ರಾಣಿ ಎಲಿಜಬೆತ್ ಬಳಸಿದ್ದ ಟೀ ಬ್ಯಾಗ್‌, ಭಾರೀ ಮೊತ್ತಕ್ಕೆ ಹರಾಜಿಗಿಟ್ಟ EBay

ಆನ್‌ಲೈನ್‌  ವಸ್ತುಗಳ ಪೂರೈಕೆ ಮಾಡುವ ಸಂಸ್ಥೆ Ebay ಆನ್‌ಲೈನ್‌ನಲ್ಲಿ ರಾಣಿ ಎಲಿಜಬೆತ್ ಬಳಸಿದ್ದ ಟೀ ಬ್ಯಾಗ್‌ನ್ನು ಭಾರೀ ಮೊತ್ತಕ್ಕೆ ಹರಾಜಿಗೆ ಇಡುವ ಮೂಲಕ ಸುದ್ದಿಯಾಗುತ್ತಿದೆ.

e commerce platform e bay Selling Teabag Used By Queen Elizabeth In 1998 for $12,000 akb

ಇಂಗ್ಲೆಂಡ್ ರಾಣಿ ಎಲಿಜಬೆತ್ ನಿನ್ನೆ 96 ವರ್ಷಗಳ ತುಂಬು ಜೀವನವನ್ನು ನಡೆಸಿ ಇಹಲೋಕ ತ್ಯಜಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ರಾಣಿ ಹಾಗೂ ರಾಜಮನೆತನಕ್ಕೆ ಸೇರಿದ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ. ಈ ನಡುವೆ ಆನ್‌ಲೈನ್‌  ವಸ್ತುಗಳ ಪೂರೈಕೆ ಮಾಡುವ ಸಂಸ್ಥೆ Ebay ಆನ್‌ಲೈನ್‌ನಲ್ಲಿ ರಾಣಿ ಎಲಿಜಬೆತ್ ಬಳಸಿದ್ದ ಟೀ ಬ್ಯಾಗ್‌ನ್ನು ಭಾರೀ ಮೊತ್ತಕ್ಕೆ ಹರಾಜಿಗೆ ಇಡುವ ಮೂಲಕ ಸುದ್ದಿಯಾಗುತ್ತಿದೆ. ಆದರೆ ರಾಣಿ ಬಳಸಿದ್ದ ಟೀ ಬ್ಯಾಗ್ ಅನ್ನು ಯಾರು ಕೊಳ್ಳುವರೋ ಗೊತ್ತಿಲ್ಲ.

ಸಾಮಾನ್ಯವಾಗಿ ಬಳಸಿದ್ದ ಟೀ ಬ್ಯಾಗ್‌ನ್ನು ಅದರಲ್ಲಿರುವ ಟೀ ಜಳ್ಳನ್ನು ಹೂಗಿಡಗಳ ಬುಡಕ್ಕೆ ಗೊಬ್ಬರವಾಗಿ ಎಸೆಯಬಹುದು ಅಷ್ಟೇ. ಆದರೆ ಅದಕ್ಕಿಂತ ಹೆಚ್ಚು ಅದರಿಂದ ಯಾವ ಉಪಯೋಗವೂ ಇಲ್ಲ. ಆದರೆ ಈ ಟೀ ಬ್ಯಾಗ್‌ನ್ನು ಮಹಾರಾಣಿ ಬಳಕೆ ಮಾಡಿರುವುದರಿಂದ ಇದು ರಾಣಿ ನೆನಪಿನ ಸ್ಮಾರಕವಾಗಲಿದ್ದು, ರಾಣಿಯ ಮೇಲಿನ ಗೌರವ ಪ್ರೀತಿಯ ದ್ಯೋತಕವಾಗಿ ಇಂಗ್ಲೆಂಡ್ ಜನ ಈ ಟೀ ಬ್ಯಾಗ್‌ನ್ನು ಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಟೀ ಬ್ಯಾಗ್‌ನ್ನು ರಾಣಿ ಎಲಿಜಬೆತ್ ಸಾವಿನ ಸಂದರ್ಭದಲ್ಲಿ ಸೇಲ್ ಮಾಡಲು ಇಬೇ ಮುಂದಾಗಿದೆ.  

ರಾಣಿ ಎಲಿಜಬೆತ್ ಸೆಕೆಂಡ್, ಬ್ರಿಟನ್‌ನ್ನು ಅತ್ಯಂತ ಧೀರ್ಘಾಕಾಲ ಆಳಿದ ರಾಣಿಯಾಗಿದ್ದು, ತಮ್ಮ 96ನೇ ವಯಸ್ಸಿನಲ್ಲಿ ಅವರು ನಿಧನರಾದರು. ರಾಣಿ ನಿಧನದ ನಂತರ ರಾಣಿ ಬಗೆಗಿನ ಜನರ ಕುತೂಹಲ ಗರಿಗೆದರಿದ್ದು, ಇಂಟರ್‌ನೆಟ್‌ನಲ್ಲಿ ಅವರ ಬಗ್ಗೆ ಹುಡುಕಾಡುತ್ತಿದ್ದಾರೆ. ಇದರ ಲಾಭ ಪಡೆಯಲು ಮುಂದಾಗಿರುವ ವ್ಯಕ್ತಿಯೊಬ್ಬ ಇಬೇಯಲ್ಲಿ ರಾಣಿ ಬಳಸಿದ ಟೀ ಬ್ಯಾಗ್ ಎಂದು ಟೀ ಬ್ಯಾಗ್ ಮಾರಾಟಕ್ಕಿಟ್ಟಿದ್ದಾನೆ. 

ಆಕೆಯ 70 ವರ್ಷಗಳ ಆಳ್ವಿಕೆಯನ್ನು ಸ್ಮರಣಾರ್ಥವಾಗಿ, Ebay ಬಳಕೆದಾರರೊಬ್ಬರು ರಾಣಿ ಎಲಿಜಬೆತ್ ಬಳಸುತ್ತಿದ್ದರು ಎನ್ನಲಾದ ಟೀಬ್ಯಾಗ್ ಅನ್ನು ಮಾರಾಟಕ್ಕಿಟ್ಟಿದ್ದಾರೆ. ಈ ಟೀ ಬ್ಯಾಗ್‌  ಅನ್ನು 1998 ರಲ್ಲಿ ರಾಣಿ ವಾಸವಿದ್ದ ವಿಂಡ್ಸರ್ ಕ್ಯಾಸಲ್‌ನಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಬಳಕೆದಾರರು Ebay ಪುಟದಲ್ಲಿ ಹೇಳಿಕೊಂಡಿದ್ದಾರೆ. ಪ್ರಸ್ತುತ ಈ ಟೀ ಬ್ಯಾಗ್‌  ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ $12,000 ಗೆ ಅಂದರೆ ಭಾರತದ 956,471 ರೂಪಾಯಿ ದರ ನಿಗದಿಪಡಿಸಲಾಗಿದೆ. 

ಇನ್ನು ಈ,ಟಿ ಬ್ಯಾಗ್‌ನ ವಿವರಣೆಯಲ್ಲಿ ಇದು, 1998ರ ಕೊನೆಯಲ್ಲಿ ನೋಡಿರಬಹುದಾದ ಟೀ ಬ್ಯಾಗ್ ಇದಾಗಿದೆ. ಈ ಟೀ ಬ್ಯಾಗ್ ಅನ್ನು ರಾಣಿ ಎಲಿಜಬೆತ್ (Queen Elizabeth II) ಬಳಸುತ್ತಿದ್ದರು. ಆದರೆ  ವಿಂಡ್ಸರ್ ಕ್ಯಾಸಲ್‌ನಿಂದ ಇದನ್ನು ಕಳುವು ಮಾಡಲಾಗಿತ್ತು. ಇದನ್ನು ವಿಶೇಷ ನಿರ್ವಾಹಕರು ಅಲ್ಲಿಂದ ಕದ್ದು ಸಾಗಿಸಿದ್ದರು. ಆಕೆಯ 1990ರ ಅವಧಿಯಲ್ಲಿ ರಾಣಿಯೊಂದನ್ನು ಲಂಡನ್ ರೋಚ್ (London roach infestations) ಎಂದು ಕರೆಯಲ್ಪಡುವ ಜಿರಳೆ ಮುತ್ತಿಕೊಂಡಿದ್ದು, ಈ ವೇಳೆ ರಾಣಿಯನ್ನು ಜಿರಳೆಯಿಂದ ರಕ್ಷಿಸಲು ಅವರನ್ನು ಕರೆಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ. 

ಅಷ್ಟೇ ಅಲ್ಲದೇ ಈ ಟೀ ಬ್ಯಾಗ್‌ಗೆ ಪ್ರತಿಷ್ಠಿತ ಐಇಸಿಎ(Institute of Excellence in Certificates of Authenticity) ಯಿಂದ ಧೃಢೀಕರಣದ ಪ್ರಮಾಣಪತ್ರವೂ ಸಿಕ್ಕಿದೆ ಎಂದು ಆತ ಹೇಳಿಕೊಂಡಿದ್ದಾನೆ. ಅಲ್ಲದೇ ಈ ಟೀ ಕಪ್ ಬಗೆಗಿನ ಹೇಳಿಕೆಗಳು ಸತ್ಯವಾದುವುಗಳು ಎಂದು ಹೇಳಲಾಗಿದೆ. ಒಂದು ಇತಿಹಾಸದ ತುಣುಕನ್ನು ಗೆದ್ದೆ ಇದು ಬೆಲೆ ಕಟ್ಟಲಾಗದು ಎಂದು ಮಾರಾಟಗಾರ ಹೇಳಿಕೊಂಡಿದ್ದಾನೆ. ಈತ ಅಮೆರಿಕಾದ ಜಾರ್ಜಿಯಾದ ವ್ಯಾಪಾರಿಯಾಗಿದ್ದು, ಇದೊಂದು ಅತೀ ಅಪರೂಪದ ವಸ್ತು ಎಂದು ಹೇಳಿಕೊಂಡಿದ್ದಾನೆ. ಬರೀ ಟೀ ಬ್ಯಾಗ್ ಅಲ್ಲದೇ ಇ-ಬೇಯಲ್ಲಿ ರಾಣಿ ವಿಕ್ಟೋರಿಯಾಗೆ ಸಂಬಂಧಿಸಿದ ಇನ್ನು ಅನೇಕ ವಿಶೇಷವಾದ ವಸ್ತುಗಳು ಲಭ್ಯವಿದೆ. ರಾಣಿಯ ಮೇಣದ ಪ್ರತಿಮೆಯೂ ಇಲ್ಲಿದ್ದು, ಇದಕ್ಕೆ  $15,900 ಡಾಲರ್ ದರ ನಿಗದಿಪಡಿಸಲಾಗಿದೆ. ಈ ಮೇಣದ ಪ್ರತಿಮೆ (wax statues) ನಿಜವಾದ ಕೂದಲನ್ನು ಹೊಂದಿದೆ ಎಂದು ಮಾರಾಟಗಾರ ಹೇಳಿಕೊಂಡಿದ್ದಾನೆ. 
 

Latest Videos
Follow Us:
Download App:
  • android
  • ios