Bollywood Life: ಅಕ್ಷಯ್ ಕಾರಣಕ್ಕೆ ಟ್ವಿಂಕಲ್‌ಗೆ ಕಪಾಳಮೋಕ್ಷ ಮಾಡಲಿದ್ದ ಆಮೀರ್‌!

First Published | Nov 27, 2021, 9:10 PM IST

ಪ್ರಸ್ತುತ ಬಾಲಿವುಡ್ (Bollywood) ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಿನಿಮಾಗಳನ್ನು ಹೊಂದಿರುವ ಏಕೈಕ ಸ್ಟಾರ್ ಅಕ್ಷಯ್ ಕುಮಾರ್ (Akshay Kumar). ಅವರು ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣವನ್ನು ನಿರಂತರವಾಗಿ ನಡೆಸುತ್ತಿದ್ದಾರೆ ಮತ್ತು ಅವರ ಚಿತ್ರಗಳು ಒಂದರ ನಂತರ ಒಂದರಂತೆ ಬಿಡುಗಡೆಯಾಗುತ್ತಿವೆ. ಇತ್ತೀಚೆಗಷ್ಟೇ ಅವರ ಸೂರ್ಯವಂಶಿ ಚಿತ್ರ ಬಿಡುಗಡೆಯಾಗಿದ್ದು, ಚಿತ್ರಮಂದಿರಗಳಲ್ಲಿ ಸದ್ದು ಮಾಡುತ್ತಿದೆ. ಅದೇ ಸಮಯದಲ್ಲಿ, ಅವರ ಅತ್ರಾಂಗಿ ರೇ ಚಿತ್ರದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ, ಇದು ಸಾಮಾಜಿಕ ಮಾಧ್ಯಮದಲ್ಲಿ ಅದ್ಭುತ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಅಂದಹಾಗೆ, ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ (Twinkle Khanna) ಜೋಡಿ ನಿಜ ಜೀವನದಲ್ಲೂ ಸೂಪರ್ ಹಿಟ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ದಂಪತಿ ಸುಮಾರು 20 ವರ್ಷಗಳಿಂದ ಜೊತೆಯಾಗಿಯೇ ಇದ್ದಾರೆ. ಈ ನಡುವೆ ಟ್ವಿಂಕಲ್ ಅವರ ಸಂದರ್ಶನವು ವೈರಲ್ ಆಗುತ್ತಿದೆ, ಅದರಲ್ಲಿ ಅವರು ಕೆಲವು ಶಾಕಿಂಗ್‌ ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ. ಅಕ್ಷಯ್ ಕುಮಾರ್‌ನಿಂದಾಗಿ ಅಮೀರ್ ಖಾನ್ (Aamir Khan) ಟ್ವಿಂಕಲ್ ಖನ್ನಾಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು ಎಂದು ನಟಿ ರೀವಿಲ್‌ ಮಾಡಿದ್ದಾರೆ. ಈ ಘಟನೆಗೆ  ಕಾರಣವೇನು ಎಂಬುದನ್ನು ಕೆಳಗೆ ಓದಿ.
 

ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಖನ್ನಾ ಅವರ ಬಾಲಿವುಡ್ ವೃತ್ತಿ ಜೀವನವು ಫ್ಲಾಪ್ ಆಗಿತ್ತು. ಅವರು ಅನೇಕ ಹಿಟ್ ಚಿತ್ರಗಳಲ್ಲಿ ನಟಿಸಿದ್ದರೂ, ಸಿನಿಮಾಗಳು ಹಿಟ್ ಆಗಿದ್ದು ಅವರ ಹೆಸರಿನಿಂದಲ್ಲ. ಅವರ ಸಹನಟರಿಂದ. 8 ವರ್ಷಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ ಅವರು ನಂತರ ಸ್ವತಃ ನಟನೆಗೆ ವಿದಾಯ ಹೇಳಿದರು.

ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಇಂಟರ್ನ್ಯಾಷನಲ್ ಕಿಲಾಡಿ ಚಿತ್ರದ ಶೂಟಿಂಗ್ ಸಮಯದಲ್ಲಿ ಭೇಟಿಯಾದರು. ಚಿತ್ರದ ಶೂಟಿಂಗ್ ವೇಳೆ ಇಬ್ಬರೂ ಹತ್ತಿರವಾಗಿದ್ದರು. ಅಕ್ಷಯ್ ಕೂಡ ಟ್ವಿಂಕಲ್ ಅನ್ನು ಇಷ್ಟಪಟ್ಟರು ಮತ್ತು ಅವರು ತಕ್ಷಣವೇ  ಟ್ವಿಂಕಲ್‌ಗೆ ಪ್ರಪೋಸ್‌ ಮಾಡಿದ್ದರು.

Tap to resize

ಅಕ್ಷಯ್ ಕುಮಾರ್ ಅನ್ನು ಪ್ರಪೋಸ್‌ ಮಾಡಿದ ನಂತರ, ಟ್ವಿಂಕಲ್ ಯಾವಾಗಲೂ ಅವರದೇ ಯೋಚನೆಯಲ್ಲಿ ಕಳೆದು ಹೋಗಿದ್ದರು. ಅವರು ತಮ್ಮ ಬುಕ್ ಬಿಡುಗಡೆ ಸಮಾರಂಭದಲ್ಲಿ ಇದಕ್ಕೆ ಸಂಬಂಧಿಸಿದ ಘಟನೆಯೊಂದನ್ನು ವಿವರಿಸಿದರು. ಈ ಸಂದರ್ಭದಲ್ಲಿ ಅಮೀರ್ ಖಾನ್ ಕೂಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕರಣ್ ಜೋಹರ್ ಅವರು ಟ್ವಿಂಕಲ್ ಜೊತೆಗಿನ ಬಾಂಧವ್ಯದ ಬಗ್ಗೆ ಅಮೀರ್ ಅವರನ್ನು ಕೇಳಿದರು.

ನೀವು ಏನು ಮಾಡುತ್ತಿದ್ದೀರಿ, ಏಕೆ ಈ ರೀತಿ ವರ್ತಿಸುತ್ತಿದ್ದೀರಿ? ನೀವು ನಿಮ್ಮ ಕೆಲಸದ ಮೇಲೆ ಏಕೆ ಗಮನ ಹರಿಸುವುದಿಲ್ಲ?ಎಂದು ಅಮೀರ್ ನನ್ನನ್ನು ಕೇಳಿದ್ದರು. ಆಗ ನಾನು ಉತ್ತರಿಸಿದೆ, ನಾನು ಅಕ್ಷಯ್ ಬಗ್ಗೆ ಮಾತ್ರ ಯೋಚಿಸುತ್ತೇನೆ. ಇದನ್ನು ಕೇಳಿದ ಅಮೀರ್ ನನಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದರು, ಎಂದು ಕರಣ್‌ ಜೋಹರ್‌ ಪ್ರಶ್ನೆಗೆ ಅಮೀರ್ ಖಾನ್ ಬದಲಿಗೆ, ಟ್ವಿಂಕಲ್ ಉತ್ತರಿಸಿದರು.  

ತನ್ನ ಪೋಷಕರಂತೆ, ಟ್ವಿಂಕಲ್ ಕೂಡ ತಮ್ಮ ಕೆರಿಯರ್‌ಗಾಗಿ ನಟನಾ ಕ್ಷೇತ್ರವನ್ನು ಆರಿಸಿಕೊಂಡರು. ಅವರು 1995 ರ ಬರ್ಸಾತ್ ಚಲನಚಿತ್ರದೊಂದಿಗೆ ಉದ್ಯಮವನ್ನು ಪ್ರವೇಶಿಸಿದರು.  ಬಾಬಿ ಡಿಯೋಲ್ ಈ ಸಿನಿಮಾದ ನಾಯಕರಾಗಿದ್ದರು ಮತ್ತು ಇದು ಬಾಬಿ ಅವರ ಚೊಚ್ಚಲ ಚಿತ್ರವೂ ಆಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ಅದರೆ ನಂತರದ ಅವರ ಯಾವುದೇ ಸಿನಿಮಾಗಳು  ಅವರಿಗರ ಹೆಸರು ತಂದು ಕೊಡುವಲ್ಲಿ ವಿಫಲವಾದವು.

ಕೆಲವು ತಿಂಗಳ ಹಿಂದೆ, ಟ್ವಿಂಕಲ್ ಅವರು ತಮ್ಮ ವೃತ್ತಿ ಜೀವನದ ಬಗ್ಗೆ ಮತ್ತು ಅವರು ಚಲನಚಿತ್ರಗಳನ್ನು ತೊರೆದ ಕಾರಣಗಳ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದರು. 'ನಾನು ಮೊದಲಿನಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದೆ ಮತ್ತು ನಾನು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸಿದ್ದೆ. ಆದರೆ ವಿಧಿಯು ಬೇರೆಯದನ್ನು ಮನಸ್ಸಿನಲ್ಲಿಟ್ಟು ಕೊಂಡಿದ್ದರಿಂದ ಇದು ಸಾಧ್ಯವಾಗಲಿಲ್ಲ' ಎಂದು  ಅವರು ಹೇಳಿದರು.

ನನ್ನ ಜೀವನದಲ್ಲಿ ದೊಡ್ಡ ಸಮಸ್ಯೆ ಎಂದರೆ ನನ್ನ ತಂದೆ-ತಾಯಿ ಇಬ್ಬರೂ ದೊಡ್ಡ ಬಾಲಿವುಡ್ ತಾರೆಗಳಾಗಿದ್ದರು ಮತ್ತು ಅದಕ್ಕಾಗಿಯೇ ಅವರು ನಟನೆಯನ್ನು ಹೊರತುಪಡಿಸಿ ಬೇರೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಕಷ್ಟಪಡುತ್ತಿದ್ದರು. ತಮ್ಮ ತಾಯಿ ಡಿಂಪಲ್‌ನಿಂದಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು ಎಂದೂ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.

8 ವರ್ಷಗಳ ಕಾಲ ನಿರಂತರವಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, ನಾನು ನಟಿಯಾಗಿ ಸಂಪೂರ್ಣವಾಗಿ ವಿಫಲವಾಗಿದ್ದೇನೆ ಎಂದು ನನಗೆ ಅನಿಸಿತು. ಆದರೆ ನಾನು ಬೇರೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅರ್ಥವಲ್ಲ ಎಂದು ಟ್ವಿಂಕಲ್ ಮತ್ತಷ್ಟು ಹೇಳಿದರು. ನಟಿ ಬರವಣಿಗೆಯಲ್ಲಿ ತಮ್ಮ ಅದೃಷ್ಟವನ್ನು ಟ್ರೈ ಮಾಡಿ ಯಶಸ್ಸು ಸಹ  ಪಡೆದರು. ಇಲ್ಲಿಯವರೆಗೆ ಅವರ ಅನೇಕ ಪುಸ್ತಕಗಳು ಪ್ರಕಟವಾಗಿವೆ.

ಸಿನಿಮಾ ಕೆರಿಯರ್‌ನಲ್ಲಿ ಯಶಸ್ಸು ಸಿಗದೆ ಇದ್ದಾಗ  ಟ್ವಿಂಕಲ್ ಚಲನಚಿತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದರು. ಅವರ ಪತಿ ಅಕ್ಷಯ್ ಕುಮಾರ್ ನಟಿಸಿರುವ ಸಿನಿಮಾಗಳನ್ನು ಅವರು ಹೆಚ್ಚಾಗಿ ನಿರ್ಮಿಸುತ್ತಾರೆ. ಪಟಿಯಾಲ ಹೌಸ್, ಪ್ಯಾಡ್ ಮ್ಯಾನ್, ತೀಸ್ ಮಾರ್ ಖಾನ್, ಧನ್ಯವಾದ, ಖಿಲಾಡಿ 786, ಹಾಲಿಡೇ ಅವರು ನಿರ್ಮಿಸಿದ ಚಿತ್ರಗಳು.

ಅಕ್ಷಯ್-ಟ್ವಿಂಕಲ್ ಜನವರಿ 2001 ರಲ್ಲಿ ವಿವಾಹವಾದರು. ಟ್ವಿಂಕಲ್ 2002 ರಲ್ಲಿ ಮಗ ಆರವ್‌ಗೆ ಜನ್ಮ ನೀಡಿದರು ಮತ್ತು ಮಗಳು ನಿತಾರಾ 2012 ರಲ್ಲಿ ಜನಿಸಿದರು. ಅಕ್ಷಯ್ ಕುಮಾರ್ ತಮ್ಮ ರಾಮಸೇತು ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

 ಅವರು OMG 2  ಶೂಟಿಂಗ್‌ ಸಹ ಪ್ರಾರಂಭಿಸಲಿದ್ದಾರೆ. ಅವರ ಹಲವು ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ. ಪೃಥ್ವಿರಾಜ್, ರಕ್ಷಾಬಂಧನ್, ಬಚ್ಚನ್ ಪಾಂಡೆ, ಸಿಂಡ್ರೆಲಾ ಮುಂತಾದ ಫಿಲ್ಮಂಗಳಲ್ಲಿ ಅವರು ಕಾಣಿಸಿ ಕೊಳ್ಳಲಿದ್ದಾರೆ.

Latest Videos

click me!