ ನಿಂತಿದ್ದರು. ಆಗ ನಾನು ಅವರನ್ನು ಸಲ್ಮಾನ್ ಅಂಕಲ್ ಎಂದು ಕರೆದೆ. ನನ್ನ ಬಾಯಿಂದ 'ಅಂಕಲ್' ಎಂದು ಕೇಳಿದ ಸಲ್ಮಾನ್ ಕೋಪಗೊಂಡರು ಎಂದು ಸಂದರ್ಶನವೊಂದರಲ್ಲಿ ಸ್ವತಃ ವರುಣ್ ಧವನ್ ಹೇಳಿದ್ದರು.  

ಸಲ್ಮಾನ್ ಭಾಯ್ ಎಂದು ಕರೆ ಇಲ್ಲದಿದ್ದರೆ ನಾನು ಕೆನ್ನೆಗೆ ಬಾರಿಸುತ್ತೇನೆ ಎಂದು ಅವರು ಕೋಪದಿಂದ ಹೇಳಿದರು. ಇಂದಿನ ನಂತರ  ನನ್ನನ್ನು ಅಂಕಲ್ ಎಂದು ಕರೆದರೆ, ನೀನು ಯಾರ ಮಗ ಎಂದು ನಾನು ಯೋಚಿಸುವುದಿಲ್ಲ ಎಂದು ಸಲ್ಮಾನ್ ಖಾನ್‌ ಹೇಳಿದ್ದರು 

Tap to resize

ಅಂದಿನಿಂದ, ನಾನು ಸಲ್ಮಾನ್ ಅವರನ್ನು ಬಾಯ್‌  ಎಂದು ಕರೆಯಲು ಪ್ರಾರಂಭಿಸಿದೆ ಎಂದು ವರಣ್‌ ಬಹಿರಂಗ ಪಡಿಸಿದ್ದಾರೆ. ಅಂದಹಾಗೆ, ವರುಣ್ ಧವನ್ ವಯಸ್ಸಿನಲ್ಲಿ ಸಲ್ಮಾನ್ ಖಾನ್ ಅವರಿಗಿಂತ 22 ವರ್ಷ ಚಿಕ್ಕವರು. ವರುಣ್ ತಂದೆ ಡೇವಿಡ್ ಧವನ್ ಮತ್ತು ಸಲ್ಮಾನ್ ಖಾನ್ ಉತ್ತಮ ಸ್ನೇಹಿತರು. 

ಸಲ್ಮಾನ್ ಖಾನ್ ಅವರು ಡೇವಿಡ್ ಧವನ್ ಅವರೊಂದಿಗೆ ಹಲವಾರು ಉತ್ತಮ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಡೇವಿಡ್ ಧವನ್ ನಿರ್ದೇಶಿಸಿದ ಸಲ್ಮಾನ್ ಅವರ ಸೂಪರ್‌ಹಿಟ್ ಚಿತ್ರಗಳಲ್ಲಿ ಬಿವಿ ನಂಬರ್ ಒನ್ ಸೇರಿದೆ

ವರುಣ್ ಧವನ್ ತನ್ನ ಬಹುಕಾಲದ ಗೆಳತಿ ನತಾಶಾ ದಲಾಲ್ ಅವರನ್ನು ಮದುವೆಯಾಗಿದ್ದಾರೆ.ಈ ಜೋಡಿ ಜನವರಿ 24, 2021 ರಂದು ವಿವಾಹವಾದರು.

ವರುಣ್ ಧವನ್ ತಮ್ಮ ವೃತ್ತಿಜೀವನವನ್ನು ಶಾರುಖ್ ಖಾನ್, ಕಾಜೋಲ್ ಅವರ ಮೈ ನೇಮ್ ಈಸ್ ಖಾನ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಪ್ರಾರಂಭಿಸಿದರು. ನಂತರ, ಅವರು 2012 ರ ಚಲನಚಿತ್ರ 'ಸ್ಟೂಡೆಂಟ್ ಆಫ್ ದಿ ಇಯರ್' ಮೂಲಕ ನಟರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 

ವರುಣ್ ಧವನ್ ಇದುವರೆಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದರಲ್ಲಿ ಮೇ ಮೇನ್ ತೇರಾ ಹೀರೋ, ಹಂಪ್ಟಿ ಶರ್ಮಾ ಕಿ ದುಲ್ಹನಿಯಾ, ಡಿಶೂಮ್, ಬದ್ರಿನಾಥ್ ಕಿ ದುಲ್ಹನಿಯಾ, ಬದ್ಲಾಪುರ್, ಎಬಿಸಿಡಿ 2, ದಿಲ್ವಾಲೆ, ಜುಡ್ವಾ 2, ಅಕ್ಟೋಬರ್, ಸುಯಿ ಧಾಗಾ, ಕಲಾಂಕ್, ಸ್ಟ್ರೀಟ್ ಡ್ಯಾನ್ಸರ್ 3D, ಕೂಲಿ ನಂ ಸೇರಿವೆ. ವರುಣ್ ಧವನ್ ಶೀಘ್ರದಲ್ಲೇ ಜಗ್ ಜಗ್ ಜಿಯೋ, ಭೇಡಿಯಾ ಮತ್ತು ಬವಾಲ್ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

Latest Videos

click me!