ಬಾಲಿವುಡ್ ಸೆಲೆಬ್ರೆಟಿಗಳ ಏರ್ಪೋರ್ಟ್ ಲುಕ್ ಸಖತ್ ಫೇಮಸ್. ಇತ್ತೀಚಿಗೆ ವಿಮಾನ ನಿಲ್ದಾಣದ ಲುಕ್ ಟ್ರೆಂಡ್ ಅನ್ನು ಅನುಸರಿಸದ ತಾರೆಯರು ಯಾರೂ ಇಲ್ಲ. ಇದಕ್ಕೆ ಕತ್ರಿನಾ ಕೈಫ್ ಕೂಡ ಹೊರತಾಗಿಲ್ಲ.
ನಿನ್ನೆ ಮುಂಬೈನ ಕತ್ರಿನಾ ಕೈಫ್ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆದರೆ ಅವರ ವಿಮಾನ ನಿಲ್ದಾಣದ ನೋಟ ಅಭಿಮಾನಿಗಳಿಗೆ ಹಿಡಿಸಲೇ ಇಲ್ಲ.
ಕತ್ರಿನಾ ಕೈಫ್ ಕೋ-ಆರ್ಡ್ ಸೆಟ್ ಧರಿಸಿದ್ದರು ಮತ್ತು ಅದರ ಮೇಲೆ ಡೆನಿಮ್ ಜಾಕೆಟ್ ಧರಿಸಿದ್ದರು. ಆದರೆ ಜಾಕೆಟ್ ಅನ್ನು ಸಂಪೂರ್ಣವಾಗಿ ಭುಜದ ಮೇಲೆ ಧರಿಸದೇ, ಅಫ್ ಶೋಲ್ಡರ್ ಮಾಡಿಕೊಂಡಿದ್ದರು.
ಕತ್ರಿನಾರ ಈ ಆಫ್-ಶೋಲ್ಡರ್ ಜಾಕೆಟ್ ಲುಕ್ ಅನ್ನು ನೆಟಿಜನ್‌ಗಳಿಗೆ ಇರಿಸು ಮುರಿಸು ತಂದಿದೆ. ನಟಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. 'ಜಾಕೆಟ್ ಧರಿಸುವ ಉದ್ದೇಶ ಏನು?' ಎಂದು ಕಾಮೆಂಟ್ ಮಾಡಿ ಕಾಲೆಳೆದರು.
ಮುಂದಿನ ದಿಗಳಲ್ಲಿ ನಟಿ ವಿಜಯ್ ಸೇತುಪತಿ ಜೊತೆ ಮೇರಿ ಕ್ರಿಸ್ಮಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಅವರು ಸಲ್ಮಾನ್ ಖಾನ್ ಅವರೊಂದಿಗೆ ಟೈಗರ್ 3 ರಲ್ಲಿ ನಟಿಸುತ್ತಿದ್ದಾರೆ. ಇವೆರಡೂ ಬಹು ನಿರೀಕ್ಷಿತ ಸಿನಿಮಾಗಳು.