The Kashmir Files ಮೆಚ್ಚಿದ PM Modi ರುದ್ರಾಕ್ಷಿ ಮಾಲೆ ಉಡುಗೊರೆ ನೀಡಿದ Anupam Kher

Published : Apr 24, 2022, 05:19 PM IST

ಬಾಲಿವುಡ್ ನಟ ಅನುಪಮ್ ಖೇರ್ (Anupam Kher) ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ (PM Modi) ಅವರನ್ನು ಭೇಟಿಯಾದರು. ನಟ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಈ  ಸುದ್ದಿ ಹಂಚಿಕೊಂಡಿದ್ದಾರೆ. ಜೊತೆಗೆ, ಪ್ರಧಾನಿಯವರಿಗೆ ಅವರ ತಾಯಿ ದುಲಾರಿ ಖೇರ್ ರಚಿಸಿದ ರುದ್ರಾಕ್ಷಿ ಮಾಲೆಯನ್ನು ಉಡುಗೊರೆಯಾಗಿ ನೀಡಿದರು.

PREV
16
The Kashmir Files ಮೆಚ್ಚಿದ PM Modi ರುದ್ರಾಕ್ಷಿ ಮಾಲೆ ಉಡುಗೊರೆ  ನೀಡಿದ Anupam Kher

ಅನುಮಪ್‌ ಖೇರ್ ಅವರು  ಮೋದಿ ಅವರ ಬೇಟಿಯ ಸಮಯದ ಎರಡು ಫೋಟೋಗಳನ್ನು ಅಪ್‌ಲೋಡ್ ಮಾಡಿದ್ದಾರೆ, ಒಂದರಲ್ಲಿ ಅವರಿಬ್ಬರು ಕ್ಯಾಮೆರಾಗೆ ಪೋಸ್ ನೀಡುತ್ತಿದ್ದಾರೆ 

26
Anupam Kher

ಇನ್ನೊಂದು ಫೋಟೋದಲ್ಲಿ ನಟ  ಅನುಪಮ್‌ ಖೇರ್‌ ಅವರು ಪಿ ಎಮ್‌ ಮೋದಿ ಅವರಿಗೆ ರುದ್ರಾಕ್ಷಿ ಮಾಲೆಯನ್ನು ನೀಡುತ್ತಿದ್ದಾರೆ.  ಖೇರ್‌ ಅವರು ತಾಯಿ ದುಲಾರಿ ಖೇರ್  ತಯಾರಿಸಿದ 'ರುದ್ರಾಕ್ಷ ಮಾಲೆ'ಯನ್ನು ಉಡುಗೊರೆಯಾಗಿ ನೀಡಿದರು 

36

ಇದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಅನುಪಮ್‌ ಖೇರ್‌  ಹಿಂದಿಯಲ್ಲಿ ಬರೆದಿದ್ದಾರೆ. 'ಗೌರವಾನ್ವಿತ ಪ್ರಧಾನ ಮಂತ್ರಿ @narendramodi Mr. ಇಂದು ನಿಮ್ಮನ್ನು ಭೇಟಿಯಾಗಲು ತುಂಬಾ ಸಂತೋಷವಾಯಿತು. ದೇಶವಾಸಿಗಳಿಗಾಗಿ ನೀವು ಹಗಲಿರುಳು ಮಾಡುತ್ತಿರುವ ಶ್ರಮ ಸ್ಪೂರ್ತಿದಾಯಕ. ನಿಮ್ಮನ್ನು ರಕ್ಷಿಸಲು ನನ್ನ ತಾಯಿ ಕಳುಹಿಸಿದ ರುದ್ರಾಕ್ಷಿ ಮಾಲೆಯನ್ನು ನೀವು ಸ್ವೀಕರಿಸಿದ ಗೌರವವನ್ನು ನಾವು ಯಾವಾಗಲೂ ಸ್ಮರಿಸುತ್ತೇವೆ. ಜೈ ಹೋ. ಜೈ ಹಿಂದ್! 

46

ಪ್ರಧಾನಿ ಮೋದಿ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಖೇರ್‌ಗೆ ಪ್ರತಿಕ್ರಿಯಿಸಿದ್ದಾರೆ, 'ತುಂಬಾ ಧನ್ಯವಾದಗಳು @AnupamPKher ಸರ್. ಗೌರವಾನ್ವಿತ ಮಾತಾಜಿ ಮತ್ತು ದೇಶವಾಸಿಗಳ ಆಶೀರ್ವಾದ ಮಾತ್ರ, ತಾಯಿ ಭಾರತಿಯ ಸೇವೆಗಾಗಿ ನನ್ನನ್ನು ನಿರಂತರವಾಗಿ ಪ್ರೇರೇಪಿಸುತ್ತಿದೆ'.
 

56

ಈ ಮೊದಲು ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕಾಗಿ ನಟ ಮತ್ತು ಅವರ ಸಿಬ್ಬಂದಿಯನ್ನು ಪ್ರಧಾನಿ ಹೊಗಳಿದರು. 1990 ರ ದಶಕದಲ್ಲಿ ಕಾಶ್ಮೀರದಲ್ಲಿನ ಅಶಾಂತಿಯ ನಡುವೆ ಕಾಶ್ಮೀರಿ ಪಂಡಿತರ ನಿರ್ಗಮನವನ್ನು ಕಥೆಯು ಈ ಸಿನಿಮಾ ಹೊಂದಿದೆ.

66

ದಿ ಕಾಶ್ಮೀರ್ ಫೈಲ್ಸ್ ಯಶಸ್ಸಿನ ನಂತರ, ಅನುಪಮ್ ಖೇರ್ ಎಬಿಸಿ ಕಾಮಿಡಿ ಪೈಲಟ್ ದಿ ಸನ್ ಇನ್ ಲಾ ನಲ್ಲಿ ಮಾವ ಪಾತ್ರವನ್ನು ಚಿತ್ರಿಸಲು ತಯಾರಿ ನಡೆಸುತ್ತಿದ್ದಾರೆ.

click me!

Recommended Stories