Oo Antava Song Samantha Remuneration: 3 ನಿಮಿಷದ ಹಾಡಿಗೆ 5 ಕೋಟಿ ಪಡೆದ ಸಮಂತಾ

Published : Jan 17, 2022, 05:04 PM IST

ಅಲ್ಲು ಅರ್ಜುನ್ (Allu Arjun) ಅವರ ಪುಷ್ಪಾ(Pushpa) ಸಿನಿಮಾದಲ್ಲಿನ ಸಮಂತಾ ರುತ್ ಪ್ರಭು (Samantha Ruth Prabhu) ಅವರ  ಊ ಅಂತಾವ ಊ ಊ ಅಂತಾವ (Oo Antava)ಹಾಡು ಸಖತ್‌ ವೈರಲ್‌ ಆಗಿದೆ. ಮೂರು ನಿಮಿಷದ ಹಾಡಿಗೆ ಸಮಂತಾ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ. ಇದು ನಿಜನಾ? ಮಾಹಿತಿಗಾಗಿ ಮುಂದೆ ಓದಿ.

PREV
17
Oo Antava Song Samantha Remuneration: 3 ನಿಮಿಷದ ಹಾಡಿಗೆ 5 ಕೋಟಿ ಪಡೆದ ಸಮಂತಾ

ದಕ್ಷಿಣದ ನಟಿ ಸಮಂತಾ ರುತ್ (Samantha Ruth Prabhu) ಪ್ರಭು ವಿಚ್ಚೇದನೆಯಿಂದಾಗಿ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಅದಲ್ಲದೆ ದಿ ಫ್ಯಾಮಿಲಿ ಮ್ಯಾನ್ 2 ಯಶಸ್ಸಿನ ನಂತರ ಹೊಸ ಪ್ರಾಜೆಕ್ಟ್‌ ಮತ್ತು ಸಿನಿಮಾಗಳನ್ನು ಪಡೆಯುತ್ತಿದ್ದಾರೆ.

27

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅವರ ಬ್ಲಾಕ್‌ಬಸ್ಟರ್ ಚಿತ್ರ ಪುಷ್ಪಾ ಸಿನಿಮಾದಲ್ಲಿ ಸಮಂತಾ ಭಾಗವಾಗಿದ್ದರು. ಸಮಂತಾ ಅವರು ಸಿಜ್ಲಿಂಗ್ ಡ್ಯಾನ್ಸ್ ಸಾಂಗ್ ಅನ್ನು ಒಳಗೊಂಡಿರುವ ಹಾಡು ಊ ಅಂತಾವಾ ಊ ಊ ಅಂತಾವಾ' ಎಂಬ ಹಾಡು ಚಾರ್ಟ್‌ಬಸ್ಟರ್ ಆಗಿ ಮಾರ್ಪಟ್ಟಿದೆ ಮತ್ತು 

37

ಈ ಐಟಂ ಸಾಂಗ್‌ ಯೂಟ್ಯೂಬ್‌ನ ಟಾಪ್ 10 ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಸಮಂತಾ ಅವರ ಮಾದಕ ಸ್ಟೆಪ್ಸ್‌ಗಳು ಮತ್ತು ಅಲ್ಲು ಅರ್ಜುನ್ ಜೊತೆಗಿನ ಅವರ ನೃತ್ಯದ ಹೆಜ್ಜೆಗಳು ಹಾಡಿನ ಹೈಲೈಟ್ ಆಗಿದ್ದು, ಸಮಂತಾ ಅವರ ಹೊಸ ಅವತಾರವನ್ನು ನೋಡಿ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ ಮತ್ತು ಅಭಿನಯವನ್ನು ಪ್ರಶಂಸಿಸಿದ್ದಾರೆ. 

47

ಇಷ್ಟೇ ಅಲ್ಲ ಕೆಲವು ಸೆಲೆಬ್ರಿಟಿಗಳು ಸಹ ಮೆಚ್ಚುಗೆ ಸೂಚಿಸಿದ್ದಾರೆ. ಕೃತಿ ಸನೋನ್ ಸಮಂತಾ ಅವರ ಕೆಲಸನ್ನು ಶ್ಲಾಘಿಸಿದ್ದಾರೆ. ಸಂಜೀದಾ ಶೇಖ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ.
 

57

ವರದಿಗಳ ಪ್ರಕಾರ, ಅಲ್ಲು ಅರ್ಜುನ್ ಖುದ್ದು ಸಮಂತಾಗೆ ನೃತ್ಯದ ಬಗ್ಗೆ ಮನವರಿಕೆ ಮಾಡಿದ್ದಾರೆ. ಆಕೆಯ ಡ್ಯಾನ್ಸ್ ನಂಬರ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ  ಹಿನ್ನಡೆಯಾದಾಗ ಅವರು ಸಮಂತಾರನ್ನು ಬೆಂಬಲಿಸಿದರು. ಮೂರು ನಿಮಿಷದ ಹಾಡಿಗೆ ಆಕೆ 5 ಕೋಟಿ ರೂಪಾಯಿ ಚಾರ್ಜ್ ಮಾಡಿದ್ದಾರೆ ಎಂದು ಇತ್ತೀಚಿನ ಸುದ್ದಿ ಹೇಳುತ್ತಿದೆ.
 
 

67

ಜನಪ್ರಿಯ ಮನರಂಜನಾ ಪತ್ರಕರ್ತ ಸುಭಾಷ್ ಕೆ ಝಾ ಅವರಿಗೆ ಒಂದು ಮೂಲವು ಅಲ್ಲು ಅರ್ಜುನ್ ಅವರು ಸಮಂತಾ ಅವರನ್ನು ಹಾಡಿಗೆ ಒಪ್ಪಿಸಿದರು ಎಂದು ಹೇಳಿದೆ. ಈ ಹಾಡಿಗೆ ನಿರ್ಮಾಪಕರು ಆಕೆಗೆ ಸುಮಾರು 5 ಕೋಟಿ ರೂಪಾಯಿ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ

77

ಸುದ್ದಿ ಪ್ರಕಾರ, ಪುಷ್ಪಾ 2 ಗಾಗಿ ಮತ್ತೊಂದು ವಿಶೇಷ  ಹಾಡಿಗೆ ಸಮಂತಾ ಅವರನ್ನು ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ. ಆದರೆ, ಯಾವುದೇ ಅಧಿಕೃತ ದೃಢೀಕರಣಗಳಿಲ್ಲ. ಸಮಂತಾ ತನ್ನ ಆಕೌಂಟ್‌ನಲ್ಲಿ ಕೆಲವು ಉತ್ತಮ ಪ್ರಾಜೆಕ್ಟ್‌ಗಳನ್ನು ಹೊಂದಿದ್ದಾರೆ. ಅದರಲ್ಲಿ ಕಾತುವಾಕುಲ ರೆಂದು ಕಾದಲ್, ನಯನತಾರಾ ಮತ್ತು ವಿಜಯ್ ಸೇತುಪತಿ, ಅವರ ಮೊದಲ ಅಂತರರಾಷ್ಟ್ರೀಯ ಚಿತ್ರ, ಅರೇಂಜ್‌ಮೆಂಟ್ಸ್ ಆಫ್ ಲವ್ ಮತ್ತು ತಾಪ್ಸಿ ಪನ್ನು ಜೊತೆಗಿನ ಹಿಂದಿ ಚಿತ್ರ ಸೇರಿವೆ.

Read more Photos on
click me!

Recommended Stories