ನಿಜವಾದ ವಯಸ್ಸು ಮುಚ್ಚಿಟ್ಟ ಮಲೈಕಾ ಅರೋರಾ ಸಿಕ್ಕಾಪಟ್ಟೆ ಟ್ರೋಲ್‌

First Published | Oct 24, 2023, 3:32 PM IST

ಮಲೈಕಾ ಅರೋರಾ  (Malaika Arora) ಬಾಲಿವುಡ್‌ನ ಹಾಟ್‌ ಹಾಗೂ ಫಿಟ್‌ ದಿವಾ.  ಮದುವೆ ಮತ್ತು ಮಕ್ಕಳ ನಂತರವೂ ಸಹ ನಟಿಯಾಗಿ ತನ್ನ ಕೆಲಸ ಮುಂದುವರೆಸಬಹುದು ಎನ್ನುವುದಕ್ಕೆ ಬೆಸ್ಟ್‌ ಉದಾಹರಣೆಯಾಗಿದ್ದಾರೆ. ಆದರೆ ಮಲೈಕಾ ತಮ್ಮ ನಿಜವಾದ ವಯಸ್ಸನ್ನು ಮುಚ್ಚಿಟ್ಟಿದ್ದಾರೆ ಎಂದು ಟ್ರೋಲ್‌ಗೆ ಗುರಿಯಾಗಿದ್ದಾರೆ. ಹಾಗಾದರೆ ನೆಟಿಜನ್ಸ್‌ ಪ್ರಕಾರ ಮಲೈಕಾರ ನಿಜ ವಯಸ್ಸೇಷ್ಟು ಗೊತ್ತಾ? 

ದಿಲ್‌ಸೇ ಸಿನಿಮಾದಲ್ಲಿ ಶಾರುಖ್‌ ಜೊತೆ  ಚೈಯಾ ಚೈಯಾ ಡ್ಯಾನ್ಸ್‌ಗೆ ಹೆಜ್ಜೆ ಹಾಕುವ ಮೂಲಕ ಪ್ರಾಮುಖ್ಯತೆಗೆ ಏರಿದ ಮಲೈಕಾ ಅರೋರಾ ಅಂದಿನಿಂದ ಲೈಮ್‌ಲೈಟ್‌ನಲ್ಲಿ ಇದ್ದಾರೆ.

ತಮ್ಮ ಬೆರಗುಗೊಳಿಸುವ  ಸೌಂದರ್ಯ ಮತ್ತು ವರ್ಕೌಟ್ ವೀಡಿಯೊಗಳಿಂದ ವಯಸ್ಸು ಅವರಿಗೆ ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ.

Tap to resize

ಮಲೈಕಾ ತನ್ನ ಜನ್ಮದಿನವನ್ನು ಅಕ್ಟೋಬರ್ 23 ರಂದು ಆಚರಿಸಿಕೊಂಡರು. ಅವರು ತನ್ನ 48 ನೇ ಹುಟ್ಟುಹಬ್ಬಕ್ಕೆ ಒಂದು ಸುಂದರವಾದ Instagram ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
 

ಮಲೈಕಾ ಅರೋರಾ ಅವರು ಅಕ್ಟೋಬರ್ 23 ರಂದು ತಮ್ಮ ಹುಟ್ಟುಹಬ್ಬದ ಪಾರ್ಟಿಯ ಕೆಲವು ಕ್ಯಾಂಡಿಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನಗೆ 48 ವರ್ಷ ವಯಸ್ಸಾಗಿದೆ ಎಂದು ಮಲೈಕಾ ಪೋಸ್ಟ್ ಮಾಡಿದ್ದು, ಅದು ಹೆಚ್ಚು ಗಮನ ಸೆಳೆದಿದೆ. 

ಆದರೆ ಹುಟ್ಟುಹಬ್ಬದ ಪೋಸ್ಟ್ ನೋಡಿದ ನಂತರ  ಮಲೈಕಾ ಆರೋರಾ ತನ್ನ ನಿಜವಾದ ವಯಸ್ಸನ್ನು ಆಕೆ ಮರೆಮಾಚಿದ್ದಾರೆ ಎಂದು ನೆಟಿಜನ್ಸ್‌ ಆರೋಪಿಸಿದ್ದಾರೆ.

ಗೂಗಲ್ ಪ್ರಕಾರ, ಅರೋರಾ 1973 ರಲ್ಲಿ ಜನಿಸಿದರು ಮತ್ತು  ಆಕೆಗೆ 50 ವರ್ಷ. ಈ ಅಂಶ ರೆಡ್ಡಿಟ್‌ನಲ್ಲಿ ವಿವಾದವನ್ನು ಹುಟ್ಟು ಹಾಕಿತು. ಬಳಕೆದಾರರು ಮಲೈಕಾ ಅವರ ಹುಟ್ಟುಹಬ್ಬದ ಸಂದೇಶದ ಫೋಟೋವನ್ನುಹಂಚಿಕೊಂಡು, ಅವರ ನಿಜವಾದ ವಯಸ್ಸು 50 ಎಂದು ಬಹಿರಂಗಪಡಿಸಿದರು. 

ಅನೇಕ ಜನರು ತಮ್ಮ ಅಭಿಮಾನಿಗಳನ್ನು ಮೂರ್ಖರನ್ನಾಗಿಸಿದ್ದಕ್ಕಾಗಿ ಮಲೈಕಾರ ಅರೋರಾನ್ನು ದೂರಿ ಕಾಮೆಂಟ್ ಹಾಗೂ ಟ್ರೋಲ್‌ ಮಾಡಿದ್ದಾರೆ.

'ಅವರು ವಿಕಿ ಪ್ರಕಾರ 50 ವರ್ಷಗಳನ್ನು ಪೂರೈಸುತ್ತಾರೆ ಮತ್ತು ಅರ್ಜುನ್‌ಗಿಂತ 12 ವರ್ಷ ದೊಡ್ಡವರು. ಅವರು ಸುಂದರವಾಗಿದ್ದಾಳೆ ಆದರೆ ಅದನ್ನು ಮರೆಮಾಡಲು ಮತ್ತು ನಿರೂಪಣೆಯನ್ನು ಬದಲಿಸುವ ಮೂಲಕ ಜನರಿಗೆ ಏಕೆ ಮೂರ್ಖರನ್ನಾಗಿ ಮಾಡಬೇಕು' ಎಂದು ಬಳಕೆದಾರರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರರು 'ಅವರ ಮತ್ತು ಆಕೆಯ ಗೆಳೆಯ ಅರ್ಜುನ್ ಕಪೂರ್ ಅವರ ವಯಸ್ಸಿನ ಅಂತರವನ್ನು ಗೇಲಿ ಮಾಡಿದರು ಮತ್ತು'ಒಂದು ವದಂತಿಯು ನಿಜವೇ ಎಂದು ಖಚಿತವಾಗಿಲ್ಲ, ಅವರು ಅರ್ಜುನ್ 48 ಕ್ಕೆ ತಲುಪಲು ಕಾಯುತ್ತಿದ್ದಾರೆ, ಇನ್ನೂ 8 ವರ್ಷಗಳು ಬಾಕಿ ಇವೆ' ಎಂದು ಕಾಮೆಂಟ್‌ ಮಾಡಿದ್ದಾರೆ.

'ಮಲೈಕಾ ಅರ್ಬಾಜ್‌ಗಿಂತ ಎರಡು ವರ್ಷ ದೊಡ್ಡವಳು ಎಂದು ಮತ್ತೊಬ್ಬರು ಹೇಳಿದ್ದಾರೆ ಮತ್ತು ಅರ್ಬಾಜ್ ಖಾನ್ 56 ವರ್ಷ ವಯಸ್ಸಿನವರಾಗಿದ್ದರೆ ಮತ್ತು ಅವರು ತನಗಿಂತ 2 ವರ್ಷ ದೊಡ್ಡವರು ಎಂದು ಒಪ್ಪಿಕೊಂಡರೆ, ಅದು ಅವಳಿಗೆ 58 ವರ್ಷ, ನಿಮ್ಮ ವಯಸ್ಸನ್ನು ಸುಳ್ಳು ಮಾಡುವುದರಲ್ಲಿ ಏನಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. 

'ಆದರೆ ನೀವು ಕಳೆದ ವರ್ಷ 49 ನೇ ಹುಟ್ಟುಹಬ್ಬವನ್ನು ಆಚರಿಸಿದ್ದೀರಿ' ಎಂದು ಇನ್ನೊಬ್ಬ ವ್ಯಕ್ತಿ ಹೇಳಿದರು. 'ಆದರೆ ಗೂಗಲ್ ನಿಮಗೆ 50 ವರ್ಷ ಎಂದು ಹೇಳುತ್ತದೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ಮಲೈಕಾ ಅವರ ವಿಕಿಪೀಡಿಯಾ ಮಾಹಿತಿಯ ಪ್ರಕಾರ, ಅವರು 50 ವರ್ಷಕ್ಕೆ ಕಾಲಿಟ್ಟಿದ್ದಾರೆ ಮತ್ತು 48 ಅಲ್ಲ' ಎಂದಿದ್ದಾರೆ ಇನ್ನೊರ್ವ ಬಳಕೆದಾರ.

ಅರ್ಜುನ್ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಸುಂದರವಾದ ಫೋಟೋದ ಜೊತೆ ಮಲೈಕಾರ ಬರ್ತ್‌ಡೆಗೆ  ಸಿಹಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.'ಹ್ಯಾಪಿ ಬರ್ತ್‌ಡೇ ಬೇಬಿ. ಈ ಫೋಟೋ ನಮ್ಮದು. ನಿಮ್ಮ ನಗು, ಸಂತೋಷ, ಬೆಳಕನ್ನು ತರುತ್ತೀರಿ ಮತ್ತು ಗೊಂದಲದ ನಡುವೆಯೂ ನಾನು ಯಾವಾಗಲೂ ನಿಮ್ಮ ಬೆಂಬಲ ಹೊಂದಿದ್ದೇನೆ' ಎಂದು ಅವರು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ. 

Latest Videos

click me!