Director Forcibly Kissed: ಪಾರ್ಟಿಯಲ್ಲಿ ದೀಪಿಕಾಗೆ ಬಲವಂತ ಕಿಸ್‌ ಮಾಡಿದ ಡೈರೆಕ್ಟರ್‌!

First Published | Jan 17, 2022, 5:38 PM IST

ಪಾರ್ಟಿಯೊಂದರಲ್ಲಿ ದೀಪಿಕಾ ಪಡುಕೋಣೆಯ (Deepika Padukone) ನಿರ್ದೇಶಕರು ನಟಿಯನ್ನು ಬಲವಂತವಾಗಿ ಚುಂಬಿಸಿದರು. ಈ ಘಟನೆ ದೀಪಿಕಾ ಪಡುಕೋಣೆ ಅವರ 2014 ರ ಚಲನಚಿತ್ರ ಫೈಂಡಿಂಗ್ ಫ್ಯಾನ್ನಿಯ ಪಾರ್ಟಿಯ ಸಮಯದಲ್ಲಿ ನೆಡೆದಿತ್ತು ಮತ್ತು ಇದು ಸಾಕಷ್ಟು ಸುದ್ದಿಯಾಗಿತ್ತು. ನಿರ್ದೇಶಕರು ದೀಪಿಕಾರನ್ನು ಬಲವಂತವಾಗಿ ಕಿಸ್‌ ಮಾಡಿದಾಗ ಮುಂದೆ ಏನಾಯಿತು ಎಂಬುದು ಇಲ್ಲಿದೆ.

ಜನವರಿ 05 ರಂದು ತನ್ನ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ದೀಪಿಕಾ ಪಡುಕೋಣೆ, ಹೊಸ ವರ್ಷದ ಒಂದು ದಿನ ಮೊದಲು ಪ್ರಾರಂಭವಾದ ಸುದೀರ್ಘ ರಜೆಯ ನಂತರ ಪತಿ ರಣವೀರ್ ಸಿಂಗ್ ಅವರೊಂದಿಗೆ ಇತ್ತೀಚೆಗೆ  ಮುಂಬೈಗೆ ಮರಳಿದ್ದಾರೆ.

ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಡೀಪ್ ನೆಕ್ ಹೊಂದಿರುವ ಬಿಳಿ ಟಿ-ಶರ್ಟ್ ಮತ್ತು ಬ್ಯಾಗಿ ಡೆನಿಮ್ ಪ್ಯಾಂಟ್‌ ಧರಿಸಿದ್ದ  ದೀಪಿಕಾ ಪಡುಕೋಣೆ ತುಂಬಾ ಸೆಕ್ಸಿಯಾಗಿ ಕಾಣುತ್ತಿದ್ದರೆ. ಮತ್ತೊಂದೆಡೆ, ರಣವೀರ್ ಸಿಂಗ್ ಬೂದು ಬಣ್ಣದ ಟೀ ಶರ್ಟ್ ಮತ್ತು ನೀಲಿ ಡೆನಿಮ್‌ನಲ್ಲಿ ಕೂಲ್ ಆಗಿ ಕಾಣುತ್ತಿದ್ದರು.

Tap to resize

ತನ್ನ ಹುಟ್ಟುಹಬ್ಬದಂದು, ದೀಪಿಕಾ ತನ್ನ ನೆಕ್ಸ್ಟ್‌ ಸಿನಿಮಾದ ಗೆಹ್ರೈಯಾನ್‌ನ ಹೊಸ ಪೋಸ್ಟರ್‌ಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳಿಗೆ ಗಿಫ್ಟ್‌ ನೀಡಿದರು. ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಅವರು ಒಳಗೊಂಡಿದ್ದಾರೆ.

ಬಹಳ ಹಿಂದೆಯೇ 2014 ರಲ್ಲಿ, ದೀಪಿಕಾ ಅವರ ಚಲನಚಿತ್ರ ಫೈಂಡಿಂಗ್ ಫ್ಯಾನ್ನಿ ಸಿನಿಮಾದ ಪಾರ್ಟಿಯ ಸಮಯದಲ್ಲಿ. ಫೈಂಡಿಂಗ್ ಫ್ಯಾನಿ ಚಿತ್ರದ ನಿರ್ದೇಶಕ ಹೋಮಿ ಅದಾಜಾನಿಯಾ ಅವರು ದೀಪಿಕಾರನ್ನು ಬಲವಂತವಾಗಿ ಚುಂಬಿಸಿದಾಗ ದೀಪಿಕಾ ಅವರ ಅಭಿಮಾನಿಗಳು ಮತ್ತು ಮಾಧ್ಯಮಗಳು ಶಾಕ್‌ ನೀಡಿದ್ದರು. ಇದು ನಂತರ ಸಾಕಷ್ಟು ದೊಡ್ಡ ಸುದ್ದಿಯಾಯಿತು.
 

ನಂತರ, TOI ನಲ್ಲಿ ವರದಿ ಬಂದಿತು, ಅಲ್ಲಿ ನಿರ್ದೇಶಕ ಹೋಮಿ ಕುಡಿದು ಪಾರ್ಟಿಯಲ್ಲಿ ತನ್ನ ಮೇಲೆ ನಿಯಂತ್ರಣ  ಕಳೆದುಕೊಂಡಿದ್ದರು ಎಂದು ಉಲ್ಲೇಖಿಸಲಾಗಿದೆ. ಹೋಮಿ ದೀಪಿಕಾರನ್ನು ತನ್ನ ಕೈಗಳಿಂದ ಬಳಸಿ ಅವರ ಒಪ್ಪಿಗೆಯಿಲ್ಲದೆ ಕೆನ್ನೆಗೆ ಮುತ್ತಿಡಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಪಾರ್ಟಿಯಲ್ಲಿ ಹಾಜರಿದ್ದ ಮಾಧ್ಯಮಗಳು ಮತ್ತು ಪಾಪರಾಜಿಗಳು ಇದಕ್ಕೆ ಸಾಕ್ಷಿಯಾಗಿದ್ದು, ದೀಪಿಕಾ ಅವರನ್ನು ಮುಜುಗರಕ್ಕಿಡು ಮಾಡಿತ್ತು.

ಆದರೆ, ದೀಪಿಕಾ ನಗುಮೊಗದಿಂದಲೇ ಆ ಸಂಧರ್ಭವನ್ನು ತುಂಬಾ ಆಕರ್ಷಕವಾಗಿ ನಿರ್ವಹಿಸಿದರು. ನಂತರ ದೀಪಿಕಾ ಹೋಮಿ ಅವರ ನಡುವೆ ಯಾವುದೇ ಅಹಿತಕರ ಸಂಗತಿಗಳನ್ನು ಮಾಡದೆ ದೂರವನ್ನು ಕಾಯ್ದುಕೊಂಡರು. ನಂತರ, ರಣವೀರ್ ಸಿಂಗ್ ಕೂಡ ಬಂದರು ಆದರೆ ಘಟನೆಯನ್ನು ಅವರು ನೋಡಲಿಲ್ಲ. ಹೋಮಿ ಅದಾಜಾನಿಯಾ ಅವರು ದೀಪಿಕಾ ಅವರ ಜನಪ್ರಿಯ ಚಿತ್ರ ಕಾಕ್ಟೈಲ್ ಸಿನಿಮಾವನ್ನು ನಿರ್ದೇಶಿಸಿದ್ದಾರೆ

Deepika Padukone

ಕಬೀರ್ ಖಾನ್ ಅವರ 83 ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ ಪತಿ ರಣವೀರ್ ಸಿಂಗ್ ಅವರೊಂದಿಗೆ ದೀಪಿಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ನೆಕ್ಸ್ಟ್‌ ದೀಪಿಕಾ ಪಡುಕೋಣೆ 'ಗೆಹ್ರಾಯನ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ದೀಪಿಕಾ ಹೃತಿಕ್ ರೋಷನ್ ಎದುರು ಸಿದ್ಧಾರ್ಥ್ ಆನಂದ್ ಅವರ ಫೈಟರ್, ಶಾರುಖ್ ಖಾನ್ ಜೊತೆ ಪಠಾಣ್‌ ಹಾಗೂ ಮುಂತಾದ ಕೆಲವು ದೊಡ್ಡ-ಬಜೆಟ್ ಚಿತ್ರಗಳಲ್ಲಿ ನಟಿಸಲಿದ್ದಾರೆ.

Latest Videos

click me!