IPL 2022: MS Dhoni ಮತ್ತು CSK ಆಟಗಾರರ ಡ್ಯಾನ್ಸ್‌ಗೆ Samantha ಫುಲ್‌ ಫಿದಾ!

Published : Apr 24, 2022, 05:14 PM ISTUpdated : Apr 24, 2022, 05:16 PM IST

CSK ತಂಡದ ಆಟಗಾರರಾದ ಮಹೇಂದ್ರ ಸಿಂಗ್ ಧೋನಿ, ಡ್ವೇನ್ ಬ್ರಾವೋ ಮತ್ತು ಇತರರು ಸಮಂತಾ ರುತ್ ಪ್ರಭು (Samantha Ruth Prabhu) ಅವರ ಕಾತುವಾಕುಲ ರೆಂದು ಕಾದಲ್ ಸಾಂಗ್‌ಗೆ ತಮ್ಮ ಡ್ಯಾನ್ಸ್‌ ಮೂವ್ಸ್‌ ಪ್ರದರ್ಶಿಸುತ್ತಿದ್ದಾರೆ. ಚೆನೈ  ತಂಡದ ಆಟಗಾರರ ಈ ಡ್ಯಾನ್ಸ್‌ ವೀಡಿಯೊ ಸಖತ್‌ ವೈರಲ್‌ ಆಗಿದೆ. ಸ್ವತ: ನಟಿ ಸಮಂತಾ ಕೂಡ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.

PREV
16
IPL 2022: MS Dhoni ಮತ್ತು CSK ಆಟಗಾರರ ಡ್ಯಾನ್ಸ್‌ಗೆ  Samantha ಫುಲ್‌ ಫಿದಾ!

ಸಮಂತಾ ರುತ್ ಪ್ರಭು ಅವರು ತಮ್ಮ ಮುಂದಿನ ಚಿತ್ರ ಕಥುವಾಕುಲ ರೆಂದು ಕಾದಲ್‌ನ ವೈರಲ್ ಹಾಡಿನ 'ಟೂ ಟೂ ಟೂ' ಹಾಡಿಗೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಡ್ಯಾನ್ಸ್ ಮಾಡಿದ್ದಾರೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಕಾಣಿಸಿಕೊಂಡಿದ್ದಾರೆ.

26

ವೀಡಿಯೋ ನೋಡಿದ ನಟಿ ಸಮಂತಾ ಫುಲ್‌ ಖುಷಿಯಾಗಿದ್ದಾರೆ ಮತ್ತು ಆ ವೀಡಿಯೋವನ್ನು ಹಂಚಿಕೊಂಡ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ವಿಭಾಗದಲ್ಲಿ 'ದಿ ಬೆಸ್ಟ್. ಎಂದು ಬರೆದಿದ್ದಾರೆ. 

36

ಈ ನಡುವೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ವಿಜಯ್ ಸೇತುಪತಿ, ನಯನತಾರಾ ಮತ್ತು ಸಮಂತಾ ನಟಿಸಿದ್ದಾರೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ಚಿತ್ರವು ಭಾವನೆಗಳ ರೋಲರ್ ಕೋಸ್ಟರ್ ರೈಡ್ ಆಗಿದೆಯಂತೆ.
 


 

46

ಏಪ್ರಿಲ್ 28 ರಂದು ಕಾತುವಾಕುಲ ಎರಡು ಕಾದಲ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ವಿಜಯ್ ಪಾತ್ರವು ಇಬ್ಬರು ಹೆಣ್ಣಿನ ಮೇಲೆ ಪ್ರೀತಿಯಲ್ಲಿ ಬೀಳುವುದು ಮತ್ತು  ಅವರೆಲ್ಲರೂ ಹೇಗೆ ಒಟ್ಟಿಗೆ ಸೇರುತ್ತಾರೆ ಎಂಬುದನ್ನು ಟೀಸರ್  ತೋರಿಸುತ್ತದೆ. 

56

ಸುಮಾರು ಎರಡು ನಿಮಿಷಗಳ ವೀಡಿಯೊವು ಖತೀಜಾ (ಸಮಂತಾ), ಕಣ್ಮಣಿ (ನಯನತಾರಾ), ಮತ್ತು ರಾಂಬೋ (ರಾಂಬೋ)  (ವಿಜಯ್) ಮೇಲೆ ಕೇಂದ್ರೀಕರಿಸುವ ಚಿತ್ರದ ಪರಿಕಲ್ಪನೆಯ ನೋಟವನ್ನು ನೀಡುತ್ತದೆ. ರಾಂಬೊ ಖತೀಜಾ ಮತ್ತು ಕಣ್ಮಣಿ ಇಬ್ಬರನ್ನು ಪ್ರೀತಿಸುತ್ತಾನೆ ಮತ್ತು ಇಬ್ಬರಿಗೂ ಒಂದೇ ಸಮಯದಲ್ಲಿ ಮದುವೆಯನ್ನೂ ಆಫರ್ ಮಾಡುತ್ತಾನೆ. 

66

ಟೀಸರ್ ನಲ್ಲಿ ಕ್ರಿಕೆಟಿಗ ಶ್ರೀಶಾಂತ್ ಕಾಣಿಸಿಕೊಂಡಿದ್ದಾರೆ. ಜಾಹೀರಾತು ಫಲಕದಲ್ಲಿ ಅವರನ್ನು ಮೊಹಮ್ಮದ್ ಮೊಬಿ ಎಂದು ಪರಿಚಯಿಸಲಾಗಿದೆ ಮತ್ತು ಅವರು ಚಿತ್ರದಲ್ಲಿ ಸಮಂತಾ ಅವರ ಪ್ರೇಮಿಯಾಗಿ ನಟಿಸುತ್ತಾರೆ ಎಂದು ಈಗ ಬಹಿರಂಗವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories