ಕಮಲ್ ಹಾಸನ್ ಸಿನಿಮಾದಲ್ಲಿ ಬ್ರಿಟನ್ ರಾಣಿ ಎಲಿಜಬೆತ್ II; 1.5 ಕೋಟಿ ಖರ್ಚು ಮಾಡಿದ್ದ ನಟ

First Published Sep 9, 2022, 6:56 PM IST

ಬ್ರಿಟನ್ ರಾಣಿ ಎಲಿಜಬೆತ್ II ( Queen Elizabeth II) ಗುರುವಾರ  ರಾತ್ರಿ ಕೊನೆಯುಸಿರೆಳೆದಿದ್ದಾರೆ. ಬಾಲಿವುಡ್‌ನ ಸುಶ್ಮಿತಾ ಸೇನ್‌ನಿಂದ ಹಿಡಿದು ರಿತೇಶ್ ದೇಶ್‌ಮುಖ್‌ವರೆಗೆ ಅನೇಕ ಸೆಲೆಬ್ರಿಟಿಗಳು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ರಾಣಿ ಎಲಿಜಬೆತ್ ಭಾರತೀಯ ಚಲನಚಿತ್ರೋದ್ಯಮದೊಂದಿಗೆ ಸಹ ಸಂಬಂಧ ಹೊಂದಿದ್ದರು. 1997 ರಲ್ಲಿ ರಾಣಿ ಎಲಿಜಬೆತ್ ಮೂರನೇ ಮತ್ತು ಕೊನೆಯ ಬಾರಿಗೆ ಭಾರತಕ್ಕೆ ಬಂದಾಗ, ಅವರು ದಕ್ಷಿಣ ಭಾರತದ ಸೂಪರ್‌ಸ್ಟಾರ್ ಕಮಲ್ ಹಾಸನ್ ಅವರ 'ಮರುದನಾಯಗಂ' ಚಿತ್ರದ ಸೆಟ್‌ಗಳನ್ನು ಭೇಟಿ ನೀಡಿದ್ದರು. 

1997 ರಲ್ಲಿ, ಕಮಲ್ ಹಾಸನ್ ಮರುದನಾಯಗಂ ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾಗ, ರಾಣಿ ಎಲಿಜಬೆತ್ II ಭಾರತಕ್ಕೆ ಭೇಟಿ ನೀಡಿದ್ದರು. 16 ಅಕ್ಟೋಬರ್ 1997 ರಂದು ಎಂಜಿಆರ್ ಫಿಲ್ಮ್ ಸಿಟಿಯಲ್ಲಿ ನಡೆದ ಚಲನಚಿತ್ರ ಬಿಡುಗಡೆ ಸಮಾರಂಭದಲ್ಲಿ ರಾಣಿ ಎಲಿಜಬೆತ್ ಅವರನ್ನು ಮುಖ್ಯ ಅತಿಥಿಯಾಗಿ ಕಮಲ್ ಆಹ್ವಾನಿಸಿದ್ದರು.

ರಾಣಿ ಎಲಿಜಬೆತ್ II ಸ್ವತಃ ಭಾರತೀಯ ಚಲನಚಿತ್ರ ಸೆಟ್‌ಗಳಿಗೆ ಭೇಟಿ ನೀಡಲು ಆಸಕ್ತಿ ತೋರಿಸಿದರು. ಅವರು ಸೆಟ್‌ಗೆ ತಲುಪಿದಾಗ, ಕಮಲ್ ಅವರನ್ನು ಭವ್ಯವಾದ ರೀತಿಯಲ್ಲಿ ಸ್ವಾಗತಿಸಿದರು. ಕಮಲ್ ಹಾಸನ್ ಅವರ ಮಾಜಿ ಪತ್ನಿ ಸಾರಿಕಾ ಅವರು ಮಹಾರಾಣಿ ಸೆಟ್‌ಗೆ ಬಂದ ತಕ್ಷಣ ಭಾರತೀಯ ಸಂಪ್ರದಾಯಗಳೊಂದಿಗೆ ಆರತಿ, ತಿಲಕ ಮತ್ತು ಹಾರವನ್ನು ಹಾಕಿ ಸ್ವಾಗತಿಸಿದರು.

ರಾಣಿ ಎಲಿಜಬೆತ್ II ಚಿತ್ರದ ಸೆಟ್‌ನಲ್ಲಿ 20 ನಿಮಿಷಗಳನ್ನು ಕಳೆದರು.ಈ ಸಮಯದಲ್ಲಿ, ಚಿತ್ರದ ಭಾಗವಾಗಿದ್ದ ರಜನಿಕಾಂತ್, ಟಿನು ಆನಂದ್ ಮತ್ತು ಓಂ ಪುರಿ ಅವರು ಸೆಟ್‌ನಲ್ಲಿ ರಾಣಿಯನ್ನು ಸ್ವಾಗತಿಸಲು ಹಾಜರಿದ್ದರು.

ಈ ಸಮಾರಂಭದಲ್ಲಿ ರಾಣಿ ಎಲಿಜಬೆತ್-II ಅವರಲ್ಲದೆ, ಆಗಿನ ಮುಖ್ಯಮಂತ್ರಿಗಳಾದ ಎಂ ಕರುಣಾನಿಧಿ ಮತ್ತು ಎಸ್ ಜೈಪಾಲ್ ರೆಡ್ಡಿ ಅವರು ವಿವಿಐಪಿ ಅತಿಥಿಯಲ್ಲಿದ್ದರು. ಇದಲ್ಲದೆ, ತಮಿಳು ಚಿತ್ರರಂಗದ ಹಿರಿಯ ನಟ ಚೆವಲಿಯರ್ ಶಿವಾಜಿ ಗಣೇಶನ್ ಮತ್ತು ಬಾಲಿವುಡ್‌ನ ಜನಪ್ರಿಯ ನಟ ಅಮರೀಶ್ ಪುರಿ ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಕಮಲ್ ಚಿತ್ರಕ್ಕಾಗಿ ಮಹಾರಾಣಿ ಜೊತೆಗಿನ ಸಣ್ಣ ದೃಶ್ಯವನ್ನೂ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಈ ದೃಶ್ಯಕ್ಕಾಗಿ ಕಮಲ್ ಹಾಸನ್ ಅಂದು 1.5 ಕೋಟಿ ಖರ್ಚು ಮಾಡಿದ್ದರು. ಆದರೆ, ಹಲವು ವಿವಾದಗಳ ಕಾರಣಗಳಿಂದ ಚಿತ್ರ ಬಿಡುಗಡೆಯಾಗಲೇ ಇಲ್ಲ.

ಅಂದು 80 ಕೋಟಿಗೆ ಈ ಸಿನಿಮಾ ಮಾಡಲು ಕಮಲ್ ಪ್ಲಾನ್ ಮಾಡಿದ್ದರು. ಇದಕ್ಕಾಗಿ ಅವರ ಜೊತೆ ಬೇರೆ ಕೆಲವು ನಿರ್ಮಾಪಕರನ್ನು ಕೂಡ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಆಗಾಗ ಒಂದಲ್ಲ ಒಂದು ಕಾರಣದಿಂದ ಚಿತ್ರ ಮುಂದೂಡುತ್ತಲೇ ಇತ್ತು. ಚಿತ್ರಕ್ಕೆ ಸಂಬಂಧಿಸಿದ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ. ಕಮಲ್ ಜೊತೆಗೆ ಸತ್ಯರಾಜ್, ನಾಸರ್, ಅಮರೀಶ್ ಪುರಿ, ನಾಸಿರುದ್ದೀನ್ ಷಾ ಮತ್ತು ಓಂ ಪುರಿ,ವಿಷ್ಣುವರ್ಧನ್, ಕಾಟಪ್ಪ ಮುಂತಾದ ನಟರು ಚಿತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು,  

ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಿ ಸರಿಯಾಗಿ 20 ವರ್ಷಗಳ ನಂತರ ಕಮಲ್ ಹಾಸನ್ ಅವರನ್ನು ಮತ್ತೆ ಭೇಟಿಯಾಗಿದ್ದಾರೆ. ಈ ವೇಳೆ ಕಮಲ್ ಬಕಿಂಗ್ ಹ್ಯಾಮ್ ಅರಮನೆಗೆ ಹೋಗಿದ್ದರು. ಯುಕೆ ಇಂಡಿಯಾ ಇಯರ್ ಆಫ್ ಕಲ್ಚರ್ 2017 ರ ಅಡಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಮಲ್ ಹೊರತಾಗಿ, ಕಪಿಲ್ ದೇವ್, ಗಾಯಕ ನಟ ಗುರುದಾಸ್ ಮಾನ್, ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿ ಅನೇಕ ಗಣ್ಯರು ರಾಣಿಯನ್ನು ಭೇಟಿಯಾದರು.

click me!